ಆ್ಯಪಲ್ ಇಯರ್‌ಬಡ್ಸ್: ಈ ಅಮೆಜಾನ್‌ನ ಹೋಳಿ ಸೇಲ್‌ನಲ್ಲಿ ಪ್ರಮುಖವಾಗಿ ಎರಡನೇ ತಲೆಮಾರಿನ ಏರ್‌ಪಾಡ್‌ಗಳನ್ನು ಭಾರೀ ರಿಯಾಯಿತಿಯಲ್ಲಿ ಖರೀದಿ ಮಾಡಬಹುದಾಗಿದೆ. ಇದರಲ್ಲಿ ಆ್ಯಪಲ್ ಇಯರ್‌ಬಡ್ಸ್ ಮೂಲ ದರ 14,900 ರೂ. ಗಳ ಬೆಲೆ ಹೊಂದಿದ್ದು, ಇದನ್ನು ನೀವು ಈ ಆಫರ್‌ನೊಂದಿಗೆ ಅಮೆಜಾನ್ನಲ್ಲಿ ಕೇವಲ 11,990 ರೂ. ಗಳಿಗೆ ಖರೀದಿ ಮಾಡಬಹುದು. ಈ ಮೂಲಕ ಈ ಬಡ್ಸ್‌ಗೆ 2,910 ರೂ. ಗಳ ರಿಯಾಯಿತಿ ಲಭ್ಯ.
ಸ್ಯಾಮ್‌ಸಂಗ್ ಇಯರ್‌ಬಡ್ಸ್: ಇನ್ನು ಟೆಕ್ ದೈತ್ಯ ಎನಿಸಿಕೊಂಡಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ ಸಹ ಹೆಚ್ಚಿನ ರಿಯಾಯಿತಿ ಪಡೆದುಕೊಂಡಿದ್ದು, ಇದರ ಮೂಲ ದರ 10,999 ರೂ. ಗಳಾಗಿದೆ. ಆದರೆ, ಅಮೆಜಾನ್ ಆಫರ್‌ನಲ್ಲಿ ನೀವು 5,999 ರೂ. ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ಮೂಲಕ ಐದು ಸಾವಿರ ರೂ.ಗಳ ರಿಯಾಯಿತಿ ನಿಮಗೆ ಲಭ್ಯವಿದೆ. ಈ ಇಯರ್‌ಬಡ್ಸ್ ಸಹ ಅತ್ಯುತ್ತಮ ಬೇಸ್ ಆಯ್ಕೆ ಹಾಗೂ ನಾಯ್ಸ್ ಕ್ಯಾನ್ಸಲಿಂಗ್ ಫೀಚರ್ ಬೆಂಬಲವನ್ನು ಸಹ ಪಡೆದುಕೊಂಡಿದೆ.