FAU-G : ಪಬ್ಜಿಗೆ ಪರ್ಯಾಯವಾಗಿ ಫೌಜಿ ಗೇಮ್ ಪರಿಚಯಿಸಿದ ನಟ ಅಕ್ಷಯ್ ಕುಮಾರ್
ಈ ಹಿಂದೆ ಗಲ್ವಾನ್ ಕಣಿವೆಯಲ್ಲಿ ಗಡಿ ವಿವಾದದ ಬಳಿಕ ಕೇಂದ್ರ ಸರ್ಕಾರವು ಚೀನಾದ 106 ಆ್ಯಪ್ಗಳನ್ನು ನಿಷೇಧಿಸಿತ್ತು. ಇದರಲ್ಲಿ ಜನಪ್ರಿಯ ಅಪ್ಲಿಕೇಶನ್ಗಳಾದ ಟಿಕ್ಟಾಕ್, ವಿ-ಚಾಟ್, ಯುಸಿ ಬ್ರೌಸರ್, ಯುಸಿ ನ್ಯೂಸ್ ಮುಂತಾದ ಅಪ್ಲಿಕೇಶನ್ಗಳು ಸೇರಿದ್ದವು.
ಕೇಂದ್ರ ಸರ್ಕಾರ ಬುಧವಾರ 118 ಆ್ಯಪ್ಗಳನ್ನು ಬ್ಯಾನ್ ಮಾಡಿತ್ತು. ದೇಶದ ಸುರಕ್ಷತೆಯನ್ನು ಗಮನದಲ್ಲಿರಿಸಿ ನಿಷೇಧಿಸಲಾದ ಈ ಅಪ್ಲಿಕೇಶನ್ಗಳಲ್ಲಿದ್ದ ಬಹುತೇಕ ಆ್ಯಪ್ ಚೀನಾ ಮೂಲದ್ದು. ಅಲ್ಲದೆ ವಿಶ್ವದ ಜನಪ್ರಿಯ ಆ್ಯಪ್ ದಕ್ಷಿಣ ಕೊರಿಯಾದ ಪಬ್ಜಿ ಕೂಡ ಈ ಪಟ್ಟಿಯಲ್ಲಿತ್ತು.
2/ 8
ಪಬ್ಜಿ ಬ್ಯಾನ್ ಆದ ಬೆನ್ನಲ್ಲೇ ಹಲವು ಗೇಮ್ ಪ್ರಿಯರು ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ತೋಡಿಕೊಂಡಿದ್ದರು. ಆದರೀಗ ಪಬ್ಜಿಗೆ ಬದಲಾಗಿ ನಟ ಅಕ್ಷಯ್ ಕುಮಾರ್ FAU: G (ಫಿಯರ್ಲೆಸ್ ಮತ್ತು ಯುನೈಟೆಡ್: ಗಾರ್ಡ್ಸ್ (FAU: G) ಎನ್ನುವ ಗೇಮಿಂಗ್ ಆ್ಯಪ್ ಪರಿಚಯಿಸಿದ್ದಾರೆ.
3/ 8
FAU: G (ಸೇನೆ) ಹೆಸರಿನ ಈ ಅಪ್ಲಿಕೇಶನ್ ಕೂಡ ಪಬ್ಜಿ ಯಂತೆ ಮಲ್ಟಿಪ್ಲೇಯರ್ ಆಕ್ಷನ್ ಗೇಮ್ ಆಗಿರಲಿದೆ. ಪಿಎಂ ನರೇಂದ್ರ ಮೋದಿ ಅವರ ಆತ್ಮನಿರ್ಭರ ಚಳುವಳಿಯನ್ನು ಬೆಂಬಲಿಸುತ್ತಾ ಫೌಜಿ ಗೇಮ್ನ್ನು ಪರಿಚಯಿಸುತ್ತಿದ್ದೇನೆ ಎಂದು ಅಕ್ಷಯ್ ಕುಮಾರ್ ತಿಳಿಸಿದ್ದಾರೆ.
4/ 8
ಅಲ್ಲದೆ ಈ ಗೇಮಿಂಗ್ ಮೂಲಕ ಮನರಂಜನೆಯ ಜೊತೆಗೆ ಸೇನೆಯ ತ್ಯಾಗ-ಬಲಿದಾನದ ಅರಿವಾಗಲಿದೆ. ಜೊತೆಗೆ ಈ ಗೇಮಿಂಗ್ ಆ್ಯಪ್ ಮೂಲಕ ಲಭಿಸುವ ಲಾಭದ ಶೇ.20 ರಷ್ಟನ್ನು ಸೇನೆಯ ಭಾರತ್ಕೆವೀರ್ ಟ್ರಸ್ಟ್ಗೆ ನೀಡಲಾಗುವುದು ಎಂದು ಅಕ್ಷಯ್ ಕುಮಾರ್ ತಿಳಿಸಿದ್ದಾರೆ.
5/ 8
ಅಕ್ಟೋಬರ್ನಲ್ಲಿ FAU: G ಆ್ಯಪ್ ಬಿಡುಗಡೆಯಾಗಲಿದ್ದು, ಈ ಗೇಮಿಂಗ್ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಪ್ಲೇ ಸ್ಟೋರ್ ಎರಡರಲ್ಲೂ ಲಭ್ಯವಿರಲಿದೆ. ಇನ್ನು ಫೌಜಿ ಗೇಮ್ನಲ್ಲಿ ಚೀನಾ ಗಡಿ ಭಾಗ ಗಲ್ವಾನ್ ಕಣಿವೆಯ ಗ್ರಾಫಿಕ್ ಡಿಸೈನ್ಗಳನ್ನು ಬಳಸಲಾಗುತ್ತಿರುವುದು ವಿಶೇಷ.
6/ 8
ಈ ಹಿಂದೆ ಗಲ್ವಾನ್ ಕಣಿವೆಯಲ್ಲಿ ಗಡಿ ವಿವಾದದ ಬಳಿಕ ಕೇಂದ್ರ ಸರ್ಕಾರವು ಚೀನಾದ 106 ಆ್ಯಪ್ಗಳನ್ನು ನಿಷೇಧಿಸಿತ್ತು. ಇದರಲ್ಲಿ ಜನಪ್ರಿಯ ಅಪ್ಲಿಕೇಶನ್ಗಳಾದ ಟಿಕ್ಟಾಕ್, ವಿ-ಚಾಟ್, ಯುಸಿ ಬ್ರೌಸರ್, ಯುಸಿ ನ್ಯೂಸ್ ಮುಂತಾದ ಅಪ್ಲಿಕೇಶನ್ಗಳು ಸೇರಿದ್ದವು.
7/ 8
ಇದೀಗ ಮತ್ತೊಮ್ಮೆ ಡಿಜಿಟಲ್ ಸ್ಟ್ರೈಕ್ ಮೂಲಕ ಕೇಂದ್ರ ಸರ್ಕಾರ 118 ಆ್ಯಪ್ಗಳನ್ನು ನಿರ್ಬಂಧಿಸಿದೆ. ಈ ರೀತಿಯಾಗಿ ಚೀನಾಕ್ಕೆ ಸೇರಿದ 200ಕ್ಕೂ ಅಧಿಕ ಮೊಬೈಲ್ ಅಪ್ಲಿಕೇಶನ್ಗಳನ್ನು ಇದುವರೆಗೆ ನಿಷೇಧಿಸಲಾಗಿದೆ.
8/ 8
ಈ ಎಲ್ಲಾ ಅಪ್ಲಿಕೇಶನ್ಗಳು ಇದು ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆ, ದೇಶದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಇತ್ಯಾದಿಗಳಿಗೆ ಹಾನಿಯುನ್ನುಂಟು ಮಾಡುವ ಸಾಧ್ಯತೆಯಿದೆ. ಅಲ್ಲದೆ ಬಳಕೆದಾರರ ಮಾಹಿತಿಗಳನ್ನು ಸೋರಿಕೆ ಮಾಡುತ್ತಿದೆ ಎಂದು ಕೇಂದ್ರ ಮಾಹಿತಿ- ತಂತ್ರಜ್ಞಾನ ಸಚಿವಾಲಯ ಆ್ಯಪ್ಗಳ ನಿಷೇಧದ ತೀರ್ಮಾನ ಕೈಗೊಂಡಿದೆ.