BSNL ಭಾರತ್ ಫೈಬರ್ ರೂ 799 ಬ್ರಾಡ್ಬ್ಯಾಂಡ್ ಯೋಜನೆ: ಈ ಪ್ಲಾನ್ 100 Mbps ವೇಗವನ್ನು 3300GB ಅಥವಾ 3.3 TB ಅಥವಾ 3300GB ಡೇಟಾವನ್ನು ನೀಡುತ್ತದೆ. FUP ಮಿತಿಯನ್ನು ತಲುಪಿದ ನಂತರ, ವೇಗವನ್ನು 2 Mbps ಗೆ ಇಳಿಸಲಾಗುತ್ತದೆ. BSNL ಇತ್ತೀಚೆಗೆ ಭಾರತ್ ಫೈಬರ್ ಸೂಪರ್ಸ್ಟಾರ್ ಪ್ರೀಮಿಯಂ ಎಂಬ OTT ಪ್ರಯೋಜನಗಳನ್ನು ಹೊಂದಿರುವ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆಯು ರೂ 749 ಬೆಲೆಯಿದೆ ಮತ್ತು 100 Mbps ವೇಗವನ್ನು 100 GB ವರೆಗೆ ನೀಡುತ್ತದೆ. ನಂತರ ಅದನ್ನು 5 Mbps ಗೆ ಇಳಿಸಲಾಗುತ್ತದೆ. ಈ ಯೋಜನೆ ಅಂಡಮಾನ್ ಮತ್ತು ನಿಕೋಬಾರ್ ವಲಯಗಳನ್ನು ಹೊರತುಪಡಿಸಿ ಎಲ್ಲಾ ವಲಯಗಳಲ್ಲಿ ಲಭ್ಯವಿದೆ.
ಏರ್ಟೆಲ್ 999 ರೂ.ವಿನ ಬ್ರಾಡ್ಬ್ಯಾಂಡ್ ಪ್ಲಾನ್ ಮೂಲಕ ಅನಿಯಮಿತ ಕರೆ ಮತ್ತು 200 Mbps ವೇಗದ ಇಂಟರ್ನೆಟ್ ಅನ್ನು ನೀಡುತ್ತದೆ. ಇದು Zee5, Amazon Prime, Disney+ Hotstar ಗೆ VIP ಚಂದಾದಾರಿಕೆ ಮತ್ತು Airtel XStream ಅಪ್ಲಿಕೇಶನ್ನಂತಹ ಸ್ಟ್ರೀಮಿಂಗ್ ಅಪ್ಲಿಕೇಶನ್ಗಳಿಗೆ ಪ್ರವೇಶವನ್ನು ನೀಡುತ್ತದೆ. ಜೊತೆಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ವಿಂಕ್ ಸಂಗೀತಕ್ಕೆ ಪ್ರವೇಶವನ್ನು ನೀಡುತ್ತದೆ.
ಭಾರತ್ ಫೈಬರ್ ಸೂಪರ್ಸ್ಟಾರ್ ಪ್ರಿಮಿಯಂ 949 ರೂ.ವಿನ ಯೋಜನನೆಯು 150 ಎಂಬಿಪಿಎಸ್ ವೇಗವನ್ನು ಹೊಂದಿದ್ದು, 200ಜಿಬಿ ವರೆಗೆ ಇಂಟರ್ನೆಟ್ ನೀಡುತ್ತದೆ ನಂತರ 10 ಎಮ್ಬಿಪಿಎಸ್ಗೆ ಇಳಿಸಲಾಗುತ್ತದೆ. ಈ ಯೋಜನೆಯು ಅಂಡಮಾನ್ ಮತ್ತು ನಿಕೋಬಾರ್ ವಲಯಗಳನ್ನು ಹೊರತುಪಡಿಸಿ ಎಲ್ಲಾ ವಲಯಗಳಲ್ಲಿ ಲಭ್ಯವಿದೆ. ಅಂತೆಯೇ BSNL 999 ರೂ.ಗೆ ಬ್ರಾಡ್ಬ್ಯಾಂಡ್ ಯೋಜನೆಯನ್ನು 200 Mbps ವೇಗವನ್ನು ಹೊಂದಿದ್ದು, 3300GB ಅಥವಾ 3.3 TB ವರೆಗೆ ನೀಡುತ್ತದೆ. ನಂತರ ವೇಗವನ್ನು 2Mbps ಗೆ ಇಳಿಸಲಾಗುತ್ತದೆ. ಈ ಯೋಜನೆಯು ಡಿಸ್ನಿ+ ಹಾಟ್ಸ್ಟಾರ್ಗೆ ಉಚಿತ ಸದಸ್ಯತ್ವದೊಂದಿಗೆ ಬರುತ್ತದೆ.