

ಏರ್ಟೆಲ್ ಕಂಪೆನಿ ತನ್ನ ನೂತನ ಪ್ರಿಪೇಯ್ಡ್ ರಿಚಾರ್ಜ್ ಪ್ಲ್ಯಾನ್ಗಳನ್ನು ಪರಿಚಯಿಸಿದೆ. ಈ ಹೊಸ ಯೋಜನೆಗಳು ಡಿಸೆಂಬರ್ 3 ರಿಂದ ಜಾರಿಗೆ ಬರಲಿದ್ದು, ಅದರಂತೆ ರಿಚಾರ್ಜ್ ಪ್ಲ್ಯಾನ್ಗಳು ಬದಲಾಗಲಿದೆ ಎಂದು ಕಂಪೆನಿ ತಿಳಿಸಿದೆ.


ಈಗಾಗಲೇ ವೊಡಾಫೋನ್ ಮತ್ತು ಐಡಿಯಾ ಕಂಪೆನಿ ನೂತನ ಟ್ಯಾರಿಫ್ ಪ್ಲ್ಯಾನ್ಗಳನ್ನು ಪ್ರಕಟಿಸಿದ್ದು, ಇದೀಗ ಏರ್ಟೆಲ್ ಸಹ ಜಾರಿಗೆ ಬರಲಿರುವ ರಿಚಾರ್ಜ್ ಯೋಜನೆಯನ್ನು ಬಹಿರಂಗಪಡಿಸಿದೆ.


148 ರೂ. ರಿಚಾರ್ಜ್ ಪ್ಲ್ಯಾನ್: ಏರ್ಟೆಲ್ನ 148 ರೂ. ಯೋಜನೆಯಲ್ಲಿ ಗ್ರಾಹಕರಿಗೆ 2 ಜಿಬಿ ಡೇಟಾ, 300 ಎಸ್ಎಂಎಸ್ ಮತ್ತು ಅನಿಯಮಿತ ಧ್ವನಿ ಕರೆಗಳ ಸೌಲಭ್ಯ ದೊರೆಯಲಿದೆ. ಇದರ ವಾಲಿಡಿಟಿ 28 ದಿನಗಳು. ಈ ಹಿಂದೆ ಈ ಪ್ಲ್ಯಾನ್ 129 ರೂ.ಗೆ ಲಭ್ಯವಿತ್ತು.


248 ರೂ. ಪ್ಲ್ಯಾನ್: ಏರ್ಟೆಲ್ನ 248 ರೂ ಯೋಜನೆಯಲ್ಲಿ ಗ್ರಾಹಕರಿಗೆ ದಿನಕ್ಕೆ 1.5 ಜಿಬಿ ಡೇಟಾ, 100 ಎಸ್ಎಂಎಸ್ ಮತ್ತು ಅನಿಯಮಿತ ಧ್ವನಿ ಕರೆಗಳನ್ನು ನೀಡಲಾಗುತ್ತದೆ. ಇದರ ವಾಲಿಡಿಟಿ 28 ದಿನಗಳು. ಈ ಹಿಂದೆ ಇದೇ ಪ್ಲ್ಯಾನ್ 169 ರೂ.ಗೆ ಲಭ್ಯವಿತ್ತು.


298 ರೂ. ರಿಚಾರ್ಜ್ ಪ್ಲ್ಯಾನ್: ಏರ್ಟೆಲ್ನ 298 ರೂ ಯೋಜನೆಯು ಪ್ರತಿ ದಿನ 2 ಜಿಬಿ ಡೇಟಾ, 100 ಎಸ್ಎಂಎಸ್ ಮತ್ತು ಅನಿಯಮಿತ ಧ್ವನಿ ಕರೆಗಳ ಸೌಲಭ್ಯ ನೀಡಲಿದೆ. ಇದರ ವಾಲಿಡಿಟಿ ಕೂಡ 28 ದಿನಗಳು. ಈ ಹಿಂದೆ ಇದೇ ಪ್ಲ್ಯಾನ್ಗೆ 199 ರೂ.ನಲ್ಲಿ ರಿಚಾರ್ಜ್ ಮಾಡಿಸಿಕೊಳ್ಳಬಹುದಿತ್ತು.


598 ರೂ. ರಿಚಾರ್ಜ್ ಪ್ಲ್ಯಾನ್: ಏರ್ಟೆಲ್ನ 598 ರೂ ಯೋಜನೆಯಲ್ಲಿ ಪ್ರತಿದಿನ 1.5 ಜಿಬಿ ಡೇಟಾ ಮತ್ತು ಅನಿಯಮಿತ ಧ್ವನಿ ಕರೆಗಳ ಸೌಲಭ್ಯ ದೊರೆಯಲಿದೆ. ಇದರ ವಾಲಿಡಿಟಿ 84 ದಿನಗಳು. ಈ ಹಿಂದೆ ಇದೇ ಪ್ಲ್ಯಾನ್ 82 ದಿನಗಳ ವಾಲಿಡಿಟಿಯೊಂದಿಗೆ 448 ರೂ.ಗೆ ಲಭ್ಯವಿತ್ತು.


698 ರೂ. ರಿಚಾರ್ಜ್ ಪ್ಲ್ಯಾನ್: ಏರ್ಟೆಲ್ನ 698 ರೂ ಯೋಜನೆಯಲ್ಲಿ ಪ್ರತಿದಿನ 2 ಜಿಬಿ ಡೇಟಾ ಮತ್ತು ಅನಿಯಮಿತ ಧ್ವನಿ ಕರೆಗಳನ್ನು 84 ದಿನಗಳ ಮಾನ್ಯತೆಯೊಂದಿಗೆ ನೀಡಲಿದೆ. ಈ ಹಿಂದೆ ಇದೇ ಪ್ಲ್ಯಾನ್ 499 ರೂ. ಸಿಗಲಿದೆ.


1498 ರಿಚಾರ್ಜ್ ಪ್ಲ್ಯಾನ್: ಏರ್ಟೆಲ್ನ 1498 ರೂ ಯೋಜನೆಯಲ್ಲಿ 24 ಜಿಬಿ ಡೇಟಾ ಮತ್ತು ಅನಿಯಮಿತ ಧ್ವನಿ ಕರೆಗಳು, 3600 ಎಸ್ಎಂಎಸ್ ಸೌಲಭ್ಯ ದೊರೆಯಲಿದೆ. ಇದರ ವಾಲಿಡಿಟಿ ಒಂದು ವರ್ಷ. ಈ ಹಿಂದೆ ಇದೇ ಪ್ಲ್ಯಾನ್ 12 ಜಿಬಿ ಡೇಟಾದೊಂದಿಗೆ 998 ರೂ.ಗೆ ಲಭ್ಯವಿತ್ತು


2,398 ರೂ. ರಿಚಾರ್ಜ್ ಪ್ಲ್ಯಾನ್: ಏರ್ಟೆಲ್ನ 2,398 ರೂ ಯೋಜನೆಯಲ್ಲಿ ಗ್ರಾಹಕನಿಗೆ ದಿನಕ್ಕೆ 1.5 ಜಿಬಿ ಡೇಟಾ ಮತ್ತು ಅನಿಯಮಿತ ಧ್ವನಿ ಕರೆಗಳ ಸೌಲಭ್ಯ ದೊರೆಯಲಿದೆ. ಹಾಗೆಯೇ ಪ್ರತಿದಿನ 100 ಎಸ್ಎಂಎಸ್ ಉಚಿತವಾಗಿ ಸಿಗಲಿದೆ. ಇದರ ವಾಲಿಡಿಟಿ ಕೂಡ ಒಂದು ವರ್ಷ. ಈ ಹಿಂದೆ ಇದೇ ಪ್ಲ್ಯಾನ್ 1699 ರೂ.ಗೆ ಲಭ್ಯವಿತ್ತು.


ಇಷ್ಟೇ ಅಲ್ಲದೆ ಏರ್ಟೆಲ್ನಿಂದ ಮಾಡುವ ಇತರೆ ನೆಟ್ವರ್ಕ್ ಕರೆಗಳಿಗೆ ನಿಮಿಷಕ್ಕೆ 0.06 ಪೈಸೆ ಇಂಟರ್ ಕನೆಕ್ಟ್ ಯೂಸ್ ಚಾರ್ಜ್ (ಐಯುಸಿ) ಚಾರ್ಜ್ ಮಾಡುವುದಾಗಿ ಕಂಪೆನಿ ತಿಳಿಸಿದೆ.


ಇದಕ್ಕಾಗಿ ಏರ್ಟೆಲ್ ಪ್ರಸ್ತುತ ಪಡಿಸಿರುವ ಹೊಸ ಯೋಜನೆಗಳಾದ 19 ರೂ.ಗಳಿಂದ ಪ್ರಾರಂಭವಾಗಿ 2398 ರೂ.ಗಳವರೆಗೆ ಎಫ್ಯುಪಿ ಟಾಕ್ಟೈಮ್ ನೀಡಲಿದೆ. ಅಂದರೆ..


ಏರ್ಟೆಲ್ನಿಂದ ಇತರೆ ನೆಟ್ವರ್ಕ್ಗಳಿಗೆ ಅನಿಯಮಿತ ಕರೆ ಮಾಡಲು ಎಫ್ಯುಪಿ ಮಿತಿಯನ್ನು ಬಳಸಬಹುದು. 28 ದಿನಗಳ ರಿಚಾರ್ಜ್ ಪ್ಲ್ಯಾನ್ಗಳ ಮೇಲೆ 1000 ಆಫ್-ನೆಟ್ ನಿಮಿಷಗಳ ಎಫ್ಯುಪಿ ಹಾಗೂ 84 ದಿನಗಳ ಪ್ಲ್ಯಾನ್ಗಳಲ್ಲಿ 3000 ನಿಮಿಷಗಳು ಎಫ್ಯುಪಿ ನಿಮಿಷಗಳನ್ನು ನೀಡಲಿದೆ.


ಹಾಗೆಯೇ 365 ದಿನಗಳ ಯೋಜನೆಗಳಿಗೆ 1200 ಎಫ್ಯುಪಿ ನಿಮಿಷಗಳನ್ನು ಉಚಿತವಾಗಿ ಕೊಡಲಿದೆ. ಇದರ ಬಳಿಕ ನೀವು ಇತರೆ ನೆಟ್ವರ್ಕ್ಗಳಿಗೆ ಮಾಡುವ ಕರೆಗಳಿಗೆ ನಿಮಿಷಕ್ಕೆ 0.06 ಪೈಸೆ ಚಾರ್ಜ್ ಆಗಲಿದೆ ಎಂದು ಏರ್ಟೆಲ್ ತಿಳಿಸಿದೆ.