Personal Loan: ಏರ್ಟೆಲ್ ಗ್ರಾಹಕರಿಗೆ ಬಂಪರ್ ಆಫರ್! ಆನ್ಲೈನ್ ಮೂಲಕ 8 ಲಕ್ಷ ಸಾಲ ಪಡೆಯಿರಿ
ನೀವು ಏರ್ಟೆಲ್ ಸಿಮ್ ಕಾರ್ಡ್ ಬಳಕೆ ಮಾಡುತ್ತಿದ್ದರೆ, ನಿಮಗಿದೋ ಕಂಪನಿಯಿಂದ ಗುಡ್ ನ್ಯೂಸ್. ಈನ್ಮುಂದೆ ಏರ್ಟೆಲ್ನಿಂದಲೂ ನೀವು ಸುಲಭವಾಗಿ ಸಾಲ ಪಡೆಯಬಹುದು. ಅದೂ ಕೂಡ ಎಲ್ಲೂ ಹೋಗದೆ ಆನ್ಲೈನ್ ಮೂಲಕವೇ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಹೇಗೆ ಎಂಬುದನ್ನು ತಿಳೀಬೇಕಾದ್ರೆ ಈ ಲೇಖವನ್ನು ಫುಲ್ ಓದಿ.
ನೀವು ಏರ್ಟೆಲ್ ಸಿಮ್ ಕಾರ್ಡ್ ಬಳಕೆ ಮಾಡುತ್ತಿದ್ದರೆ, ನಿಮಗಿದೋ ಕಂಪನಿಯಿಂದ ಗುಡ್ ನ್ಯೂಸ್. ಈನ್ಮುಂದೆ ಏರ್ಟೆಲ್ನಿಂದಲೂ ನೀವು ಸುಲಭವಾಗಿ ಸಾಲ ಪಡೆಯಬಹುದು. ಅದೂ ಕೂಡ ಎಲ್ಲೂ ಹೋಗದೆ ಆನ್ಲೈನ್ ಮೂಲಕವೇ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಹೇಗೆ ಎಂಬುದನ್ನು ತಿಳೀಬೇಕಾದ್ರೆ ಈ ಲೇಖವನ್ನು ಫುಲ್ ಓದಿ.
2/ 8
ಟೆಲಿಕಾಂ ಕ್ಷೇತ್ರದ ದೈತ್ಯ ಕಂಪನಿಗಳಲ್ಲಿ ಏರ್ಟೆಲ್ ಕೂಡ ಒಂದು. ಈ ಕಂಪನಿಯು ವಿವಿಧ ರೀತಿಯ ಸೇವೆಗಳನ್ನು ನೀಡುವ ಮೂಲಕ ಬಹಳಷ್ಟು ಜನಪ್ರಿಯತೆಯನ್ನು ಪಡೆದಿದೆ. ಇದೀಗ ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ಕೂಡ ಇದೆ. ಇದು ಬ್ಯಾಂಕಿಂಗ್ ಸೇವೆಗಳನ್ನು ಸಹ ನೀಡುತ್ತದೆ. ಅಲ್ಲದೆ ಅನೇಕ ಕಂಪನಿಗಳೊಂದಿಗೆ ಪಾಲುದಾರಿಕೆಯ ಮೂಲಕ ಸಾಲವನ್ನು ಸಹ ಒದಗಿಸುತ್ತಿದೆ.
3/ 8
ಏರ್ಟೆಲ್ ಗ್ರಾಹಕರು ರೂ. 8 ಲಕ್ಷದವರೆಗೆ ಸಾಲ ಪಡೆಯಬಹುದು. ಕನಿಷ್ಠ ರೂ. 10 ಸಾವಿರದವರೆಗೆ ಸಾಲ ಪಡೆಯಬಹುದು. ಏರ್ಟೆಲ್ ಥ್ಯಾಂಕ್ಸ್ ಮೂಲಕ ನೀವು ಆನ್ಲೈನ್ನಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಈ ಪ್ರಯೋಜನವು ಏರ್ಟೆಲ್ ಸಿಮ್ ಕಾರ್ಡ್ ಬಳಕೆದಾರರಿಗೆ ಮಾತ್ರ ಅನ್ವಯಿಸುತ್ತದೆ.
4/ 8
ವೇಗದ ಸಾಲ ಮರುಪಾವತಿ ವಿಷಯಕ್ಕೆ ಸಂಬಂಧಿಸಿದಂತೆ ಇಎಮ್ಐ ಮೂಲಕ ಹಣ ಪಾವತಿಸುವ ಆಯ್ಕೆಯೂ ಇದೆ. ಇನ್ನು ಸಾಲಕ್ಕೆ ಅರ್ಜಿ ಸಲ್ಲಿಸಿದ 24 ಗಂಟೆಯಲ್ಲಿ ಗ್ರಾಹಕರ ಬ್ಯಾಂಕ್ ಖಾತೆಗೆ ಹಣ ಬೀಳುತ್ತದೆ. ನಂತರ ನಿಮ್ಮ ಬ್ಯಾಂಕ್ ಖಾತೆಯಿಂದ ಪ್ರತಿ ತಿಂಗಳು ನೀವು ನಿಗದಿ ಪಡಿಸಿದಷ್ಟು ಇಎಮ್ಐ ಹಣ ಕಟ್ ಆಗುತ್ತದೆ.
5/ 8
ಏರ್ಟೆಲ್ ನೇರವಾಗಿ ಸಾಲ ಯಾರಿಗೂ ನೀಡುವುದಿಲ್ಲ. ಇದು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಏರ್ಟೆಲ್ ತನ್ನ ಅಪ್ಲಿಕೇಶನ್ನಲ್ಲಿ ಹಲವಾರು ಕಂಪನಿಗಳ ಸಹಭಾಗಿತ್ವದಲ್ಲಿ ಸಾಲ ಸೇವೆಗಳನ್ನು ನೀಡುತ್ತಿದೆ. ಏರ್ಟೆಲ್ ಡಿಎಂಐ ಫೈನಾನ್ಸ್, ಮನಿ ವ್ಯೂ ಮತ್ತು ಐಡಿಎಫ್ಸಿ ಫಸ್ಟ್ ಬ್ಯಾಂಕ್ನಂತಹ ಹಣಕಾಸು ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದೆ.
6/ 8
ಸಾಲ ಪಡೆಯಲು ಬಯಸುವ ಏರ್ಟೆಲ್ ಗ್ರಾಹಕರು ಮೊದಲು ಗೂಗಲ್ ಪ್ಲೇ ಸ್ಟೋರ್ನಿಂದ ಏರ್ಟೆಲ್ ಥ್ಯಾಂಕ್ಸ್ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ಓಟಿಪಿ ಸಹಾಯದಿಂದ ಲಾಗಿನ್ ಮಾಡಿ. ನಿಮ್ಮ ಏರ್ಟೆಲ್ ಸೇವೆಗಳ ಬಗ್ಗೆ ಇಲ್ಲಿ ನೀವು ತಿಳಿದುಕೊಳ್ಳಬಹುದು.
7/ 8
ಈಗ ನೀವು ಆ್ಯಪ್ನಲ್ಲಿ ಶಾಪ್ ಆಯ್ಕೆಗೆ ಹೋಗಬೇಕು. ಇಲ್ಲಿ ನೀವು ಫೈನಾನ್ಷಿಯಲ್ ಸರ್ವೀಸಸ್ ಎಂಬ ಆಯ್ಕೆಯನ್ನು ನೋಡಬಹುದು. ಅದರ ಮೇಲೆ ಕ್ಲಿಕ್ ಮಾಡಿ. ಇದರಲ್ಲಿ ನಿಮಗೆ ಹಲವು ಆಯ್ಕೆಗಳಿರುತ್ತವೆ. ಇವುಗಳಲ್ಲಿ ನೀವು ಪರ್ಸನಲ್ ಲೋನ್ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಬೇಕು.
8/ 8
ನಂತರ ನಿಮಗಾಗಿ ಹೊಸ ಪೇಜ್ ಒಂದು ತೆರೆದುಕೊಳ್ಳುತ್ತದೆ. ಇಲ್ಲಿ ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆಯಂತಹ ವಿವರಗಳನ್ನು ನೀಡಬೇಕಾಗುತ್ತವೆ. ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವವರಿಗೆ ಸಾಲದ ಅರ್ಜಿ ಸಲ್ಲಿಸಲು ಇನ್ನಷ್ಟು ಸುಲಭವಾಗಿರುತ್ತದೆ.