Airtel ಗ್ರಾಹಕರಿಗೆ ಬಂಪರ್: OTTಯಲ್ಲಿ 3 ತಿಂಗಳು ಉಚಿತವಾಗಿ ಹೊಸ ಸಿನಿಮಾಗಳನ್ನು ನೋಡಬಹುದು
ಈಗೇನಿದ್ದರೂ OTT ಯುಗ. ದೊಡ್ಡ ದೊಡ್ಡ ಸಿನಿಮಾಗಳು ಈಗ OTT ಫ್ಲ್ಯಾಟ್ ಫಾರ್ಮ್ ಗೆ ಬರುತ್ತಿವೆ. ಜನ ಕೂಡ ಇದಕ್ಕೆ ಒಗ್ಗಿಕೊಂಡಿದ್ದಾರೆ. ಮೊಬೈಲ್ ನಲ್ಲೇ ಹೊಸ ಸಿನಿಮಾಗಳನ್ನು ನೋಡುತ್ತಿದ್ದಾರೆ. ಇದಕ್ಕಾಗಿ ನೀವು ಪ್ರತ್ಯೇಕವಾಗಿ ಹಣ ವ್ಯಯಿಸುತ್ತಿದ್ದರೆ, ನಿಮಗೆ ಸಂತಸದ ಸುದ್ದಿ ಇಲ್ಲಿದೆ.
ಹೌದು, ಮೊಬೈಲ್ ರಿಚಾರ್ಜ್ ಜೊತೆಗೆ ಉಚಿತವಾಗಿ OTT ಫ್ಲ್ಯಾಟ್ ಫಾರ್ಮ್ ಅನ್ನು ಬಳಸುವ ಅವಕಾಶ ಇಲ್ಲಿದೆ. ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಓಲೈಸಲು ಇಂತಹ ಯೋಜನೆಗಳನ್ನು ತರುತ್ತಿವೆ. ಇದರಿಂದಾಗಿ ಕರೆ, ಡೇಟಾದ ಜೊತೆಗೆ ಹೆಚ್ಚುವರಿ ಪ್ರಯೋಜನಗಳನ್ನು ಸಹ ನೀಡಲಾಗುತ್ತದೆ.
2/ 7
ಇಂತಹ ಭರ್ಜರಿ ಪ್ಲ್ಯಾನ್ ಕೊಟ್ಟಿರುವುದು ಇನ್ಯಾರು ಅಲ್ಲ ನಮ್ಮ ಏರ್ ಟೆಲ್. ಆ ಬಗ್ಗೆ ಪೂರ್ತಿ ಇಲ್ಲಿದೆ. ಏರ್ ಟೆಲ್ ಗ್ರಾಹಕರಿಗೆ ಇಂತಹ ಅನೇಕ ಯೋಜನೆಗಳನ್ನು ನೀಡುತ್ತಿದೆ. ಇದರಲ್ಲಿ OTT ಗೆ ಪ್ರವೇಶವನ್ನು ನೀಡಲಾಗುತ್ತದೆ.
3/ 7
ಇಂದು ನಾವು ಏರ್ ಟೆಲ್ ನ 499 ರೂ. ಪ್ರಿಪೇಯ್ಡ್ ಪ್ಲಾನ್ ಬಗ್ಗೆ ಮಾತನಾಡುತ್ತಿದ್ದೇವೆ. ಇದರಲ್ಲಿ ಕರೆ, ಡೇಟಾ ಜೊತೆಗೆ ಡಿಸ್ನಿ + ಹಾಟ್ ಸ್ಟಾರ್ ಉಚಿತ ಚಂದಾದಾರಿಕೆಯನ್ನು ನೀಡಲಾಗಿದೆ.
4/ 7
ದೀರ್ಘ ವ್ಯಾಲಿಡಿಟಿ ಹೊಂದಿರುವ ಪ್ಲಾನ್ ಗಾಗಿ ಹುಡುಕುತ್ತಿರುವ ಬಳಕೆದಾರರಿಗೆ, ಈ 499 ರೂ. ಪ್ಲಾನ್ ಸರಿ ಹೊಂದುತ್ತೆ. ಇದರಲ್ಲಿ ಗ್ರಾಹಕರಿಗೆ 3 ತಿಂಗಳ ವ್ಯಾಲಿಡಿಟಿ ಸಿಗುತ್ತದೆ.
5/ 7
ವಿಶೇಷವೆಂದರೆ ಏರ್ ಟೆಲ್ ನ ಈ ರೂ.499 ಪ್ಲಾನ್ ನಲ್ಲಿ ಅನಿಯಮಿತ ಧ್ವನಿ ಕರೆಯೊಂದಿಗೆ ಪ್ರತಿದಿನ 2GB ಡೇಟಾ ಲಭ್ಯವಿದೆ. ಯೋಜನೆಯಲ್ಲಿ ಗ್ರಾಹಕರಿಗೆ 100 SMSಗಳನ್ನು ನೀಡಲಾಗುತ್ತಿದೆ.
6/ 7
ಏರ್ ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಮತ್ತು ಉಚಿತ ಹಲೋ ಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್ ನ ಹೆಚ್ಚುವರಿ ಪ್ರಯೋಜನಗಳನ್ನು ಸಹ ನೀಡುತ್ತಿದೆ. ವಿಶೇಷವೆಂದರೆ ಡಿಸ್ನಿ ಹಾಟ್ ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಈ ಯೋಜನೆಯಲ್ಲಿ ಗ್ರಾಹಕರಿಗೆ 3 ತಿಂಗಳವರೆಗೆ ನೀಡಲಾಗುತ್ತಿದೆ.
7/ 7
ಇದು ಮಾತ್ರವಲ್ಲದೆ, ಗ್ರಾಹಕರಿಗೆ ಅಪೊಲೊ 24/7 ವೃತ್ತ, ಫಾಸ್ಟ್ ಟ್ಯಾಗ್ನಲ್ಲಿ ರೂ. 100 ಕ್ಯಾಶ್ ಬ್ಯಾಕ್, ಉಚಿತ ಹೆಲೊಟ್ಯೂನ್ ಮತ್ತು 3 ತಿಂಗಳವರೆಗೆ ವಿಂಕ್ ಮ್ಯೂಸಿಕ್ ಗೆ ಉಚಿತ ಚಂದಾದಾರಿಕೆಯನ್ನು ಈ ಯೋಜನೆಯಲ್ಲಿ ನೀಡಲಾಗುತ್ತದೆ. ಸಾಂಕೇತಿಕ ಚಿತ್ರ