ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ವಿಭಿನ್ನ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ನೀಡುತ್ತಿದೆ. ಇದರಲ್ಲಿ ಪ್ರತಿದಿನ 1ಜಿಬಿ, 1.5ಜಿಬಿ ಮತ್ತು 2ಜಿಬಿ ಡೇಟಾವನ್ನು ಒದಗಿಸುವ ಯೋಜನೆಗಳಿವೆ. ಜೊತೆಗೆ 28 ದಿನಗಳು, 56 ದಿನಗಳು ಮತ್ತು 84 ದಿನಗಳ ಮಾನ್ಯತೆಯೊಂದಿಗೆ ಯೋಜನೆಗಳಿವೆ. ಆದರೆ ತಿಂಗಳಿಗೊಮ್ಮೆ ಅಥವಾ ಮೂರು ತಿಂಗಳಿಗೊಮ್ಮೆ ರೀಚಾರ್ಜ್ ಮಾಡುವ ಬದಲು, ವರ್ಷಕ್ಕೊಮ್ಮೆ ರೀಚಾರ್ಜ್ ಮಾಡಲು ಬಯಸುವವರಿಗೆ ಜಿಯೋ ವಾರ್ಷಿಕ ಯೋಜನೆಗಳೂ ಇವೆ.
ಈ ಯೋಜನೆಯಲ್ಲಿ ಒಟ್ಟು 912.5 GB ಡೇಟಾ 365 ದಿನಗಳವರೆಗೆ ಲಭ್ಯವಿದೆ. ಇದರ ಜೊತೆಗೆ ಜಿಯೋ ಮತ್ತೊಂದು 87GB ಡೇಟಾವನ್ನು ಸಹ ನೀಡುತ್ತಿದೆ. 5ಜಿ ನೆಟ್‌ವರ್ಕ್ ಇರುವವರು 5ಜಿ ಡೇಟಾವನ್ನು ಸಹ ಬಳಸಬಹುದು. ಜೊತೆಗೆ ಅನಿಯಮಿತ ಧ್ವನಿ ಕರೆಗಳು, ಪ್ರತಿದಿನ 100 sms ಸೌಲಭ್ಯ ಪಡೆಯಬಹುದು. Jio TV, JioCinema, JioSecurity, Jio Cloud ನಂತಹ ಅಪ್ಲಿಕೇಶನ್‌ಗಳ ಚಂದಾದಾರಿಕೆ ಸೌಲಭ್ಯ ಸಿಗುತ್ತದೆ.