Activa Smart Unlock: ಆಕ್ಟಿವಾ ಸ್ಕೂಟರ್ ಸ್ಟಾರ್ಟ್ ಮಾಡೋಕೆ ಈಗ ಕೀ ಬೇಕಾಗಿಲ್ಲ!
ಸ್ಮಾರ್ಟ್ ಕೀ ಬಳಸಿ ಸ್ಕೂಟರ್ನ ಎಂಜಿನ್ ಅನ್ನು ಪ್ರಾರಂಭಿಸಬಹುದು ಆದರೆ ಕೀ ಮತ್ತು ಗಾಡಿಯ ನಡುವಿನ ಅಂತರ ಕೇವಲ 2 ಮೀಟರ್ ಮಾತ್ರ ಇರಬೇಕು. ಎಂಜಿನ್ ಸ್ಟಾರ್ಟ್ ಮತ್ತು ಸ್ಟಾಪ್ ಸ್ವಿಚ್ ಎರಡೂ ಕೂಡಾ ಇದರಲ್ಲಿದೆ.
ಹೋಂಡಾ ಆಕ್ಟಿವಾ ದೇಶದಲ್ಲಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಆಗಿದೆ. 2001 ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ಸ್ಕೂಟರ್ ಈಗ ಹಲವು ವರ್ಷಗಳಿಂದ ಸೂಪರ್ ಪವರ್ ಹೊಂದಿದೆ. ಕಂಪನಿಯು ತನ್ನ ನವೀಕರಿಸಿದ ಆವೃತ್ತಿಯನ್ನು ಹಲವಾರು ಬಾರಿ ಬಿಡುಗಡೆ ಮಾಡಿದೆ. ಈಗ ಕಂಪನಿಯು ಆಕ್ಟಿವಾ 6G ನ ಹೊಸ ಆವೃತ್ತಿಯನ್ನು ಸಹ ಬಿಡುಗಡೆ ಮಾಡಿದೆ.
2/ 7
ಹೋಂಡಾ ಆಕ್ಟಿವಾ 6ಜಿ ಹೆಚ್ ಸ್ಮಾರ್ಟ್ ನ ವಿಶೇಷತೆ ಏನೆಂದರೆ ಈ ಸ್ಕೂಟರ್ ಅನ್ನು ಈಗ ಕೀ ಇಲ್ಲದೆಯೂ ಪ್ರಾರಂಭಿಸಬಹುದು. ಇದಲ್ಲದೆ ಇನ್ನು ಕೆಲವು ಹೊಸ ಮಾದರಿಯಲ್ಲಿ ಇದು ರೂಪಿತಗೊಂಡಿದೆ.
3/ 7
ಹೊಸ ಹೋಂಡಾ ಆಕ್ಟಿವಾ ಹೆಚ್-ಸ್ಮಾರ್ಟ್ ಸ್ಕೂಟರ್ ಅನ್ನು ಮೂರು ಮಾದರಿಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಸ್ಟ್ಯಾಂಡರ್ಡ್ ಮಾಡೆಲ್ ಬೆಲೆ ರೂ.74,536, ಡಿಲಕ್ಸ್ ಮಾದರಿ ರೂ.77,036 ಮತ್ತು ಸ್ಮಾರ್ಟ್ ಮಾದರಿಯ ಬೆಲೆ ರೂ.80,537.
4/ 7
ಹೋಂಡಾ ಆಕ್ಟಿವಾ ಹೆಚ್-ಸ್ಮಾರ್ಟ್ ಸ್ಕೂಟರ್ ಅಂತಹ 5 ಹೊಸ ತಂತ್ರಜ್ಞಾನಗಳನ್ನು ಹೊಂದಿದೆ. ಇಲ್ಲಿಯವರೆಗೆ ಇಷ್ಟು ಸೂಪರ್ ಆಗಿರುವ ಯಾವುದೇ ದ್ವಿಚಕ್ರ ವಾಹನಗಳಲ್ಲಿ ಬಂದಿಲ್ಲ.
5/ 7
ಇದು ಸ್ಮಾರ್ಟ್ ಕೀಯೊಂದಿಗೆ ಬರುತ್ತದೆ. ಈ ಕೀಲಿಯ ಸಹಾಯದಿಂದ ಸ್ಕೂಟರ್ ಅನ್ನು ದೂರದಿಂದಲೇ ಅನ್ಲಾಕ್ ಮಾಡಬಹುದು. ಕಾರ್ ಕೀ ಹಾಗೆ ಇರುವ ಬಟನ್ಗಳು ಈ ಕೀಲಿಯಲ್ಲಿದೆ. ಸ್ಮಾರ್ಟ್ ಕೀ ಸಹಾಯದಿಂದ ಸುಲಭವಾಗಿ ನೀವು ಅನ್ಲಾಕ್ ಮಾಡಬಹದು.
6/ 7
ಈ ಸ್ಮಾರ್ಟ್ ಕೀ ಬಳಸಿ ಸ್ಕೂಟರ್ನ ಎಂಜಿನ್ ಅನ್ನು ಸಹ ಪ್ರಾರಂಭಿಸಬಹುದು ಆದರೆ ಕೀ ಮತ್ತು ಗಾಡಿಯ ನಡುವಿನ ಅಂತರ ಕೇವಲ 2 ಮೀಟರ್ ಮಾತ್ರ ಇರಬೇಕು. ಎಂಜಿನ್ ಸ್ಟಾರ್ಟ್ ಮತ್ತು ಸ್ಟಾಪ್ ಸ್ವಿಚ್ ಎರಡೂ ಕೂಡಾ ಇದರಲ್ಲಿಇದೆ.
7/ 7
ಹೊಸ ಪಾಸಿಂಗ್ ಸ್ವಿಚ್ ಮತ್ತು DC LED ಹೆಡ್ಲ್ಯಾಂಪ್ ಇದರಲ್ಲಿದೆ. ಸ್ಕೂಟರ್ ಈಗ ಹೊಸದಾಗಿ ವಿನ್ಯಾಸಗೊಂಡಿದೆ. ಆರಾಮದಾಯಕ ಪ್ರಯಾಣ ಮಾಡಲು ಬೇಕಾದ ಎಲ್ಲಾ ಸೌಲಭ್ಯಗಳೂ ಸಹ ಇದರಲ್ಲಿದೆ.