ಆಧಾರ್ ಮಿತ್ರವು ಆಧಾರ್ ದಾಖಲಾತಿ ಸಂಖ್ಯೆ, PVC ಕಾರ್ಡ್ ಆರ್ಡರ್ ಸ್ಥಿತಿ, ಕಂಪ್ಲೈಂಟ್ ಸ್ಥಿತಿಯಂತಹ ಅನೇಕ ಅನುಮಾನಗಳು, ಪ್ರಶ್ನೆಗಳು ಮತ್ತು ಸಮಸ್ಯೆಗಳಿಗೆ ಮಾಹಿತಿಯನ್ನು ಒದಗಿಸುತ್ತದೆ. ಆಧಾರ್ ಮಿತ್ರ AI ಚಾಟ್‌ಬಾಟ್ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿದೆ. ಚಾಟ್‌ಬಾಟ್‌ಗೆ ಆಧಾರ್ ಕಾರ್ಡ್ ಹೊಂದಿರುವವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ತರಬೇತಿ ನೀಡಲಾಗಿದೆ ಎಂದು ಯುಐಡಿಎಐ ಹೇಳಿದೆ.
ಮೊದಲು https://www.uidai.gov.in/en/ ವೆಬ್‌ಸೈಟ್ ಓಪನ್ ಮಾಡಿ. ಆಧಾರ್ ಮಿತ್ರ ಬಾಕ್ಸ್ ಕೆಳಗಿನ ಬಲಭಾಗದಲ್ಲಿ ಕಾಣಿಸುತ್ತದೆ. ಆ ಆಯ್ಕೆಯನ್ನು ಕ್ಲಿಕ್ ಮಾಡಿ. ಅದರ ನಂತರ GET STARTED ಮೇಲೆ ಕ್ಲಿಕ್ ಮಾಡಿ. ಅಲ್ಲಿ PVC ಸ್ಥಿತಿ, ಲೊಕೇಟ್ PEC, E-Aadhaar, Lost Aadhaar, Aadhaar Status ಆಯ್ಕೆಗಳು ಡಿಫಾಲ್ಟ್ ಆಗಿ ಕಾಣಿಸಿಕೊಳ್ಳುತ್ತವೆ. ಈ ಆಯ್ಕೆಗಳಲ್ಲಿ ಒಂದನ್ನು ಆಯ್ಕೆಮಾಡಿ ಅಥವಾ ನಿಮಗೆ ಯಾವುದೇ ಪ್ರಶ್ನೆ, ಸಂದೇಹ ಅಥವಾ ದೂರು ಇದ್ದರೆ ಟೈಪ್ ಮಾಡಿ ಮತ್ತು ನಮೂದಿಸಿ. ನಂತರ ನೀವು ಕೇಳಿದ ಪ್ರಶ್ನೆಗೆ ಉತ್ತರ ಪಡೆಯಬಹುದು.