ಅತ್ಯಾಧುನಿಕ ತಂತ್ರಜ್ಞಾನದ ಆಗಮನದಿಂದ ಸ್ಮಾರ್ಟ್‌ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ಇತ್ತೀಚೆಗೆ ಹೆಚ್ಚಾಗಿದೆ. ಇದು ಕಣ್ಣಿನ ಒತ್ತಡ ಮತ್ತು ಕಣ್ಣಿನ ದೃಷ್ಟಿಯನ್ನು ಕಳೆದುಕೊಳ್ಳುತ್ತಾರೆ. ಇದೇ ರೀತಿಯಲ್ಲಿ ಇತ್ತೀಚೆಗೆ ಹೈದರಾಬಾದ್‌ನ ಮಹಿಳೆಯೊಬ್ಬರು ಸ್ಮಾರ್ಟ್‌ಫೋನ್‌ನಿಂದಾಗಿ ತನ್ನ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿದ್ದಾರೆ.
ಸ್ಮಾರ್ಟ್ಫೋನ್ಗಳ ಬಳಕೆ ಮಿತಿಗೊಳಿಸುವುದು: ಎಲೆಕ್ಟ್ರಾನಿಕ್ ಸಾಧನಗಳು, ವಿಶೇಷವಾಗಿ ಸ್ಮಾರ್ಟ್‌ಫೋನ್‌ಗಳನ್ನು ಬಳಕೆ ಮಾಡುವವರು ಸಾಕಷ್ಟು ಇದ್ದಾರೆ. ಆದರೆ ಸ್ಮಾರ್ಟ್ ಫೋನ್ ಬಳಕೆಯನ್ನು ಮಿತಿಗೊಳಿಸುವುದು ಬಹಳ ಮುಖ್ಯ. ಅನೇಕ ಜನರು ತಮ್ಮ ಫೋನ್ ಅನ್ನು ಆಗಾಗ್ಗೆ ಪರಿಶೀಲಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಇದರಿಂದ ಬಳಕೆದಾರರು ಕಣ್ಣಿನ ದೃಷ್ಟಿಯನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
ಇತ್ತೀಚಿಗೆ ಸಾಮಾಜಿಕ ಜಾಲತಾಣಗಳು ವ್ಯಾಪಕವಾಗುತ್ತಿರುವುದರಿಂದ ಮುಖ್ಯವಾಗಿ ಯುವಕರು ತಮ್ಮ ಫೋನ್‌ಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇದರೊಂದಿಗೆ, ಕಣ್ಣಿನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸ್ಮಾರ್ಟ್‌ಫೋನ್ ಬಳಕೆಯನ್ನು ಮಿತಿಗೊಳಿಸುವುದು ಅವಶ್ಯಕ. ಇನ್ನು ಸ್ಮಾರ್ಟ್‌ಫೋನ್‌ಗಳನ್ನು ಆದಷ್ಟು ಕಡಿಮೆ ಬಳಕೆ ಮಾಡಿದ್ರೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.
ಡಾರ್ಕ್ ಮೋಡ್ ಅನ್ನು ಆನ್ ಮಾಡಿ: ಸ್ಮಾರ್ಟ್‌ಫೋನ್‌ಗಳು ಈಗ ಇನ್ ಬಿಲ್ಟ್ ಡಾರ್ಕ್ ಮೋಡ್‌ನೊಂದಿಗೆ ಬರುತ್ತಿವೆ. ಈ ವೈಶಿಷ್ಟ್ಯದ ಕಾರಣದಿಂದಾಗಿ, ಮೊಬೈಲ್ ಸ್ಕ್ರೀನ್ ಅನ್ನು ಡಾರ್ಕ್ ಮೋಡ್ ಮೂಲಕ ಡಿಸ್ಪ್ಲೇನ ಬ್ರೈಟ್ನೆಸ್ ಅನ್ನು ಕಡಿಮೆ ಮಾಡಬಹುದು. ಆದ್ದರಿಂದ ಈ ಫೀಚರ್ಸ್ ಮೂಲಕ ಬಳಕೆದಾರರ ಆರೋಗ್ಯವನ್ನು ಸರಿಪಡಿಸಬಹುದು ಮತ್ತು ಕಣ್ಣಿನ ಆಯಾಸವನ್ನು ತಪ್ಪಿಸಬಹುದು.
ಐಡಿಯಲ್ ಡಿಸ್‌ಪ್ಲೇ ಅಡ್ಜಸ್ಟ್: ಮುಖ್ಯವಾಗಿ ಬಳಕೆದಾರರಿಗೆ ಬೇಕಾಗುವಂತೆ ಡಿಸ್ಪ್ಲೇಯನ್ನು ಸೆಟ್ ಮಾಡಿಕೊಳ್ಳಬವೇಕು. ಕೆಲವೊಬ್ಬರಿಗೆ ಸ್ಕ್ರೀನ್ ಗಾತ್ರ ಹೆಚ್ಚಾದಂತೆ ಕಣ್ಣಿಗೆ ಆಯಾಸವಾಗುವುದಿಲ್ಲ. ಆದ್ದರಿಂದ ಡಿಸ್ಪ್ಲೇನಲ್ಲಿ ಕಾಣುವ ಟೆಕ್ಸ್ಟ್ನ ಗಾತ್ರ, ಫೋಟೋ ಗಾತ್ರ ಇವೆಲ್ಲವನ್ನು ಸೆಟ್ ಮಾಡಿಟ್ಟುಕೊಳ್ಳುವುದರಿಂದ ಬಹಳಷ್ಟು ಸಹಕಾರಿಯಾಗುತ್ತದೆ. ಇದರಿಂದ ಕಣ್ಣಿನ ಮೇಲಾಗುವಂತಹ ತೊಂದರೆಯನ್ನು ತಪ್ಪಿಸಬಹುದು.
ಕಂಪ್ಯೂಟರ್ ಕನ್ನಡಕ: ದೃಷ್ಟಿದೋಷವಿದ್ದರೆ ಸಾಮಾನ್ಯವಾಗಿ ಕನ್ನಡಕವನ್ನು ಧರಿಸುತ್ತಾರೆ. ಆದರೆ ಡಿಜಿಟಲ್ ಪರದೆಯ ಮೇಲೆ ಹೆಚ್ಚು ಸಮಯ ಕಳೆಯುವವರು ಕಣ್ಣಿನ ಆಯಾಸವನ್ನು ಕಡಿಮೆ ಮಾಡಲು ಕಂಪ್ಯೂಟರ್ ಕನ್ನಡಕವನ್ನು ಸಹ ಧರಿಸಬೇಕು. ಈ ಕನ್ನಡಕದ ಸಹಾಯದಿಂದ, ಕಣ್ಣುಗಳ ಮೇಲೆ ನೀಲಿ ಬೆಳಕಿನ ಪರಿಣಾಮವು ಕಡಿಮೆಯಾಗುತ್ತದೆ. ಇದರೊಂದಿಗೆ, ನೀವು ಪರದೆಯ ಮೇಲೆ ಹೆಚ್ಚು ಸಮಯ ಕಳೆದರೂ, ಕಣ್ಣುಗಳ ಮೇಲಿನ ಒತ್ತಡವು ಅಷ್ಟಾಗಿ ಇರುವುದಿಲ್ಲ.