ಟೆಕ್ನೋ ಪಾಪ್ 6 ಪ್ರೋ ಸ್ಮಾರ್ಟ್ಫೋನ್ನ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದು 6.6 ಇಂಚಿನ ಹೆಚ್ಡಿ+ ಡಿಸ್ಪ್ಲೇಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್ಫೋನ್ ಡಿಸ್ಪ್ಲೇ ಬಗ್ಗೆ ಹೇಳುವುದಾದರೆ ಇದರ ರೆಸಲ್ಯೂಶನ್ 720 × 1612 ಪಿಕ್ಸೆಲ್ಗಳನ್ನು ಹೊಂದಿದೆ. ಫೋನ್ನಲ್ಲಿ ಡೆಮೆನ್ಸಿಟಿ 270 PPI ಡಿಸ್ಪ್ಲೇಯನ್ನು ನೀಡಲಾಗಿದೆ ಮತ್ತು ಅದರ ಟಚ್ ಸ್ಲ್ಯಾಪ್ ಮಾದರಿ ರೇಟ್ 120 Hz ಆಗಿದೆ. ಇದಲ್ಲದೆ, ಫೋನ್ ಡಿಸ್ಪ್ಲೇನಲ್ಲಿ ವಾಟರ್ ಡ್ರಾಪ್ ನಾಚ್ ಅನ್ನು ಸಹ ನೀಡಲಾಗಿದೆ.
ಈ ಫೋನ್ನಲ್ಲಿ ಗ್ರಾಹಕರಿಗೆ 2ಜಿಬಿ ರ್ಯಾಮ್ ಮತ್ತು 32ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ವವನ್ನು ನೀಡಲಾಗಿದೆ. ಜೊತೆಗೆ ಮೈಕ್ರೋ ಎಸ್ಡಿ ಕಾರ್ಡ್ ಮೂಲಕ ಸ್ಟೋರೇಜ್ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಬಹುದು. ಇನ್ನು ಈ ಸ್ಮಾರ್ಟ್ಫೋನಮ್ ಆಂಡ್ರಾಯ್ಡ್ 12 ಗೋ ವರ್ಷನ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್ಫೋನ್ ಕ್ವಾಡ್ ಕೋರ್ ಮೀಡಿಯಾಟೆಕ್ ಹೆಲಿಯೋ ಎ22 ಪ್ರೊಸೆಸರ್ ಅನ್ನು ಹೊಂದಿದೆ.