ಡೂಗೀ ವಿ ಮ್ಯಾಕ್ಸ್ ಫೋನ್ 22 ಸಾವಿರ mAh ಬ್ಯಾಟರಿ ಹೊಂದಿರಲಿದೆಯಂತೆ. Oukitel WP19 ಫೋನ್ 21 ಸಾವಿರ mAh ಬ್ಯಾಟರಿಯನ್ನು ಹೊಂದಿದೆ. ಅಂದರೆ ಹೊಸದಾಗಿ ಬಿಡುಗಡೆಯಾಗುತ್ತಿರುವ ಈ ಡೂಗೀ ಸ್ಮಾರ್ಟ್ಫೋನ್ ಈ ಹಿಂದೆ ಇದ್ದ ಫೋನ್ ಅನ್ನು ಸೋಲಿಸಲಿದೆ. ಈ ಬ್ಯಾಟರಿಯು ಚಾರ್ಜ್ ಮಾಡಲು 33 ವ್ಯಾಟ್ ಚಾರ್ಜಿಂಗ್ ವೇಗವನ್ನು ಹೊಂದಿದೆ. ಜೊತೆ ಯುಎಸ್ಬಿ ಟೈಪ್-ಸಿ ಮಾದರಿಯ ಚಾರ್ಜರ್ ಅನ್ನು ಹೊಂದಿದೆ.
ಆದರೆ ಡೂಗೀ ವಿ ಮ್ಯಾಕ್ಸ್ ಸ್ಮಾರ್ಟ್ಫೋನ್ ನೋಡಲು ದೊಡ್ಡದಾಗಿದೆ. ಇದು 27.3 ಮಿಮೀ ದಪ್ಪವನ್ನು ಹೊಂದಿದೆ. ತೂಕ ಎಷ್ಟು ಎಂದು ಇನ್ನೂ ಬಹಿರಂಗವಾಗಿಲ್ಲ. ಇನ್ನು ಡೂಗೀ ವಿ ಮ್ಯಾಕ್ಸ್ ಸ್ಮಾರ್ಟ್ಫೋನ್ 6.58 ಇಂಚಿನ ಫುಲ್ ಹೆಚ್ಡಿ ಡಿಸ್ಪ್ಲೇಯನ್ನು ಹೊಂದಿದೆ. ಜೊತೆಗೆ 120 Hz ನ ರಿಫ್ರೆಶ್ ರೇಟ್ನೊಂದಿಗೆ ಬರಲಿದೆ. ಜೊತೆಗೆ ಈ ಡಿಸ್ಪ್ಲೇನ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ ಅನ್ನು ಅಳವಡಿಸಲಾಗಿದೆ.
ಇನ್ನು ಈ ಸ್ಮಾರ್ಟ್ಫೋನ್ ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುವ ಸಾಧ್ಯತೆಯಿದೆ. ಇದರಲ್ಲಿ 108 ಮೆಗಾಪಿಕ್ಸೆಲ್ ಮಯಖ್ಯ ಕ್ಯಾಮೆರಾ, 20 ಮೆಗಾಪಿಕ್ಸೆಲ್ ಮತ್ತು 16 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾಗಳನ್ನು ಹೊಂದಿರುತ್ತದೆ. ಇದರಿಂದ ಉತ್ತಮ ಗುಣಮಟ್ಟದ ಕ್ಯಾಮೆರಾವನ್ನು ಹೊಂದಿದ ಸ್ಮಾರ್ಟ್ಫೋನ್ ಆಗಲಿದೆ.
ಡೂಗೀ ವಿ ಮ್ಯಾಕ್ಸ್ ಸ್ಮಾರ್ಟ್ಫೋನ್- ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಮೀಡಿಯಾಟೆಕ್ ಡೈಮೆನ್ಶಿಯಾ 1080 ಪ್ರೋ ಅನ್ನು ಹೊಂದಿರುತ್ತದೆ. ಇನ್ನು ಇದರ ಸ್ಟೋರೇಜ್ ಸಾಮರ್ಥ್ಯದ ಬ್ಗೆ ಹೇಳುವುದಾದರೆ ಇದು 12 ಜಿಬಿ ರ್ಯಾಮ್ ಅನ್ನು ಸಹ ಹೊಂದಿದೆ. ಇದನ್ನು 19 ಜಿಬಿರ್ಯಾಮ್ ವರೆಗೆ ವಿಸ್ತರಿಸುವ ಅವಕಾಶವೂ ಇದೆ. ಇನ್ನು ಈ ಸ್ಮಾರ್ಟ್ಫೊನ್ 256 ಜಿಬಿ ಇಂಟರ್ನಲ್ ಸ್ಟೋರೇಜ್ ಆಯ್ಕೆಯಲ್ಲಿ ಬರುತ್ತದೆ.
ಎನ್ಎಫ್ಸಿ, ಸೈಡ್ ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸಾರ್, 5ಜಿ ಕನೆಕ್ಟಿವಿಟಿಯಂತಹ ಫೀಚರ್ಗಳನ್ನು ಈ ಸ್ಮಾರ್ಟ್ಫೊನ್ ಹೊಂದಿದೆ. ಆದರೆ ಈ ಫೋನ್ ಯಾವಾಗ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಎಂಬುದರ ಮಾಹಿತಿ ಬಿಡುಗಡೆಯಾಗಿಲ್ಲ.. ಮುಂದಿನ ತಿಂಗಳು ಅಂದರೆ ಫೆಬ್ರವರಿಯಲ್ಲಿ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ. ಇದರ ದರ ರೂ. 45 ಸಾವಿರದವರೆಗೂ ಇರಬಹುದು. ಎಂದು ಅಂದಾಜಿಸಲಾಗಿದೆ. ಹಾಗೇ ಭಾರತದಲ್ಲಿ ಬಿಡುಗಡೆಯಾಗುವ ಬಗ್ಗೆ ಯಾವುದೇ ಮಾಹಿತಿಯನ್ನು ಕಂಪೆನಿ ಬಹಿರಂಗಪಡಿಸಿಲ್ಲ.