ಮೆಟಾ ಒಡೆತನದ ವೇಗದ ಸಂದೇಶ ಕಳುಹಿಸುವ ವೇದಿಕೆಯೆಂದರೆ ಅದು ವಾಟ್ಸಾಪ್ . ಈ ಅಪ್ಲಿಕೇಶನ್ ಇದೀಗ ಮತ್ತೊಂದು ಹೊಸ ವೈಶಿಷ್ಟ್ಯವನ್ನು ತನ್ನ ಗ್ರಾಹಕರಿಗೆ ಬಿಡುಗಡೆ ಮಾಡಿದೆ. ಇದೀಗ ವಾಟ್ಸಾಪ್ನಲ್ಲಿ ಶೀಘ್ರದಲ್ಲೇ 'ಬ್ಲಾಕ್' ವೈಶಿಷ್ಟ್ಯಕ್ಕೆ ಶಾರ್ಟ್ಕಟ್ ಅನ್ನು ಒದಗಿಸಲು ಪ್ರಯತ್ನಗಳು ನಡೆಯುತ್ತಿವೆ. ಈ ಆಯ್ಕೆಯು ಪ್ರಸ್ತುತ ಬೀಟಾ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಎಲ್ಲಾ ಪ್ರಯತ್ನದ ನಂತರ ಇದು ಎಲ್ಲಾ ವಾಟ್ಸಾಪ್ ಬಳಕೆದಾರರಿಗೆ ಲಭ್ಯವಿರುತ್ತದೆ. ಈ ವೈಶಿಷ್ಟ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ? ಎಂಬುದನ್ನು ಈ ಕೆಳಗಿನ ಲೇಖನದಲ್ಲಿ ಓದಿ.
ಹಿಂದಿನ ಬ್ಲಾಕ್ ಫೀಚರ್: ಸಾಮಾನ್ಯವಾಗಿ ಬಳಕೆದಾರರು ಕಾಂಟ್ಯಾಕ್ಟ್ನಲ್ಲಿರುವ ಜನರನ್ನು ಬ್ಲಾಕ್ ಮಾಡಲು ಬಯಸಿದರೆ, ಚಾಟ್ ವಿಂಡೋದಲ್ಲಿ ಆ ವ್ಯಕ್ತಿಯ ಚಾಟ್ ಪೇಜ್ ಅನ್ನು ಓಪನ್ ಮಾಡಬೇಕು. ನಂತರ ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ ಮತ್ತು ಮೆನು ಆಯ್ಕೆ ಓಪನ್ ಆಗುತ್ತದೆ. ಅಲ್ಲಿ ನೀವು ಮೋರ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದರೆ ಅಲ್ಲಿ ಬ್ಲಾಕ್ ಆಯ್ಕೆಯನ್ನು ಕಾಣಬಹುದು. ನೀವು ಅದನ್ನು ಕ್ಲಿಕ್ ಮಾಡಿದರೆ, ಆ ಸಂಖ್ಯೆಯಿಂದ ಯಾವುದೇ ಮೆಸೇಜ್ಗಳು, ಕಾಲ್ಗಳು ಬರುವುದಿಲ್ಲ.
ಹೊಸ ವೈಶಿಷ್ಟ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ? : ವಾಟ್ಸಾಪ್ನ ಈ ಹೊಸ ಫೀಚರ್ ಮೂಲಕ ನೀವು ಚಾಟ್ ಪೇಜ್ ಅನ್ನು ಓಪನ್ ಮಾಡದೆಯೇ ಡೈರೆಕ್ಟ್ ಆಗಿ ಬ್ಲಾಕ್ ಮಾಡಬಹುದು. ಚಾಟ್ ವಿಂಡೋದಲ್ಲಿ ಕಾಂಟ್ಯಾಕ್ಟ್ ಮೇಲೆ ಹೋಲ್ಡ್ ಮಾಡಿ ಪ್ರೆಸ್ಸ್ ಮಾಡ್ಬೇಕು. ಆಗ ಆ ಕಾಂಟ್ಯಾಕ್ಟ್ ಸೆಲೆಕ್ಟ್ ಆಗಿದೆ ಎಂದು ತೋರಿಸುತ್ತದೆ. ಅದರ ನಂತರ, ನೀವು ಮೇಲಿನ ಬಲಭಾಗದಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿದರೆ, ಮೆನು ಓಪನ್ ಆಗುತ್ತದೆ. ಅಲ್ಲಿ ನೀವು ಬ್ಲಾಕ್ ಆಯ್ಕೆಯನ್ನು ಸೆಲೆಕ್ಟ್ ಮಾಡಿದ್ರೆ ನೀವು ಸೆಲೆಕ್ಟ್ ಮಾಡಿದ ಕಾಂಟ್ಯಾಕ್ಟ್ ಬ್ಲಾಕ್ ಪಟ್ಟಿಗೆ ಸೇರುತ್ತದೆ.
ವಾಬೀಟಾಇನ್ಫೋ ದ ವರದಿಯ ಪ್ರಕಾರ, ವಾಟ್ಸಾಪ್ ಕಂಪನಿಯು ನಾಟಿಫಿಕೇಶನ್ ಆಯ್ಕೆಯಲ್ಲಿ ಬ್ಲಾಕ್ ಶಾರ್ಟ್ಕಟ್ ಅನ್ನು ಬಳಕೆದಾರರಿಗೆ ಒದಗಿಸುವುದಾಗಿ ಹೇಳಿದೆ. ಆದರೆ ಪ್ರತಿ ಬಾರಿಯೂ ಬ್ಲಾಕ್ ಆಯ್ಕೆಯು ನಾಟಿಫಿಕೇಶನ್ ಗಳಲ್ಲಿ ಕಾಣಿಸುವುದಿಲ್ಲ. ಅಪರಿಚಿತ ಮತ್ತು ವಿಶ್ವಾಸಾರ್ಹವಲ್ಲದ ಕಾಂಟ್ಯಾಕ್ಟ್ನಿಂದ ಮೆಸೇಜ್ಗಳು ಬಂದಾಗ ಮಾತ್ರ ನಾಟಿಫಿಕೇಶನ್ನಲ್ಲಿ ಬ್ಲಾಕ್ ಆಯ್ಕೆ ಕಾಣಿಸಿಕೊಳ್ಳುತ್ತದೆ ಎಂದು ವರದಿ ಹೇಳಿದೆ.
ಅಪರಿಚಿತ ಕಾಂಟ್ಯಾಕ್ಟ್ಗಳನ್ನು ಬ್ಲಾಕ್ ಮಾಡಲು ಮಾತ್ರ ಈ ಬ್ಲಾಕ್ ಆಯ್ಕೆಯ ಅಗತ್ಯವಿದೆ. ಈಗಾಗಲೇ ಸೇವ್ ಇರುವ ಕಾಂಟ್ಯಾಕ್ಟ್ಗಳಿಗೆ ಚಾಟ್ ಮಾಡುವ ಸಂದರ್ಭದಲ್ಲಿ, ತಪ್ಪಾಗಿ ಬ್ಲಾಕ್ ಆಯ್ಕೆಯನ್ನು ಕ್ಲಿಕ್ ಮಾಡುವ ಸಾಧ್ಯತೆಯಿದೆ. ಅಂತಹ ಸಮಸ್ಯೆಗಳನ್ನು ತಪ್ಪಿಸಲು ಅಪರಿಚಿತ ಕಾಂಂಟ್ಯಾಕ್ಟ್ಗಳಿಗೆ ಮಾತ್ರ ನಾಟಿಫೀಕೇಶನ್ ಕಾಣಬೇಕು ಎಂದು ತಂತ್ರಜ್ಞರು ಅಭಿಪ್ರಾಯ ತಿಳಿಸಿದ್ದಾರೆ. ಈ ಬ್ಲಾಕ್ ಫೀಚರ್ ಶಾರ್ಟ್ಕಟ್ ಶೀಘ್ರದಲ್ಲೇ ವಾಟ್ಸಾಪ್ ಅನ್ನು ಅಪ್ಡೇಟ್ ಮಾಡಿದಾಗ ಲಭ್ಯವಿರುತ್ತದೆ ಎಂದು ವರದಿಯಾಗಿದೆ.