KYC Fraud: ಕ್ರೆಡಿಟ್ ಕಾರ್ಡ್ ಜೊತೆಗೆ ಉಚಿತ ಸ್ಮಾರ್ಟ್ ಫೋನ್ ಆಫರ್! ಫ್ರೀ ಸಿಕ್ತು ಅಂತ ಖರೀದಿಸಿದವಳ 7 ಲಕ್ಷ ಮಂಗಮಾಯ!

KYC Fraud: ಇತ್ತೀಚೆಗೆ ಸೈಬರ್ ವಂಚಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೊಸ ಹೊಸ ಮಾದರಿಯಲ್ಲಿ ಜನರನ್ನು ವಂಚನೆ ಮಾಡಲು ಹ್ಯಾಕರ್ಸ್ ಐಡಿಯಾ ಮಾಡುತ್ತಲೇ ಇರುತ್ತಾರೆ. ಅದೇ ರೀತಿ ಇಲ್ಲೊಬ್ಬ ವಂಚಕ ಉಚಿತ ಸ್ಮಾರ್ಟ್​​ಫೋನ್ ನೀಡುವ ಮೂಲಕ ಬರೋಬ್ಬರಿ 7 ಲಕ್ಷ ರೂಪಾಯಿ ದೋಚಿದ್ದಾನೆ.

First published:

  • 18

    KYC Fraud: ಕ್ರೆಡಿಟ್ ಕಾರ್ಡ್ ಜೊತೆಗೆ ಉಚಿತ ಸ್ಮಾರ್ಟ್ ಫೋನ್ ಆಫರ್! ಫ್ರೀ ಸಿಕ್ತು ಅಂತ ಖರೀದಿಸಿದವಳ 7 ಲಕ್ಷ ಮಂಗಮಾಯ!

    ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರಿಮಿನಲ್‌ಗಳು ಹೊಸ ಹೊಸ ರೀತಿಯಲ್ಲಿ ಜನರಿಗೆ ಕಿರುಕುಳ ನೀಡಲು ಮುಂದಾಗಿದ್ದಾರೆ. ದೇಶದೆಲ್ಲೆಡೆ ಹೊಸ ರೀತಿಯ ಸೈಬರ್ ವಂಚನೆಗಳು ಇತ್ತೀಚೆಗೆ ಹುಟ್ಟಿಕೊಳ್ಳುತ್ತಿವೆ. ಅದರಲ್ಲೂ ಇತ್ತೀಚೆಗೆ ಮುಂಬೈನಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಈ ಪೈಕಿ ಬ್ಯಾಂಕ್ ವಿವರಗಳ ಹ್ಯಾಕ್​, ಕೆವೈಸಿ ವಂಚನೆಯಂತಹ ಪ್ರಕರಣಗಳೇ ಹೆಚ್ಚು ಅಂತಾನೇ ಹೇಳ್ಬಹುದು.

    MORE
    GALLERIES

  • 28

    KYC Fraud: ಕ್ರೆಡಿಟ್ ಕಾರ್ಡ್ ಜೊತೆಗೆ ಉಚಿತ ಸ್ಮಾರ್ಟ್ ಫೋನ್ ಆಫರ್! ಫ್ರೀ ಸಿಕ್ತು ಅಂತ ಖರೀದಿಸಿದವಳ 7 ಲಕ್ಷ ಮಂಗಮಾಯ!

    ಮುಂಬೈ ನಗರದ ಸುಮಾರು 40 ಪೊಲೀಸ್ ಠಾಣೆಗಳಲ್ಲಿ ವಂಚಕರು ಕಳುಹಿಸಿರುವ ಲಿಂಕ್ ಗಳನ್ನು ಕ್ಲಿಕ್ ಮಾಡಿ ಹಣ ಕಳೆದುಕೊಂಡ ಪ್ರಕರಣಗಳು ವರದಿಯಾಗಿವೆ. ವಂಚಕರು ಇತ್ತೀಚೆಗೆ ಹೊಸ ರೀತಿಯ ವಂಚನೆಯನ್ನು ಮಾಡಲು ಆರಂಭಿಸಿದ್ದಾರೆ. ಸ್ಮಾರ್ಟ್​​ಫೋನ್ ಅನ್ನು ಉಚಿತವಾಗಿ ನೀಡುವ ಮೂಲಕ ವಂಚನೆ ಮಾಡಲು  ಮುಂದಾಗಿದ್ದಾರೆ. ಇದರ ಕಂಪ್ಲೀಟ್ ಮಾಹಿತಿ ಈ ಲೇಖನದಲ್ಲಿದೆ ಓದಿ.

    MORE
    GALLERIES

  • 38

    KYC Fraud: ಕ್ರೆಡಿಟ್ ಕಾರ್ಡ್ ಜೊತೆಗೆ ಉಚಿತ ಸ್ಮಾರ್ಟ್ ಫೋನ್ ಆಫರ್! ಫ್ರೀ ಸಿಕ್ತು ಅಂತ ಖರೀದಿಸಿದವಳ 7 ಲಕ್ಷ ಮಂಗಮಾಯ!

    ಉಚಿತ ಆಂಡ್ರಾಯ್ಡ್ ಫೋನ್ ಆಫರ್: ಈ ವರ್ಷದ ಜನವರಿಯಲ್ಲಿ, ಪನ್ವೆಲ್‌ನ 40 ವರ್ಷದ ಮಹಿಳೆಯನ್ನು ವಂಚಕ ಸೌರಭ್ ಶರ್ಮಾ ಸಂಪರ್ಕಿಸಿದ್ದ. ತಾನು ಬ್ಯಾಂಕ್ ಉದ್ಯೋಗಿ ಎಂದು ಈ ಸಂದರ್ಭದಲ್ಲಿ ಪರಿಚಯಿಸಿಕೊಂಡಿದ್ದಾನೆ.

    MORE
    GALLERIES

  • 48

    KYC Fraud: ಕ್ರೆಡಿಟ್ ಕಾರ್ಡ್ ಜೊತೆಗೆ ಉಚಿತ ಸ್ಮಾರ್ಟ್ ಫೋನ್ ಆಫರ್! ಫ್ರೀ ಸಿಕ್ತು ಅಂತ ಖರೀದಿಸಿದವಳ 7 ಲಕ್ಷ ಮಂಗಮಾಯ!

    ಈ ಸಂದರ್ಭದಲ್ಲಿ ಅವನು ಅವಳಿಗೆ ಕ್ರೆಡಿಟ್ ಕಾರ್ಡ್ ಕೊಟ್ಟು, ಈ ಮೂಲಕ ನಗರದ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಸದಸ್ಯತ್ವ ದೊರೆಯಲಿದೆ ಎಂದಿದ್ದಾರೆ. ಈ ಮಾತನ್ನೆಲ್ಲಾ ನಂಬಿದ ಆಕೆ ನಂತರ ಅವನು ಕೇಳಿದ ಡೀಟೇಲ್ಸ್​ಗಳನ್ನು ನೀಡಿದ್ದಾಳೆ ಮತ್ತು ಕ್ರೆಡಿಟ್ ಕಾರ್ಡ್​ ತೆಗೆದುಕೊಳ್ಳಲು ನಿರ್ಧರಿಸಿದ್ದಾಳೆ.

    MORE
    GALLERIES

  • 58

    KYC Fraud: ಕ್ರೆಡಿಟ್ ಕಾರ್ಡ್ ಜೊತೆಗೆ ಉಚಿತ ಸ್ಮಾರ್ಟ್ ಫೋನ್ ಆಫರ್! ಫ್ರೀ ಸಿಕ್ತು ಅಂತ ಖರೀದಿಸಿದವಳ 7 ಲಕ್ಷ ಮಂಗಮಾಯ!

    ಆದರೆ ಮಹಿಳೆ ಐಫೋನ್ ಬಳಸುತ್ತಿದ್ದಾರೆ. ಆ್ಯಂಡ್ರಾಯ್ಡ್ ಸಾಧನವನ್ನು ಬಳಸಿದರೆ ಮಾತ್ರ ಕ್ರೆಡಿಟ್ ಕಾರ್ಡ್ ಅನ್ನು ಸಕ್ರಿಯಗೊಳಿಸಲಾಗುತ್ತದೆ ಎಂದು ವಂಚಕರು ಹೇಳಿದ್ದಾರೆ. ಅಲ್ಲದೇ ಆಕೆಗೆ ಉಚಿತವಾಗಿ ಸ್ಮಾರ್ಟ್ ಫೋನ್ ಕಳುಹಿಸುವುದಾಗಿ ತಿಳಿಸಿದ್ದು, ಕ್ರೆಡಿಟ್ ಕಾರ್ಡ್ ಆ್ಯಕ್ಟಿವೇಟ್ ಮಾಡಿದ ನಂತರ ಆಕೆ ಆ ಫೋನ್ ಬಳಸಬಹುದು ಎಂದು ಹೇಳಿದ್ದಾರೆ.

    MORE
    GALLERIES

  • 68

    KYC Fraud: ಕ್ರೆಡಿಟ್ ಕಾರ್ಡ್ ಜೊತೆಗೆ ಉಚಿತ ಸ್ಮಾರ್ಟ್ ಫೋನ್ ಆಫರ್! ಫ್ರೀ ಸಿಕ್ತು ಅಂತ ಖರೀದಿಸಿದವಳ 7 ಲಕ್ಷ ಮಂಗಮಾಯ!

    ಹೀಗಾಗಿ ಮಹಿಳೆ ಶರ್ಮಾಗೆ ಫೋನ್ ಕಳುಹಿಸುವಂತೆ ತನ್ನ ಮನೆಯ ವಿಳಾಸವನ್ನು ಕಳುಹಿಸಿದ್ದಾಳೆ. ಅವಳು ಈಗಾಗಲೇ ಕ್ರೆಡಿಟ್ ಕಾರ್ಡ್‌ಗಾಗಿ ತನ್ನ ಆಧಾರ್ ಮತ್ತು ಇತರ ವಿವರಗಳನ್ನು ಅವನೊಂದಿಗೆ ಹಂಚಿಕೊಂಡಿದ್ದಳು. ಅಡ್ರೆಸ್ ಕಳಿಸಿದ ದಿನವೇ ಮನೆಗೆ ಫೋನ್ ಬಂತು. ಇದು DOT ಸೆಕ್ಯೂರ್ ಮತ್ತು ಸೆಕ್ಯೂರ್ ಎನ್ವಾಯ್ ಅಥೆಂಟಿಕೇಟರ್ ಎಂಬ ಎರಡು ಅಪ್ಲಿಕೇಶನ್‌ಗಳನ್ನು ಒಳಗೊಂಡಿರುತ್ತದೆ.

    MORE
    GALLERIES

  • 78

    KYC Fraud: ಕ್ರೆಡಿಟ್ ಕಾರ್ಡ್ ಜೊತೆಗೆ ಉಚಿತ ಸ್ಮಾರ್ಟ್ ಫೋನ್ ಆಫರ್! ಫ್ರೀ ಸಿಕ್ತು ಅಂತ ಖರೀದಿಸಿದವಳ 7 ಲಕ್ಷ ಮಂಗಮಾಯ!

    ರೂ.7 ಲಕ್ಷಕ್ಕೆ ಶಾಪಿಂಗ್: ಮಹಿಳೆ ತನ್ನ ಸಿಮ್ ಕಾರ್ಡ್ ಅನ್ನು ಈ ಹೊಸದಾಗಿ ಬಂದ ಆಂಡ್ರಾಯ್ಡ್ ಫೋನ್‌ನಲ್ಲಿ ಸೇರಿಸುತ್ತಾಳೆ. ಕ್ರೆಡಿಟ್ ಕಾರ್ಡ್ ಅನ್ನು ಸಕ್ರಿಯಗೊಳಿಸಲು ವಂಚಕ ನೀಡಿದ ಸೂಚನೆಗಳನ್ನು ಅನುಸರಿಸಿದೆ. ಈ ಪ್ರಕ್ರಿಯೆಯ ಕೆಲವು ಗಂಟೆಗಳ ನಂತರ, ಮಹಿಳೆಗೆ ಬ್ಯಾಂಕ್ ವಹಿವಾಟಿನಲ್ಲಿ 7 ಲಕ್ಷ ರೂಪಾಯಿ ವಂಚನೆಯಾಗಿದೆ ಎಂದು ನೋಟಿಫಿಕೇಶನ್ ಬಂದಿದೆ.

    MORE
    GALLERIES

  • 88

    KYC Fraud: ಕ್ರೆಡಿಟ್ ಕಾರ್ಡ್ ಜೊತೆಗೆ ಉಚಿತ ಸ್ಮಾರ್ಟ್ ಫೋನ್ ಆಫರ್! ಫ್ರೀ ಸಿಕ್ತು ಅಂತ ಖರೀದಿಸಿದವಳ 7 ಲಕ್ಷ ಮಂಗಮಾಯ!

    ಇನ್ನು ಅದೇ ದಿನ ಬ್ಯಾಂಕ್ ರಜೆ ಇದ್ದ ಕಾರಣ ಆಕೆಗೆ ವಹಿವಾಟಿನ ವಿವರಗಳನ್ನು ಪರಿಶೀಲಿಸಲಾಗಲಿಲ್ಲ. ಮರುದಿನ, ಖಂಡೇಶ್ವರ್ ಬ್ಯಾಂಕ್ ಅನ್ನು ಸಂಪರ್ಕಿಸಿ, ವ್ಯವಹಾರದ ವಿವರಗಳನ್ನು ಸಂಗ್ರಹಿಸಿ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಐಪಿಸಿ ಸೆಕ್ಷನ್ 419, 420 ಮತ್ತು ಐಟಿ ಕಾಯ್ದೆಯ 66(ಸಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    MORE
    GALLERIES