ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿಯಾಗಿರುವ ಬಿಎಸ್ಎನ್ಎಲ್ ಇದೀಗ ಹೊಸ ರೀಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಬಿಎಸ್ಎನ್ಎಲ್ ರೂ. 1999 ಪ್ರಿಪೇಯ್ಡ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಇದು ವಾರ್ಷಿಕ ರೀಚಾರ್ಜ್ ಯೋಜನೆಯಾಗಿದೆ. ಗ್ರಾಹಕರು ಒಮ್ಮೆ ರೀಚಾರ್ಜ್ ಮಾಡಿದರೆ, ಇಡೀ ವರ್ಷಕ್ಕೆ ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ.