ಸಾಮಾನ್ಯವಾಗಿ 28 ದಿನಗಳು, 56 ದಿನಗಳು ಮತ್ತು 84 ದಿನಗಳ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳು ರಿಲಯನ್ಸ್ ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾದಿಂದ ಬಿಡುಗಡೆಯಾಗುತ್ತವೆ. ಆದರೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಆದೇಶದೊಂದಿಗೆ ಟೆಲಿಕಾಂ ಕಂಪನಿಗಳು 30 ದಿನಗಳ ಮಾನ್ಯತೆಯೊಂದಿಗೆ ಯೋಜನೆಗಳನ್ನು ರಚಿಸಿವೆ. ಹಾಗಿದ್ರೆ ಆ ಯೋಜನೆಗಳು ಯಾವುದೆಲ್ಲಾ ಎಂಬುದನ್ನು ಈ ಕೆಳಗಿನ ಲೇಖನದಲ್ಲಿ ತಿಳೀಯೋಣ.
ಜಿಯೋ ರೂ 296 ಯೋಜನೆ: ಜಿಯೋನ 296 ರೂಪಾಯಿಯ ರೀಚಾರ್ಜ್ ಪ್ಲಾನ್ ಕೂಡ 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದರಲ್ಲಿ ಗ್ರಾಹಕರು ಒಟ್ಟು 25ಜಿಬಿ ಡೇಟಾವನ್ನು ಪಡೆಯುತ್ತಾರೆ. ಜೊತೆಗೆ ನೀವು ಅನ್ಲಿಮಿಟೆಡ್ ಕಾಲ್ ಅನ್ನು ಮಾಡಬಹುದು. ಈ ಪ್ಲಾನ್ನಲ್ಲಿ ಪ್ರತಿದಿನ 100 ಎಸ್ಎಮ್ಎಸ್ ಕೂಡ ಉಚಿತವಾಗಿರುತ್ತದೆ. ಜಿಯೋ ಟಿವಿ, ಜಿಯೋ ಸಿನೆಮಾ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್ ಇವೆಲ್ಲದರ ಚಂದಾದಾರಿಕೆ ಉಚಿತವಾಗಿ ಪಡೆಯಬಹುದು.
ವೊಡಫೋನ್ ಐಡಿಯಾದ 327 ರೂಪಾಯಿ ಯೋಜನೆ:ವೊಡಫೋನ್ ಐಡಿಯಾದ 327 ರೂಪಾಯಿ ರೀಚಾರ್ಜ್ ಪ್ಲಾನ್ ಕೂಡ 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಇದರಲ್ಲಿ ಕೂಡ 25ಜಿಬಿ ಡೇಟಾವನ್ನು ಬಳಸಬಹುದು. ಇನ್ನು ಈ ಯೋಜನೆಯಲ್ಲಿ ಅನ್ಲಿಮಿಟೆಡ್ ಕಾಲ್ ಕೂಡ ಮಾಡಬಹುದು. ಪ್ರತಿದಿನ 100 ಎಸ್ಎಮ್ಎಸ್ ಅನ್ನು ಪಡೆಯಬಹುದು. ವೊಡಫೋನ್ ಐಡಿಯಾ ಸಿನೆಮಾದ ಉಚಿತ ಚಂದಾದಾರಿಕೆ ಕೂಡ ಪಡೆಯಬಹುದು.