ಅವುಗಳಲ್ಲಿ ವಿವೋ ಎಕ್ಸ್90, ವಿವೋ ಎಕ್ಸ್ 90 ಪ್ರೋ ಮತ್ತು ವಿವೋ ಎಕ್ಸ್90 ಪ್ರೋ+ ಎಂಬ ಸ್ಮಾರ್ಟ್ಫೋನ್ಗಳನ್ನು ಒಳಗೊಂಡಿದೆ. ಈ ಸೀರಿಸ್ ಅನ್ನು ಕಂಪನಿಯು ಕಳೆದ ತಿಂಗಳು ಚೀನಾದಲ್ಲಿ ಪ್ರಾರಂಭಿಸಿತು. ಈಗ ವಿವೋ ಕಂಪನಿ ಇದನ್ನು ಭಾರತ ಮತ್ತು ಇತರ ದೇಶಗಳಲ್ಲಿ ಪ್ರಾರಂಭಿಸಲು ನಿರ್ಧರಿಸಿದೆ. ಆದರೆ, ಅದರ ಬಿಡುಗಡೆಯ ದಿನಾಂಕದ ಬಗ್ಗೆ ಇನ್ನೂ ಯಾವುದೇ ಮಾಹಿತಿ ನೀಡಲಾಗಿಲ್ಲ.
ಇನ್ನು ಈ ಸ್ಮಾರ್ಟ್ಫೋನ್ನ ಕ್ಯಾಮೆರಾ ಫೀಚರ್ಸ್ ಬಗ್ಗೆ ಮಾತನಾಡುವುದಾದರೆ ಇದು ಝೈಸ್ ಟಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50MP ಸೋನಿ IMX866 ಆಗಿದೆ, ಇದರೊಂದಿಗೆ ನೀವು OIS ಬೆಂಬಲವನ್ನು ಸಹ ಪಡೆಯಬಹುದು. ಅದೇ ಸಮಯದಲ್ಲಿ, 50MP ಸೋನಿ IMX663 ನ ಅಲ್ಟ್ರಾ-ವೈಡ್ ಸೆನ್ಸಾರ್ ಅನ್ನು ಹೊಂದಿದೆ. ಇನ್ನು ಈ ಮೊಬೈಲ್ನ ಮೂರನೇ ಕ್ಯಾಮೆರಾ 12MP ಸೋನಿ IMX663 ನ ಟೆಲಿಫೋಟೋ ಸೆನ್ಸಾರ್ ಅನ್ನು ಹೊಂದಿದೆ.
ವಿವೋ ಎಕ್ಸ್90 ಸ್ಮಾರ್ಟ್ಫೋನ್ 4,870mAh ಬ್ಯಾಟರಿಯೊಂದಿಗೆ 120W ವೇಗದ ಚಾರ್ಜಿಂಗ್ಗೆ ಬೆಂಬಲವನ್ನು ನೀಡುತ್ತದೆ. ಇದಲ್ಲದೆ, ಈ ಸಾಧನವು 50W ವೈರ್ಲೆಸ್ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿರಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ, ಈ ಸಾಧನದಲ್ಲಿ 5ಜಿ, 4ಜಿ LTE, Wi-Fi 6, ಬ್ಲೂಟೂತ್ 5.3, GPS ಮತ್ತು ಯುಎಸ್ಬಿ ಟೈಪ್ ಸಿ ಪೋರ್ಟ್ನಂತಹ ಫೀಚರ್ಸ್ಗಳನ್ನು ಅಳವಡಿಸಲಾಗಿದೆ.