2022 Hyundai Elantra N Line: ಹ್ಯುಂಡೈ ಎಲಾಂಟ್ರಾ ಎನ್ ಕಾರನ್ನು ಅನಾವರಣಗೊಳಿಸಿದೆ. ನೂತನ ಕಾರು ಟರ್ಬೋಚಾರ್ಜ್ಡ್ 2.0-ಲೀಟರ್ ಇನ್ಲೈನ್ -4 ಅನ್ನು ಹೊಂದಿದೆ, 276 ಅಶ್ವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವಿರುವ ಈ ಕಾರು 5,500 ಮತ್ತು 6,000 ಆರ್ಪಿಎಮ್ ನಡುವೆ ಟಾರ್ಕ್ ಉತ್ಪಾದಿಸುತ್ತದೆ. ಕಾರಿನಲ್ಲಿ ಓವರ್ ಬೂಸ್ಟ್ ಫಂಕ್ಷನ್ ಕೂಡ ನೀಡಲಾಗಿದೆ. ಇದನ್ನು 'ಎನ್ ಗ್ರಿನ್ ಶಿಫ್ಟ್' ಎಂದು ಕರೆಯಲಾಗುತ್ತದೆ. ಈ ಬೂಸ್ಟರ್ನೊಂದಿಗೆ ಇಂಜಿನ್ 286 ಎಚ್ಪಿ ಶಕ್ತಿಯನ್ನು ಅಲ್ಪಾವಧಿಗೆ ಹೊರಹಾಕಲು ಸಾಧ್ಯವಾಗುತ್ತದೆ.