PHOTOS: ಭಾರತದ ರಸ್ತೆಯಲ್ಲಿ ಧೂಳೆಬ್ಬಿಸಲಿದೆ ಹೊಸ ಮಾಡೆಲ್ 'ಜೀಪ್'
- News18
- |
1/ 10
ವಿಶ್ವದ ಪ್ರಸಿದ್ಧ ವಾಹನ ತಯಾರಿಕಾ ಕಂಪೆನಿ ಜೀಪ್ ಶೀಘ್ರದಲ್ಲೇ ಹೊಚ್ಚ ಹೊಸ ವಾಹನವನ್ನು ರಸ್ತೆಗಿಳಿಸಲಿದೆ.
2/ 10
ಜೀಪ್ ಗ್ಲಾಡಿಯೇಟರ್ ಹೆಸರಿನ ಈ ವಾಹನಗಳನ್ನು ಲಾ ಆಟೋ ಶೋನಲ್ಲಿ ಅನಾವರಣಗೊಳಿಸಲಾಗಿದೆ.
3/ 10
ಅತ್ಯಾಕರ್ಷಕ ವಿನ್ಯಾಸದಿಂದ ಕೂಡಿದ ಗ್ಲಾಡಿಯೇಟರ್ ಈ ಆಟೋ ಶೋನ ಆಕರ್ಷಣೆಯ ಕೇಂದ್ರವಾಗಿತ್ತು.
4/ 10
ಯುಟಿಲಿಟಿ ಪಿಕ್ಅಪ್ ಮಾದರಿಯಲ್ಲಿರುವ ಹೊಸ ಜೀಪ್ಗಳನ್ನು ಭಾರತದಲ್ಲೂ ಪರಿಚಯಿಸಲಾಗುತ್ತದೆ.
5/ 10
1947ರಿಂದಲೂ ಪಿಕ್ಅಪ್ ಮಾದರಿ ಟ್ರಕ್ಗಳನ್ನು ಜೀಪ್ ನಿರ್ಮಿಸುತ್ತಿದ್ದು, ಈಗ ಅದೇ ಮಾದರಿ ಹೊಸ ವಿನ್ಯಾಸವನ್ನು ಪರಿಚಯಿಸಿದೆ.
6/ 10
ಜೀಪ್ ಕಂಪೆನಿ ನಿರ್ಮಿಸಿದ ಮೊದಲ ಪಿಕ್ಅಪ್ ಟ್ರಕ್ಗೆ ಗ್ಲಾಡಿಯೇಟರ್ ಹೆಸರನ್ನು ಇಡಲಾಗಿತ್ತು.
7/ 10
ಕಂಪೆನಿಯು 25 ವರ್ಷಗಳ ಬಳಿಕ ನೂತನ ಪಿಕ್ಅಪ್ ಟ್ರಕ್ನ್ನು ಅದೇ ಹೆಸರಿನಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದೆ.
8/ 10
ಜೀಪ್ ರಸ್ತೆಗಿಳಿಸಲಿರುವ ಹೊಸ ವಾಹನವು ನಿಸಾನ್ ಮತ್ತು ಫೋರ್ಡ್ ಕಂಪೆನಿಗಳ ವಾಹನಗಳಿಗೆ ಪ್ರಬಲ ಪೈಪೋಟಿ ನೀಡಲಿದೆ.
9/ 10
ಲಾಸ್ ಏಂಜಲ್ಸ್ನಲ್ಲಿ ನಡೆದ ವಾಹನ ಪ್ರದರ್ಶನದಲ್ಲಿ ಈ ವಾಹನಗಳನ್ನು ಪ್ರದರ್ಶಿಸಿದ್ದು, ವಾಹನ ಪ್ರಿಯರ ಮನಗೆದ್ದಿದೆ.
10/ 10
ಈ ಹೊಸ ಜೀಪ್ ಟ್ರಕ್ ಎಸ್ಯುವಿ ವಾಹನವಾಗಿದ್ದು, ಇದರ ಭಾರತದ ಮಾರುಕಟ್ಟೆ ಬೆಲೆ 16 ರಿಂದ 21 ಲಕ್ಷ ಇರಲಿದೆ ಎಂದು ಅಂದಾಜಿಸಲಾಗಿದೆ.
First published: