Smartwatches: ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ 1999 ರೂಪಾಯಿಯ ಸ್ಮಾರ್ಟ್​ವಾಚ್, ಫೀಚರ್ಸ್​ ಬಗ್ಗೆ ನೀವೇ ನೋಡಿ

ಭಾರತದಲ್ಲಿ ಸ್ಮಾರ್ಟ್​ವಾಚ್​ಗಳ ಮಾರಾಟ ವ್ಯಾಪಕವಾಗಿ ಬೆಳೆಯುತ್ತಿದೆ. ಇತ್ತೀಚೆಗೆ ಹಿಂದಿನ ವಾಚ್​​ಗಿಂತ ಈ ಸ್ಮಾರ್ಟ್​ವಾಚ್​ಗಳನ್ನೇ ಬಳಸುವವರು ಹೆಚ್ಚಾಗಿದ್ದಾರೆ. ಆದ್ದರಿಂದ ಸದ್ಯ ಮಾರುಕಟ್ಟೆಯಲ್ಲಿ ಹೊಸ ಹೊಸ ಸ್ಮಾರ್ಟ್​ವಾಚ್​ಗಳನ್ನೇ ಕಂಪನಿಗಳು ಲಾಂಚ್ ಮಾಡುತ್ತಿದೆ. ಇದೀಗ ಕೇವಲ 1999 ರೂಪಾಯಿಗೆ ಪೆಬಲ್​ ಫ್ರಾಸ್ಟ್​ ಎಂಬ ಸ್ಮಾರ್ಟ್​ವಾಚ್ ಬಿಎಉಗಡೆಯಾಗುತ್ತಿದೆ.

First published:

  • 18

    Smartwatches: ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ 1999 ರೂಪಾಯಿಯ ಸ್ಮಾರ್ಟ್​ವಾಚ್, ಫೀಚರ್ಸ್​ ಬಗ್ಗೆ ನೀವೇ ನೋಡಿ

    ಭಾರತದಲ್ಲಿ ಸ್ಮಾರ್ಟ್​ವಾಚ್​ಗಳ ಮಾರಾಟ ವ್ಯಾಪಕವಾಗಿ ಬೆಳೆಯುತ್ತಿದೆ. ಇತ್ತೀಚೆಗೆ ಹಿಂದಿನ ವಾಚ್​​ಗಿಂತ ಈ ಸ್ಮಾರ್ಟ್​ವಾಚ್​ಗಳನ್ನೇ ಬಳಸುವವರು ಹೆಚ್ಚಾಗಿದ್ದಾರೆ. ಆದ್ದರಿಂದ ಸದ್ಯ ಮಾರುಕಟ್ಟೆಯಲ್ಲಿ ಹೊಸ ಹೊಸ ಸ್ಮಾರ್ಟ್​ವಾಚ್​ಗಳನ್ನೇ ಕಂಪನಿಗಳು ಲಾಂಚ್ ಮಾಡುತ್ತಿದೆ.

    MORE
    GALLERIES

  • 28

    Smartwatches: ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ 1999 ರೂಪಾಯಿಯ ಸ್ಮಾರ್ಟ್​ವಾಚ್, ಫೀಚರ್ಸ್​ ಬಗ್ಗೆ ನೀವೇ ನೋಡಿ

    ಇದೀಗ ಮಾರುಕಟ್ಟೆಗೆ ಪೆಬಲ್ ಫ್ರಾಸ್ಟ್​ ಎಂಬ ಬ್ಲೂಟೂತ್ ಕಾಲಿಂಗ್ ಸ್ಮಾರ್ಟ್​ವಾಚ್ ಅನ್ನು ಬಿಡುಗಡೆ ಮಾಡಿದೆ. ಸೂಪರ್​ಲುಕ್​ನೊಂದಿಗೆ ಬಿಡುಗಡೆಯಾಗಿರುವ ಈ ಸ್ಮಾರ್ಟ್​ವಾಚ್ ವಾಟರ್​ಪ್ರೂಫ್ ಆಗಿದೆ. ಇದು ಇನ್ನೂ ಹಲವು ಫೀಚರ್ಸ್​ ಅನ್ನು ಹೊಂದಿದ್ದು ಅವುಗಳ ಮಾಹಿತಿ ಕೆಳಗೆ ಇದೆ.

    MORE
    GALLERIES

  • 38

    Smartwatches: ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ 1999 ರೂಪಾಯಿಯ ಸ್ಮಾರ್ಟ್​ವಾಚ್, ಫೀಚರ್ಸ್​ ಬಗ್ಗೆ ನೀವೇ ನೋಡಿ

    ಪೆಬಲ್ ಫ್ರಾಸ್ಟ್ ಸ್ಮಾರ್ಟ್‌ವಾಚ್‌ 1.87 ಇಂಚಿನ IPS 2.5D ಕರ್ವ್ಡ್ ಡಿಸ್‌ಪ್ಲೇ ಹೊಂದಿದ್ದು, ಬಲಭಾಗದ ಕ್ರೌನ್‌ ಬಟನ್‌ ಆಯ್ಕೆ ವಾಚ್‌ಗೆ ಇನ್ನಷ್ಟು ಹೆಚ್ಚಿನ ಆಕರ್ಷಣೆ ನೀಡುತ್ತದೆ. ಅದರಂತೆ ಈ ವಾಚ್‌ 100 ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಹೊಂದಿದೆ. ನಿಮಗೆ ಇಷ್ಟವಾಗುವ ವಾಚ್‌ ಫೇಸ್‌ ಅನ್ನು ಈ ಆಯ್ಕೆಯಲ್ಲಿ ಖರೀದಿಸಬಹುದು.

    MORE
    GALLERIES

  • 48

    Smartwatches: ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ 1999 ರೂಪಾಯಿಯ ಸ್ಮಾರ್ಟ್​ವಾಚ್, ಫೀಚರ್ಸ್​ ಬಗ್ಗೆ ನೀವೇ ನೋಡಿ

    ಪೆಬಲ್​ ಫ್ರಾಸ್ಟ್ ಸ್ಮಾರ್ಟ್‌ವಾಚ್‌ ಸೇಮ್ ಆ್ಯಪಲ್​ ಸ್ಮಾರ್ಟ್​​ವಾಚ್​ನ ವಿನ್ಯಾಸ ಮತ್ತು ಕೆಲವೊಂದು ಫೀಚರ್ಸ್ ಅನ್ನು ಹೊಂದಿದೆ. ಯಾಕೆಂದರೆ ಇದನ್ನು ನೋಡುವಾಗ ಕೂಡ ಆ್ಯಪಲ್ ವಾಚ್​ನಂತೆಯೇ ಕಾಣಲಿದ್ದು SPO2, 24X7 ಹೃದಯ ಬಡಿತ ಮಾನಿಟರಿಂಗ್ ಆಯ್ಕೆಯನ್ನು ಹೊಂದಿದೆ. ಜೊತೆಗೆ ಸ್ಟೆಪ್ ಪೆಡೋಮೀಟರ್, ಸ್ಲೀಪ್ ಮಾನಿಟರ್, ಕ್ಯಾಲೋರಿ ಮಾನಿಟರ್, ಸ್ಟಾಪ್‌ವಾಚ್ ಮತ್ತು ಪಾಸ್‌ವರ್ಡ್ ಲಾಕ್ ಈ ಎಲ್ಲಾ ಫೀಚರ್ಸ್​ ಅನ್ನು ಒಳಗೊಂಡಿದೆ.

    MORE
    GALLERIES

  • 58

    Smartwatches: ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ 1999 ರೂಪಾಯಿಯ ಸ್ಮಾರ್ಟ್​ವಾಚ್, ಫೀಚರ್ಸ್​ ಬಗ್ಗೆ ನೀವೇ ನೋಡಿ

    ಹಾಗೆಯೇ ಈ ಸ್ಮಾರ್ಟ್​​ವಾಚ್ ಸ್ಪೋರ್ಟ್ಸ್‌ ಮೋಡ್‌ ಆಯ್ಕೆ ಹೊಂದಿದ್ದು, ಪ್ರತಿ ಆಟಕ್ಕೂ ನೀವು ಸಿದ್ಧವಾಗಿರಲು ನಾಟಿಫಿಕೇಶನ್ ನೀಡುತ್ತದೆ. ಜೊತೆಗೆ ಹವಾಮಾನ ವರದಿಗಳನ್ನು ಸಹ ನೀಡುವುದರೊಂದಿಗೆ ನಿಮ್ಮ ಫಿಟ್‌ನೆಸ್​ಗಳ ಬಗ್ಗೆಯೂ ಮಾಹಿತಿ ನೀಡುವ ಫೀಚರ್ಸ್​ ಅನ್ನು ಹೊಂದಿದೆ.

    MORE
    GALLERIES

  • 68

    Smartwatches: ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ 1999 ರೂಪಾಯಿಯ ಸ್ಮಾರ್ಟ್​ವಾಚ್, ಫೀಚರ್ಸ್​ ಬಗ್ಗೆ ನೀವೇ ನೋಡಿ

    ಇನ್ನು ಈ ಸ್ಮಾರ್ಟ್​ವಾಚ್​ನ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ ಈ ಸ್ಮಾರ್ಟ್​​ವಾಚ್​ ಅನ್ನು ಒಮ್ಮೆ ಫುಲ್​ ಚಾರ್ಜ್‌ ಮಾಡಿದರೆ 5 ದಿನಗಳವರೆಗೆ ಕಾರ್ಯನಿರ್ವಹಿಸುತ್ತದೆ ಹಾಗೂ ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ 7 ದಿನಗಳವರೆಗೆ ಕೆಲಸ ಮಾಡಲಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

    MORE
    GALLERIES

  • 78

    Smartwatches: ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ 1999 ರೂಪಾಯಿಯ ಸ್ಮಾರ್ಟ್​ವಾಚ್, ಫೀಚರ್ಸ್​ ಬಗ್ಗೆ ನೀವೇ ನೋಡಿ

    ಈ ಸ್ಮಾರ್ಟ್‌ವಾಚ್‌ನ  ಭಾರತದಲ್ಲಿ 1,999 ರೂಪಾಯಿಗಳನ್ನು ನಿಗದಿ ಮಾಡಲಾಗಿದ್ದು, ವಿಂಟರ್ ಫೈರ್, ವಿಂಟರ್ ಬ್ಲೂ, ಕ್ಲಾಸಿಕ್ ಮಿಡ್‌ನೈಟ್ ಬ್ಲ್ಯಾಕ್ ಮತ್ತು ಮಿಸ್ಟಿ ಗ್ರೇ ಎಂಬ ನಾಲ್ಕು ಬಣ್ಣದಲ್ಲಿ ಖರೀದಿ ಮಾಡಬಹುದಾಗಿದೆ.

    MORE
    GALLERIES

  • 88

    Smartwatches: ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ 1999 ರೂಪಾಯಿಯ ಸ್ಮಾರ್ಟ್​ವಾಚ್, ಫೀಚರ್ಸ್​ ಬಗ್ಗೆ ನೀವೇ ನೋಡಿ

    ಈ ಪೆಬಲ್ ಫ್ರಾಸ್ಟ್​ ಸ್ಮಾರ್ಟ್​​ವಾಚ್‌ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ವಿಶೇಷ ಆಫರ್​​ನೊಂದಿಗೆ ಖರೀದಿ ಮಾಡಬಹುದಾಗಿದೆ. ಹಾಗೆಯೇ ಕಂಪನಿಯ ಅಧಿಕೃತ ಸೈಟ್‌ ಮೂಲಕವೂ ಖರೀದಿ ಮಾಡಬಹುದಾಗಿದೆ.

    MORE
    GALLERIES