ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ಪ್ರಕರಣದ ಆರೋಪಿ, ಶಂಕಿತ ಉಗ್ರ ಮೊಹಮ್ಮದ್ ಶಾರೀಕ್ಗೆ ಜಾಕೀರ್ ನಾಯ್ಕ್ ಪ್ರೇರಣೆಯಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
2/ 7
ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ಗಳ ಪಟ್ಟಿಯಲ್ಲಿರೋ ಜಾಕೀರ್ ನಾಯ್ಕ್ನ 50ಕ್ಕೂ ಹೆಚ್ಚು ವಿಡಿಯೋಗಳು ಶಾರೀಕ್ ಮೊಬೈಲ್ನಲ್ಲಿದ್ದವು ಎನ್ನಲಾಗಿದೆ.
3/ 7
ಜಾಕೀರ್ನ ಇಸ್ಲಾಮಿಕ್ ಮೂಲಭೂತವಾದದ ಭಾಷಣದಿಂದ ಶಾರೀಕ್ ಪ್ರಭಾವಿತನಾಗಿದ್ದನು. ಜಾಕೀರ್ ನಾಯ್ಕ್ನನ್ನೇ ಪ್ರೇರಣೆಯಾಗಿಸಿಕೊಂಡಿದ್ದನು ಎಂದು ತಿಳಿದು ಬಂದಿದೆ.
4/ 7
ಜಾಕೀರ್ ನಾಯ್ಕ್ ವಿಡಿಯೋ ಮಾತ್ರವಲ್ಲದೇ, ಬಾಂಬ್ ತಯಾರಿಕಾ ವಿಡಿಯೋಗಳು ಶಾರೀಕ್ ಮೊಬೈಲ್ನಲ್ಲಿ ಸಿಕ್ಕಿವೆ.
5/ 7
ಟೋರ್ ಬ್ರೌಸರ್ ಮೂಲಕ ಶಾರೀಕ್ ಡಾರ್ಕ್ ವೆಬ್ ಬಳಸುತ್ತಿದ್ದನಂತೆ. ಐಸಿಸ್ ಉಗ್ರರಂತೇ ಸೆಲ್ಫಿ ವಿಡಿಯೋ ಮಾಡಿ ಪ್ರತಿಕಾರದ ಪ್ರತಿಜ್ಞೆ ತೆಗೆದುಕೊಂಡಿದ್ದ ಎನ್ನಲಾಗಿದೆ.
6/ 7
ಶಾರೀಕ್ ಐಸಿಸ್ ಸೇರಲು ಆಸೆ ವ್ಯಕ್ತಪಡಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಕುಕ್ಕರ್ ಬಾಂಬ್ ಹಿಡಿದು ಫೋಟೋಗೆ ಫೋಸ್ ಕೊಟ್ಟಿದ್ದೇ ಈ ಕಾರಣಕ್ಕೆ ಎನ್ನಲಾಗ್ತಿದೆ.
7/ 7
ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣವನ್ನು ನಮ್ಮ ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದ ಸಾಕ್ಷ್ಯಾಧಾರ ಸಂಗ್ರಹಿಸಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.