ನ್ಯೂಸ್ 18 ಕನ್ನಡ
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು. ಯುವ ದಸರಾದಲ್ಲಿ ಖ್ಯಾತ ಗಾಯಕ ವಿಜಯ್ ಪ್ರಕಾಶ್ ರಿಂದ ಸಂಗೀತಾ ಕಾರ್ಯಕ್ರಮ ನಡೆಯಿತು. ಭಾವಗೀತೆ, ಭಕ್ತಿ ಗೀತೆ ಹಾಗೂ ಜಾನಪದ ಗೀತೆಗಳಿಗೆ ಸಂಗೀತ ಪ್ರಿಯರು ಫುಲ್ ಫಿದಾ ಆಗಿದ್ದಾರೆ. ನಟಿ ರಾಗಿಣಿ ದ್ವಿವೇದಿ ಡ್ಯಾನ್ಸ್‌ಗೆ ನೆರೆದಿದ್ದ ಜನರು ಹುಚ್ಚೆದ್ದು ಕುಣಿದರು. ಮುಖ್ಯಮಂತ್ರಿಗಳಿಗೆ ಸಚಿವರಾದ ಜಿ.ಟಿ.ದೇವೇಗೌಡ, ಸಾರಾ ಮಹೇಶ್, ಪುಟ್ಟರಾಜು ಸೇರಿ ಹಲವು ಗಣ್ಯರು ಭಾಗಿಯಾದರು. ಕೆಲವು ಚಿತ್ರಗಳು ಇಲ್ಲಿವೆ ನೋಡಿ...