ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ತಾಂತ್ರಿಕ ತೊಂದರೆ ಉಂಟಾದ ಕಾರಣ ಸಿಗ್ನಲ್ ಸ್ಥಗಿತಗೊಂಡಿತ್ತು. ಹಾಗಾಗಿ ರೈಲುಗಳು ತೆರಕಲ್ಲು ಮತ್ತು ಮಾಲೂರಿನಲ್ಲಿ ನಿಂತಿದ್ದವು. ಇತ್ತ ಟೇಕಲ್ ನಿಲ್ದಾಣದಲ್ಲಿ ಎರಡು ಪ್ಯಾಸೆಂಜರ್ ರೈಲುಗಳು ನಿಂತಿದ್ದವು. ಸುಮಾರು ಅರ್ಧ ಗಂಟೆಗಳ ಕಾಲ ರೈಲಿಗಳು ನಿಂತಿದ್ದರಿಂದ ಪ್ರಯಾಣಿಕರು ಹೊರ ಬಂದು ಹಳಿಯ ಮೇಲೆ ನಿಂತಿದ್ದರು.