Kolar: ಗಂಡನನ್ನ ಬಿಟ್ ಬಾ ಅಂದ, ಬಂದ್ರೆ ಅವನೇ ಪರಾರಿ; ಕೊನೆಗೂ ಅರೆಸ್ಟ್ ಆದ ಪ್ರಿಯಕರ
ಐದು ವರ್ಷದ ಹಿಂದೆ ಅವನಿಗೆ 15 ವರ್ಷ, ಈಕೆಗೆ 19ರ ಹರೆಯ. ಇಬ್ಬರ ನಡುವೆ ಪ್ರೇಮಾಂಕುರ ಆಗಿತ್ತು. ಮದುವೆಯಾದ ಗಂಡನನ್ನು ಬಿಟ್ಟು ಬಂದಿರುವ ಯುವತಿ ಅವನೇ ನನಗೆ ಬೇಕು ಎಂದು ಪ್ರತಿಭಟನೆ ಮಾಡುತ್ತಿದ್ದಾಳೆ.
ಪ್ರೀತಿಸಿ ಕೈಕೊಟ್ಟು ಓಡಿ ಹೋಗಿದ್ದ ಪ್ರಿಯಕರನನ್ನು ಕೋಲಾರ ಜಿಲ್ಲೆಯ ಮಾಸ್ತಿ ಪೊಲೀಸರು ಬಂಧಿಸಿದ್ದಾರೆ. ಗಂಡನನ್ನು ಬಿಟ್ಟು ಬಂದಿದ್ದ ಮಹಿಳೆ ಯುವಕನ ವಿರುದ್ಧ ದೂರು ದಾಖಲಿಸಿದ್ದರು.
2/ 8
24 ವರ್ಷದ ಪೂಜಾ ಮತ್ತು 20 ವರ್ಷದ ಕಿರಣ್ ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರಂತೆ. ಪೂಜಾಗೆ ಮದುವೆ ಆಗಿದ್ರೂ ಕಿರಣ್ ಜೊತೆಗಿನ ಸಂಬಂಧ ಮುಂದುವರಿದಿತ್ತು.
3/ 8
ಪತಿಯನ್ನು ಬಿಟ್ಟು ನನ್ನ ಜೊತೆ ಬಾ ಎಂದು ಕಿರಣ್ ಹೇಳಿದ್ದನಂತೆ. ಪೂಜಾ ಸಹ ಅವನ ಮಾತು ನಂಬಿ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ದೊಡ್ಡಮಲ್ಲೆ ಗ್ರಾಮದಲ್ಲಿರುವ ಕಿರಣ್ ಕುಮಾರ್ ಬಂದಿದ್ದಾರೆ.
4/ 8
ಪೂಜಾ ಬರುವ ವೇಳೆಗೆ ಕಿರಣ್ ಮನೆಯಿಂದ ಕಾಲ್ಕಿತ್ತಿದ್ದನು. ಕಿರಣ್ ಮನೆ ಮುಂದೆ ಕುಳಿತಿದ್ದ ಪೂಜಾ ನ್ಯಾಯ ಕೊಡಿಸೋವರೆಗೂ ಇಲ್ಲಿಂದ ಹೋಗಲ್ಲ ಅಂತ ಕುಳಿತಿದ್ದರು.
5/ 8
ಗಂಡನನ್ನು ಬಿಟ್ಟು ಬಾ ಅಂತ ಹೇಳಿದ್ದ. ಅದಕ್ಕಾಗಿ ಕಿರಣ್ ನಂಬಿಕೊಂಡು ಇಲ್ಲಿಗೆ ಬಂದ್ರೆ ಅವನೇ ಇಲ್ಲ ಎಂದು ಪೂಜಾ ಹೇಳಿದ್ದಳು. ಹೀಗಾಗಿ ಮನೆಯ ಮುಂದೆಯೇ ಪ್ರತಿಭಟನೆಗೆ ಕುಳಿತಿದ್ದರು.
6/ 8
ಕೊನೆಗೆ ಕಿರಣ್ ವಿರುದ್ಧ ಮಾಸ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನಲ್ಲಿ ಕಳೆದ ಐದು ವರ್ಷದಿಂದ ನನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಪೂಜಾ ಆರೋಪಿಸಿದ್ದಾರೆ.
7/ 8
ದೂರು ದಾಖಲಿಸಿಕೊಂಡಿರುವ ಪೊಲೀಸರು ಕಿರಣ್ನನ್ನು ಬಂಧಿಸಿದ್ದಾರೆ. ಆದರೆ ಕಿರಣ್ಗೆ ಮದುವೆ ವಯಸ್ಸು ಆಗದ ಹಿನ್ನೆಲೆ ಬಾಲಮಂದಿರಕ್ಕೆ ಕಳುಹಿಸಲು ಪೊಲೀಸರು ನಿರ್ಧರಿಸಿದ್ದಾರೆ.
8/ 8
ನ್ಯಾಯ ಸಿಗೋವರೆಗೂ ಹೋರಾಟ ಮಾಡುತ್ತೇನೆ ಎಂದು ಪೂಜಾ ಹೇಳಿಕೆ ನೀಡಿದ್ದಾರೆ. ಇತ್ತ ಕಿರಣ್ ಪೋಷಕರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
First published:
18