Bengaluru: ಪಾಗಲ್ ಪ್ರೇಮಿಯ ಕಿರುಕುಳಕ್ಕೆ ನೇಣಿಗೆ ಕೊರಳೊಡ್ಡಿದ ಯುವ ವೈದ್ಯೆ

Bengaluru News: ಪಾಗಲ್ ಪ್ರೇಮಿಯ ಕಿರುಕುಳಕ್ಕೆ ಬೇಸತ್ತು ಯುವ ವೈದ್ಯೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

First published:

  • 18

    Bengaluru: ಪಾಗಲ್ ಪ್ರೇಮಿಯ ಕಿರುಕುಳಕ್ಕೆ ನೇಣಿಗೆ ಕೊರಳೊಡ್ಡಿದ ಯುವ ವೈದ್ಯೆ

    ಉತ್ತರ ಪ್ರದೇಶ ಮೂಲದ ಪ್ರಿಯಾಂಶಿ ತ್ರಿಪಾಠಿ ಆತ್ಮಹತ್ಯೆಗೆ ಶರಣಾದ ವೈದ್ಯೆ. ತೀರ್ಥಂಕರ್ ಮಹಾವೀರ ಹಾಸ್ಪಿಟಲ್ ಮತ್ತು ಬಿಜಿಎಸ್ ಹಾಸ್ಪಿಟಲ್​ನಲ್ಲಿ ಇಂಟರ್​ಶಿಪ್​ ಮಾಡಿದ್ದ ಪ್ರಿಯಾಂಶಿ ಆದೇ ಆಸ್ಪತ್ರೆಯಲ್ಲಿ ಕೆಲಸ ಆರಂಭಿಸಿದ್ರು.

    MORE
    GALLERIES

  • 28

    Bengaluru: ಪಾಗಲ್ ಪ್ರೇಮಿಯ ಕಿರುಕುಳಕ್ಕೆ ನೇಣಿಗೆ ಕೊರಳೊಡ್ಡಿದ ಯುವ ವೈದ್ಯೆ

    ನಂತರ ಡಿಸೆಂಬರ್​ನಲ್ಲಿ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆ ಆರಂಭಿಸಿದ್ದ ಪ್ರಿಯಾಂಶಿ ಎನ್​​ಟಿಐ ಲೇಔಟ್​​ನಲ್ಲಿ ವಾಸವಾಗಿದ್ದರು.

    MORE
    GALLERIES

  • 38

    Bengaluru: ಪಾಗಲ್ ಪ್ರೇಮಿಯ ಕಿರುಕುಳಕ್ಕೆ ನೇಣಿಗೆ ಕೊರಳೊಡ್ಡಿದ ಯುವ ವೈದ್ಯೆ

    ಇದೇ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದ ಸುಮೀತ್ ಎಂಬಾತ ಕಳೆದ ಒಂದು ವರ್ಷದಿಂದ ಪ್ರಿಯಾಂಶಿಗೆ ದೈಹಿಕವಾಗಿ ತೊಂದರೆ ಕೊಡುತ್ತಿದ್ದನು ಎಂದು ಪ್ರಿಯಾಂಶಿ ಪೋಷಕರು ಆರೋಪಿಸಿದ್ದಾರೆ.

    MORE
    GALLERIES

  • 48

    Bengaluru: ಪಾಗಲ್ ಪ್ರೇಮಿಯ ಕಿರುಕುಳಕ್ಕೆ ನೇಣಿಗೆ ಕೊರಳೊಡ್ಡಿದ ಯುವ ವೈದ್ಯೆ

    ಹಣ ಕೊಡುವಂತೆ, ಸಿಗರೇಟ್ ಸೇದುವಂತೆ, ಮದ್ಯ ಸೇವನೆ ಮಾಡುವಂತೆ ಮತ್ತು ತನ್ನನ್ನು ಮದುವೆ ಆಗುವಂತೆ ಸಹ ಸುಮೀತ್ ಕಿರುಕುಳ ನೀಡುತ್ತಿದ್ದ ಎಂದು ಪ್ರಿಯಾಂಶಿ ತಂದೆ ಸುಶೀಲ್ ತ್ರಿಪಾಠಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    MORE
    GALLERIES

  • 58

    Bengaluru: ಪಾಗಲ್ ಪ್ರೇಮಿಯ ಕಿರುಕುಳಕ್ಕೆ ನೇಣಿಗೆ ಕೊರಳೊಡ್ಡಿದ ಯುವ ವೈದ್ಯೆ

    ಸುಮೀತ್ ಕಿರುಕುಳ ನೀಡುತ್ತಿದ್ದ ವಿಷಯವನ್ನು ಮಗಳು ನಮಗೆ ತಿಳಿಸಿದ್ದಳು. ತನ್ನನ್ನು ಬೆಂಗಳೂರಿನಿಂದ ಕರೆದುಕೊಂಡು ಹೋಗುವಂತೆಯೂ ಹೇಳಿದ್ದಳು ಎಂದು ಪೋಷಕರು ಹೇಳಿದ್ದಾರೆ.

    MORE
    GALLERIES

  • 68

    Bengaluru: ಪಾಗಲ್ ಪ್ರೇಮಿಯ ಕಿರುಕುಳಕ್ಕೆ ನೇಣಿಗೆ ಕೊರಳೊಡ್ಡಿದ ಯುವ ವೈದ್ಯೆ

    ಪ್ರಿಯಾಂಶಿ ತಾಯಿ ದೂರವಾಣಿ ಮೂಲಕ ಸುಮೀತ್ ಜೊತೆ ಮಾತನಾಡಿ ತಮ್ಮ ಮಗನಿಂದ ದೂರ ಇರುವಂತೆ ಎಚ್ಚರಿಕೆ ಸಹ ನೀಡಿದ್ದರು. ಈ ವಿಷಯವನ್ನು ಸುಮೀತ್ ಪೋಷಕರಿಗೂ ತಿಳಿಸಲಾಗಿತ್ತು.

    MORE
    GALLERIES

  • 78

    Bengaluru: ಪಾಗಲ್ ಪ್ರೇಮಿಯ ಕಿರುಕುಳಕ್ಕೆ ನೇಣಿಗೆ ಕೊರಳೊಡ್ಡಿದ ಯುವ ವೈದ್ಯೆ

    ಪೋಷಕರ ಎಚ್ಚರಿಕೆ ಬಳಿಕ ಕೆಲ ದಿನ ಸುಮ್ಮನಾಗಿದ್ದ ಸುಮೀತ್ ಮತ್ತೆ ತನ್ನ ಹಳೇ ಚಾಳಿಯನ್ನು ಮುಂದುವರಿಸಿದ್ದನು. ಜನವರಿ 24, 2023ರಂದು ಪ್ರಿಯಾಂಶಿ ಯಾರ ಕರೆಯೂ ಸ್ವೀಕಾರ ಮಾಡಿರಲಿಲ್ಲ. ಇದರಿಂದ ಅನುಮಾನಗೊಂಡ ಪೋಷಕರು ಮಗಳು ವಾಸವಾಗಿದ್ದ ಮನೆಯ ಮಾಲೀಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

    MORE
    GALLERIES

  • 88

    Bengaluru: ಪಾಗಲ್ ಪ್ರೇಮಿಯ ಕಿರುಕುಳಕ್ಕೆ ನೇಣಿಗೆ ಕೊರಳೊಡ್ಡಿದ ಯುವ ವೈದ್ಯೆ

    ಮನೆ ಒಳಗಿನಿಂದ ಲಾಕ್ ಆಗಿದ್ದರಿಂದ ಮನೆ ಮಾಲೀಕರು ಸಂಜಯ ನಗರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಬಾಗಿಲು ಒಡೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪ್ರಿಯಾಂಶಿ ಶವ ಪತ್ತೆಯಾಗಿದೆ.

    MORE
    GALLERIES