ಬೆಂಗಳೂರಿನ ಕೆ.ಆರ್.ಪುರ ಬಳಿಯ ಹೀರಂಡಹಳ್ಳಿಯಲ್ಲಿ ಘಟನೆ ನಡೆದಿದೆ. ಶ್ರೀನಾಥ್ ಮೃತ ದೇಹದಾರ್ಢ್ಯ ಪಟು.
2/ 8
ಖಾಸಗಿ ಕಾಲೇಜಿನಲ್ಲಿ ಡಿ ಫಾರ್ಮಾ ಓದುತ್ತಿದ್ದ ಶ್ರೀನಾಥ್, ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವ್ಯಾಸಂಗ ಜೊತೆಗೆ ದೇಹದಾರ್ಢ್ಯ ಸ್ಪರ್ಧೆಗಳಲ್ಲೂ ಭಾಗಿಯಾಗುತ್ತಿದ್ದರು.
3/ 8
ಮಂಗಳವಾರ ವಾಸವಿದ್ದ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮೃತ ಶ್ರೀನಾಥ್ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ನಿವಾಸಿ ಎಂದು ತಿಳಿದು ಬಂದಿದೆ.
4/ 8
ಶ್ರೀನಾಥ್ ಪೋಷಕರಿಂದ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
5/ 8
ಘಟನೆ ಸಂಬಂಧ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶ್ರೀನಾಥ್ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
6/ 8
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
7/ 8
ಜೊತೆಯಲ್ಲಿದ್ದ ಸ್ನೇಹಿತ ಕಾಲೇಜಿಗೆ ತೆರಳಿದಾಗ ಮನೆಯಲ್ಲಿ ಒಬ್ಬನೇ ಇದ್ದ ಶ್ರೀನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಂದೆಯಿಂದ ಒಂದು ತಿಂಗಳ ಹಿಂದೆ ಅವಲಹಳ್ಳಿ ಬಳಿ ಜಿಮ್ ಓಪನ್ ಮಾಡಲು 3 ಲಕ್ಷ ರೂ ಹಣವನ್ನು ಸಹ ಪಡೆದುಕೊಂಡಿದ್ದನು. (ಸಾಂದರ್ಭಿಕ ಚಿತ್ರ)
8/ 8
ಐದು ವರ್ಷದ ಹಿಂದೆ ಬೆಂಗಳೂರಿಗೆ ಓದಲು ಬಂದಿದ್ದ ಶ್ರೀನಾಥ್ ಗೆಳೆಯನ ಜೊತೆ ವಾಸವಾಗಿದ್ದರು. ಇನ್ನೊಂದು ವರ್ಷ ಆಗಿದ್ರೆ ಡಿ ಫಾರ್ಮಾ ಸಹ ಮುಗಿಯುತ್ತಿತ್ತು.