ವಡಗೇರಾ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆ ಗ್ರಾಮದ ಹನುಮಾನ ಮಂದಿರಕ್ಕೆ ಮಗಳೊಂದಿಗೆ ಭೇಟಿ ನೀಡಿದ್ದ ಮಹಿಳೆ ಮೇಲೆ ಪ್ರಿಯಕರ ವೆಂಕಪ್ಪ ದಾಳಿ ಮಾಡಿದ್ದಾನೆ. (Photo: ಆರೋಪಿ ವೆಂಕಪ್ಪ)
2/ 4
ಬಿಯರ್ ಬಾಟಲ್ ನಿಂದ ಚುಚ್ಚಿದ್ದ ಪ್ರಿಯಕರ ವೆಂಕಪ್ಪ, ಇನ್ನೇನು ಕಲ್ಲು ಎತ್ತಿ ಹಾಕುವ ವೇಳೆಗೆ ಸುತ್ತಮುತ್ತ ಇದ್ದವರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮಗಳು ಚೀರಿಕೊಂಡಿದ್ದರಿಂದ ವೆಂಕಪ್ಪ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
3/ 4
ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಶಹಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯೊಂದಿಗೆ ಮಹಿಳೆ ಅನೈತಿಕ ಸಂಬಂಧ ಇತ್ತು ಎನ್ನಲಾಗುತ್ತಿದೆ. ಮೂರು ಮಕ್ಕಳಿದ್ದಾರೆ ಇನ್ಮುಂದೆ ಇದೆಲ್ಲಾ ಬೇಡ ಎಂದು ಹೇಳಿ ಮಹಿಳೆ ವೆಂಕಪ್ಪನಿಂದ ದೂರವಾಗಿದ್ದಳು.
4/ 4
ಗಂಡ, ಮಕ್ಕಳೊಂದಿಗೆ ಬೆಂಗಳೂರಲ್ಲಿ ನೆಲಸಿದ್ದ ಮಹಿಳೆ ಎಳ್ ಅಮಾವಾಸ್ಯೆ ಹಿನ್ನೆಲೆ ಗ್ರಾಮಕ್ಕೆ ಭೇಟಿ ನೀಡಿದ್ದಳು. ಈ ಸಮಯದಲ್ಲಿ ಮಾಜಿ ಪ್ರಿಯಕರ ಹಣಕ್ಕಾಗಿಯೂ ಒತ್ತಾಯಿಸಿದ್ದಾನೆ. ಇದ್ಯಾವುದಕ್ಕೂ ಒಪ್ಪದಿದ್ದಾಗ, ಕೊಲೆಗೆ ಯತ್ನಿಸಿದ್ದಾನೆ.