ಕರ್ನಾಟಕದಲ್ಲಿ XBB.1.5. ವೈರಸ್ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಒಮಿಕ್ರಾನ್ನ ಮತ್ತೊಂದು ರೂಪಾಂತರಿಯೇ ಈ XBB.1.5 ಆಗಿದೆ. (ಸಾಂದರ್ಭಿಕ ಚಿತ್ರ)
2/ 8
ಅಮೆರಿಕಾದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಾಗಲು ಕಾರಣವಾಗಿದ್ದು ಇದೇ ವೈರಸ್. ಹೀಗಾಗಿ ಈ ವೈರಸ್ ಕರ್ನಾಟಕದಲ್ಲೂ ಪತ್ತೆಯಾಗಿರುವುದು ಆತಂಕ ಮೂಡಿಸಿದೆ. (ಸಾಂದರ್ಭಿಕ ಚಿತ್ರ)
3/ 8
ಸದ್ಯ ಭಾರತದ ಇತರ ರಾಜ್ಯಗಳನ್ನು ಗಮನಿಸುವುದಾದರೆ ರಾಜಸ್ಥಾನದಲ್ಲಿ 1 ಕೇಸ್, ಗುಜರಾತ್ನಲ್ಲಿ 3 ಕೇಸ್ ಹಾಗೂ ಕರ್ನಾಟಕದಲ್ಲಿ XBB.1.5. ವೈರಸ್ನ ಒಂದು ಕೇಸ್ ಪತ್ತೆಯಾಗಿದೆ. (ಸಾಂದರ್ಭಿಕ ಚಿತ್ರ)
4/ 8
ಅಮೇರಿಕಾದಲ್ಲಿ ಪತ್ತೆಯಾದ ಕೋವಿಡ್-19ರ ಸೋಂಕಿತರ ಪೈಕಿ ಶೇ.44% ರಷ್ಟು ಕೇಸ್ಗಳಲ್ಲಿ XBB.1.5 ವೈರಸ್ ಪತ್ತೆಯಾಗಿತ್ತು. (ಸಾಂದರ್ಭಿಕ ಚಿತ್ರ)
5/ 8
ಕರ್ನಾಟಕದಲ್ಲಿ ಸದ್ಯದ ಕೊರೊನಾ ಸ್ಥಿತಿಗತಿ ಗಮನಿಸುವುದಾದರೆ ನಿನ್ನೆ (ಡಿಸೆಂಬರ್ 3) 19 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು. (ಸಾಂದರ್ಭಿಕ ಚಿತ್ರ)
6/ 8
ಡಿಸೆಂಬರ್ 3ರಂದು ಆಸ್ಪತ್ರೆಯಿಂದ 6 ರೋಗಿಗಳು ಡಿಸ್ಚಾರ್ಜ್ ಆಗಿದ್ದರು. 0.22% ಪಾಸಿಟಿವಿಟಿ ರೇಟ್ ದಾಖಲಾಗಿತ್ತು. (ಸಾಂದರ್ಭಿಕ ಚಿತ್ರ)
7/ 8
ಸದ್ಯ ಇಡೀ ರಾಜ್ಯದಲ್ಲಿ 308 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಬೆಂಗಳೂರು ನಗರ ಒಂದರಲ್ಲೇ 14 ಕೊರೋನಾ ಪ್ರಕರಣ ಪತ್ತೆಯಾಗಿದೆ. (ಸಾಂದರ್ಭಿಕ ಚಿತ್ರ)
8/ 8
ಸದ್ಯ ಕೊರೊನಾ ಹೊಸ ರೂಪಾಂತರಿ ಪತ್ತೆಯಾಗಿರುವುದರಿಂದ ಸಾರ್ವಜನಿಕ ಜನನಿಬಿಡ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. (ಸಾಂದರ್ಭಿಕ ಚಿತ್ರ)