ಇತ್ತೀಚೆಗೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಯುವಕನೋರ್ವನಿಗೆ ಮಹಿಳೆಯೊಬ್ಬಳು ಮದುಗೆ ಆಗೋದಾಗಿ ನಂಬಿಸಿ 30 ಲಕ್ಷಕ್ಕೂ ಅಧಿಕ ಹಣ ಟೋಪಿ ಹಾಕಿದ್ದಳು. (ಸಾಂದರ್ಭಿಕ ಚಿತ್ರ)
2/ 8
ಇದೀಗ ಅದೇ ಮಾದರಿಯ ಪ್ರಕರಣ ಬಳ್ಳಾರಿ ಜಿಲ್ಲೆಯ ಸಂಡೂರು ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಯುವತಿಯಿಂದ ಮೋಸಕ್ಕೆ ಒಳಗಾದ ಶಿಕ್ಷಕ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. (ಸಾಂದರ್ಭಿಕ ಚಿತ್ರ)
3/ 8
ದೇವೇಂದ್ರಪ್ಪ ಮೋಸಕ್ಕೆ ಒಳಗಾದ ಶಿಕ್ಷಕ. ಯುವತಿಯ ಚಾಟಿಂಗ್ ಮತ್ತು ಮಾತಿನ ಶೈಲಿಗೆ ಮೋಡಿಗೊಳಗಾಗಿದ್ದ ಶಿಕ್ಷಕ ಸುಮಾರು 8 ರಿಂದ 10 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. (ಸಾಂದರ್ಭಿಕ ಚಿತ್ರ)
4/ 8
ಕೊರೊನಾ ಸಮಯದಲ್ಲಿ ಶಿಕ್ಷಕ ದೇವೇಂದ್ರಪ್ಪಗೆ ಯುವತಿ ಪರಿಚಯವಾಗಿದ್ದಾಳೆ. ಕೆಲವು ಕಾರಣಗಳಿಂದ ಪತ್ನಿಯಿಂದ ದೂರವಾಗಿದ್ದ ಶಿಕ್ಷಕ ಯುವತಿ ಜೊತೆ ಚಾಟ್ ಮಾಡಲು ಮುಂದಾಗಿದ್ದಾರೆ. (ಸಾಂದರ್ಭಿಕ ಚಿತ್ರ)
5/ 8
ಆರಂಭದಲ್ಲಿ ತಾನು ಎಂಬಿಬಿಎಸ್ ವಿದ್ಯಾರ್ಥಿನಿ ಎಂದು ಯುವತಿ ಹೇಳಿಕೊಂಡಿದ್ದಾಳೆ. ಹೀಗೆ ಇಬ್ಬರ ನಡುವೆ ಕೆಲ ದಿನಗಳ ಕಾಲ ಮಾತುಕತೆ ನಡೆದಿದೆ. ಮೊದಲು ಮೆಸ್ಗೆ ದುಡ್ಡು ಕಟ್ಟಬೇಕು, ಆರು ಸಾವಿರ ರೂಪಾಯಿ ನೀಡುವಂತೆ ಮನವಿ ಮಾಡಿಕೊಂಡಿದ್ದಾಳೆ. (ಸಾಂದರ್ಭಿಕ ಚಿತ್ರ)
6/ 8
ಮೊದಲು ಆರು ಸಾವಿರ ರೂಪಾಯಿಯನ್ನು ತನ್ನ ಖಾತೆಗೆ ಹಾಕಿಸಿಕೊಂಡ ಯುವತಿ ಮದುವೆಯಾಗುವ ಭರವಸೆಯನ್ನು ನೀಡಿದ್ದಾಳೆ. ತದನಂತರ ಹಂತ ಹಂತವಾಗಿ ಶಿಕ್ಷಕನಿಂದ ಹಣ ಹಾಕಿಸಿಕೊಂಡಿದ್ದಾಳೆ. ಹೀಗೆ ಸುಮಾರು 8 ರಿಂದ 10 ಲಕ್ಷ ಹಣ ಪಡೆದುಕೊಂಡಿದ್ದಾಳೆ. (ಸಾಂದರ್ಭಿಕ ಚಿತ್ರ)
7/ 8
ಮದುವೆ ಭರವಸೆ ನೀಡಿದ ಬಳಿಕ ಯುವತಿಯನ್ನು ಭೇಟಿಯಾಗಲು ಶಿಕ್ಷಕ ಧರ್ಮೇಂದ್ರಪ್ಪ ಹೈದರಾಬಾದ್ಗೆ ತೆರಳಿದ್ದಾರೆ. ಅಲ್ಲಿಯೇ ಬೇರೆ ಯುವತಿಯ ಜೊತೆ ಫೋನ್ನಲ್ಲಿ ಮಾತನಾಡಿಸಿ ಒಂದಿಷ್ಟು ಹಣ ಪಡೆದು ಕಳುಹಿಸಿದ್ದಾರೆ. (ಸಾಂದರ್ಭಿಕ ಚಿತ್ರ)
8/ 8
ಇದೀಗ ಅದೇ ಯುವತಿಯನ್ನು ಮದುವೆಯಾಗಲು ಹಾತೊರೆಯುತ್ತಿದ್ದಾರೆ. ಆದ್ರೆ ಯುವತಿ ಮಾತ್ರ ದೇವೇಂದ್ರಪ್ಪರ ಸಂಪರ್ಕಕ್ಕೆ ಸಿಗುತ್ತಿಲ್ಲ. (ಸಾಂದರ್ಭಿಕ ಚಿತ್ರ)