Sumalatha Ambareesh: ರಾಜ್ಯ ರಾಜ್ಯಕಾರಣಕ್ಕೆ ರೆಬೆಲ್ ಲೇಡಿ ಬರೋದು ಬಹುತೇಕ ಫಿಕ್ಸ್?

Karnataka Election 2023: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ರಾಜ್ಯ ರಾಜಕಾರಣಕ್ಕೆ ಬರುವ ಸುಳಿವು ಸಿಕ್ಕಿದೆ. ನ್ಯೂಸ್ 18 ಜೊತೆ ಮಾತನಾಡಿರುವ ಸುಮಲತಾ ಅಪ್ತ ಹನಕೆರೆ ಶಶಿಕುಮಾರ್ ಸ್ಫೋಟಕ ಸತ್ಯ ಬಿಚ್ಚಿಟ್ಟಿದ್ದಾರೆ.

First published:

  • 17

    Sumalatha Ambareesh: ರಾಜ್ಯ ರಾಜ್ಯಕಾರಣಕ್ಕೆ ರೆಬೆಲ್ ಲೇಡಿ ಬರೋದು ಬಹುತೇಕ ಫಿಕ್ಸ್?

    ಮಂಡ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಹೊಂದಿರುವ ಸುಮಲತಾ ಅಂಬರೀಶ್, ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿರುದ್ಧ ಗೆಲುವು ದಾಖಲಿಸಿದ್ದರು.

    MORE
    GALLERIES

  • 27

    Sumalatha Ambareesh: ರಾಜ್ಯ ರಾಜ್ಯಕಾರಣಕ್ಕೆ ರೆಬೆಲ್ ಲೇಡಿ ಬರೋದು ಬಹುತೇಕ ಫಿಕ್ಸ್?

    ಸದ್ಯ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಎದುರಾಗಿದ್ದು, ಶೀಘ್ರದಲ್ಲಿಯೇ ಚುನಾವಣಾ ದಿನಾಂಕಗಳು ಘೋಷಣೆಯಾಗಲಿವೆ. ಈ ಹಿನ್ನೆಲೆ ಸುಮಲತಾ ಅಂಬರೀಶ್ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡುವ ಸಾಧ್ಯತೆಗಳಿವೆ.

    MORE
    GALLERIES

  • 37

    Sumalatha Ambareesh: ರಾಜ್ಯ ರಾಜ್ಯಕಾರಣಕ್ಕೆ ರೆಬೆಲ್ ಲೇಡಿ ಬರೋದು ಬಹುತೇಕ ಫಿಕ್ಸ್?

    ರಾಜ್ಯ ರಾಜಕಾರಣ ಪ್ರವೇಶಕ್ಕೆ ಸಂಬಂಧಿಸಿದಂತೆ ಜನವರಿ 31ರಂದು ಸುಮಲತಾ ಅಂಬರೀಶ್ ಬೆಂಬಲಿಗರ ಸಭೆ ನಡೆದಿತ್ತು. ಈ ಸಭೆಯಲ್ಲಿ ರಾಜ್ಯ ರಾಜಕಾರಣಕ್ಕೆ ಸುಮಲತಾ ಬರುವಂತೆ ನಿರ್ಣಯ ತೆಗೆದುಕೊಳ್ಳಲಾಗಿತ್ತು ಎಂದು ಹನಕೆರೆ ಶಶಿಕುಮಾರ್ ಹೇಳಿದ್ದಾರೆ.

    MORE
    GALLERIES

  • 47

    Sumalatha Ambareesh: ರಾಜ್ಯ ರಾಜ್ಯಕಾರಣಕ್ಕೆ ರೆಬೆಲ್ ಲೇಡಿ ಬರೋದು ಬಹುತೇಕ ಫಿಕ್ಸ್?

    ಬೆಂಬಲಿಗರ ಒತ್ತಾಯಕ್ಕೆ ಮಣಿದಿರುವ ಸುಮಲತಾ ಅಂಬರೀಶ್, ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

    MORE
    GALLERIES

  • 57

    Sumalatha Ambareesh: ರಾಜ್ಯ ರಾಜ್ಯಕಾರಣಕ್ಕೆ ರೆಬೆಲ್ ಲೇಡಿ ಬರೋದು ಬಹುತೇಕ ಫಿಕ್ಸ್?

    ಶನಿವಾರ ಮಂಡ್ಯ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ತಮ್ಮ ಕಾರ್ಯಕರ್ತರಿಗೆ ಸುಮಲತಾ ಅವರ ಸಭೆಗಳಿಗೆ ತೆರಳದಂತೆ ಎಚ್ಚರಿಕೆ ನೀಡಿದ್ದರು. ಇದೀಗ ಸಿ.ಡಿ.ಗಂಗಾಧರ್ ಹೇಳಿಕೆಗೆ ಶಶಿಕುಮಾರ್ ತಿರುಗೇಟು ನೀಡಿದ್ದಾರೆ.

    MORE
    GALLERIES

  • 67

    Sumalatha Ambareesh: ರಾಜ್ಯ ರಾಜ್ಯಕಾರಣಕ್ಕೆ ರೆಬೆಲ್ ಲೇಡಿ ಬರೋದು ಬಹುತೇಕ ಫಿಕ್ಸ್?

    ಅಭಿಮಾನಿಗಳನ್ನ ತಡೆಯುವ ಪ್ರಯತ್ನ ಮಾಡಿದ್ರೆ ಕಾಂಗ್ರೆಸ್ ಪತನವಾಗಲಿದೆ. ಅಂಬರೀಶ್​ ಸುದೀರ್ಘ 25 ವರ್ಷಗಳ ಕಾಲ ಕಾಂಗ್ರೆಸ್​​​ನಲ್ಲಿದ್ರು. ಮಂಡ್ಯದಲ್ಲಿ ಕಾಂಗ್ರೆಸ್ ಕಟ್ಟಿ ಬೆಳೆಸಿದ್ದು ಅಂಬರೀಶ್ ಎಂದು ಶಶಿಕುಮಾರ್ ಹೇಳಿದ್ದಾರೆ.

    MORE
    GALLERIES

  • 77

    Sumalatha Ambareesh: ರಾಜ್ಯ ರಾಜ್ಯಕಾರಣಕ್ಕೆ ರೆಬೆಲ್ ಲೇಡಿ ಬರೋದು ಬಹುತೇಕ ಫಿಕ್ಸ್?

    ಸುಮಲತಾ ವಿರುದ್ಧ ತಿರುಗಿ ನಿಂತರೆ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಗಲಿದೆ. ಕಾಂಗ್ರೆಸ್​​ಗೆ ಬರಬೇಕಾ ಅಥವಾ ಬೇಡವಾ ಅನ್ನೋದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಸುಖಾಸುಮ್ಮನೇ ಗೊಂದಲ ಸೃಷ್ಟಿಸಬೇಡಿ ಎಂದು ಹನಕೆರೆ ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ.

    MORE
    GALLERIES