Onion Prices: ಕಣ್ಣೀರು ತರಿಸಲಿದೆ ಈರುಳ್ಳಿ; ದೀಪಾವಳಿ ನಂತರ ಮತ್ತೆ ಬೆಲೆ ಏರಿಕೆ?
Onion Price Hike: ಸೆಪ್ಟೆಂಬರ್ ಮತ್ತು ನವೆಂಬರ್ನಲ್ಲಿ ಬರುವ ಬೆಳೆ ಬೆಲೆ ಏರಿಕೆಯನ್ನು ನಿಯಂತ್ರಣದಲ್ಲಿಡುತ್ತದೆ. ಆದ್ರೆ ಈ ಉತ್ಪಾದನೆ ಇಳಿಕೆಯಾದ್ರೆ ಸಹಜವಾಗಿಯೇ ಈರುಳ್ಳಿ ಸೇರಿದಂತೆ ತರಕಾರಿ ಬೆಲೆ ಏರಿಕೆಯಾಗುತ್ತದೆ.
ದೀಪವಾಳಿ ಬಳಿಕ ಈರುಳ್ಳಿ ಬೆಲೆ ಏರಿಕೆಯಾಗುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ. ಕಳೆದ ಕೆಲವು ತಿಂಗಳಿನಿಂದ ಸ್ಥಿರವಾಗಿದ್ದ ಬೆಲೆ ನಿಧಾನವಾಗಿ ಏರಿಕೆಯತ್ತ ಹೊರಟಿದೆ. (ಸಾಂದರ್ಭಿಕ ಚಿತ್ರ)
2/ 7
ಅಕ್ಟೋಬರ್ ಆರಂಭದಲ್ಲಿ ಈರುಳ್ಳಿ ಬೆಲೆ 25 ರೂ. ಇತ್ತು. ಸದ್ಯ ಈರುಳ್ಳಿ ಬೆಲೆ 30 ರಿಂದ 40 ರೂಪಾಯಿಗೆ ಏರಿಕೆಯಾಗಿದೆ. ಈರುಳ್ಳಿ ಪೂರೈಕೆಯಲ್ಲಿ ಕೊರತೆ ಆಗುತ್ತಿರುವ ಹಿನ್ನೆಲೆ ಬೆಲೆ ಏರಿಕೆಯಾಗುತ್ತಿದೆ. (ಸಾಂದರ್ಭಿಕ ಚಿತ್ರ)
3/ 7
ಈರುಳ್ಳಿಯ ಸಗಟು ಬೆಲೆಯು ಹದಿನೈದು ದಿನಗಳ ಹಿಂದಿನ ಬೆಲೆಗಿಂತ ಈಗ ಶೇಕಡಾ 40 ರಷ್ಟು ಹೆಚ್ಚಾಗಿದೆ. ವ್ಯಾಪಾರಸ್ಥರೇ ಈರುಳ್ಳಿಯನ್ನು 15 ರಿಂದ 30 ರೂಪಾಯಿಗೆ ಖರೀದಿ ಮಾಡುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)
4/ 7
ನವೆಂಬರ್ ಮೊದಲ ವಾರಕ್ಕೆ ಹೊಸ ಈರುಳ್ಳಿ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಅಲ್ಲಿಯವರೆಗೂ ಈರುಳ್ಳಿ ಬೆಲೆ ಏರಿಕೆಯಾಗಲಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ದೇಶದ ಹಲವೆಡೆ ಚಿಲ್ಲರೆ ಬೆಲೆ 40 ರೂ.ಗೆ ಏರಿಕೆಯಾಗಿದೆ. (ಸಾಂದರ್ಭಿಕ ಚಿತ್ರ)
5/ 7
ಸದ್ಯದಲ್ಲೇ ಈರುಳ್ಳಿ ಬೆಲೆ 50 ರೂ.ಗೆ ಏರಿಕೆಯಾಗಲಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಅಕ್ಟೋಬರ್ ಮೊದಲ ವಾರದಲ್ಲಿ ಈರುಳ್ಳಿ ಬೆಲೆ 15 ರಿಂದ 25 ರೂಪಾಯಿ ಇತ್ತು. (ಸಾಂದರ್ಭಿಕ ಚಿತ್ರ)
6/ 7
ಖಾರಿಫ್ ಋತುವಿನಲ್ಲಿ ಈರುಳ್ಳಿ ಉತ್ಪಾದನೆ ವಿರಳ ಆಗಿರುತ್ತದೆ. ಸೆಪ್ಟೆಂಬರ್-ನವೆಂಬರ್ನಲ್ಲಿ ಈರುಳ್ಳಿ ಅತ್ಯಧಿಕ ಉತ್ಪಾದನೆ ಆಗುತ್ತಿದೆ. ಆದ್ರೆ ಈ ಬಾರಿ ಮಳೆಯಿಂದಾಗಿ ಹಲವು ಭಾಗದಲ್ಲಿ ಈರುಳ್ಳಿ ಬೆಳೆ ಹಾನಿಯಾಗಿದೆ. (ಸಾಂದರ್ಭಿಕ ಚಿತ್ರ)
7/ 7
ಕಳೆದೊಂದು ವಾರದಲ್ಲಿ ವ್ಯಾಪಕ ಮಳೆಯಾಗಿದ್ದು ಈರುಳ್ಳಿ ಸೇರಿದಂತೆ ಹಲವು ಬೆಳೆಗಳು ಜಲಾವೃತಗೊಂಡು ಜಮೀನಿನಲ್ಲಿಯೇ ಕೊಳೆಯುತ್ತಿವೆ. ಇದರ ಜೊತೆಗೆ ಇತರೆ ತರಕಾರಿ ಬೆಲೆ ಏರಿಕೆಯಾಗುತ್ತಿದೆ. (ಸಾಂದರ್ಭಿಕ ಚಿತ್ರ)