Chamajanagar: ಕರ್ನಾಟಕ-ತಮಿಳುನಾಡು ಗಡಿಯನ್ನ ಬಂದ್ ಮಾಡಿದ ಗಜಪಡೆ
ಕೊರೊನಾ ಕಾಲದಲ್ಲಿನ ರಾಜ್ಯಗಳ ನಡುವಿನ ಗಡಿಯನ್ನು ಬಂದ್ ಮಾಡಲಾಗಿತ್ತು. ರಾಜ್ಯಕ್ಕೆ ಸಂಪರ್ಕಿಸುವ ಎಲ್ಲಾ ಚೆಕ್ಪೋಸ್ಟ್ ಗಳಲ್ಲಿ ಕಟ್ಟೆಚ್ಚರವಹಿಸಲಾಗಿತ್ತು. ಕೊರೊನಾ ಪ್ರಮಾಣ ಇಳಿಕೆಯಾಗಿದ್ದು, ಗಡಿಗಳು ಸಂಚಾರಕ್ಕೆ ಮುಕ್ತವಾಗಿವೆ.
ಕೆಲವೊಮ್ಮೆ ಅಂತರ್ ರಾಜ್ಯಗಳ ನಡುವೆ ಸಂಘರ್ಷ ಉಂಟಾದಾಗ ಗಡಿಗಳನ್ನು ಬಂದ್ ಮಾಡಲಾಗುತ್ತದೆ. ದೊಡ್ಡಮಟ್ಟದ ಪ್ರತಿಭಟನೆಗಳು ನಡೆದಾಗ ಹೋರಾಟಗಾರರೇ ಗಡಿಗಳನ್ನು ಬಂದ್ ಮಾಡಿರುತ್ತಾರೆ. (ಸಾಂದರ್ಭಿಕ ಚಿತ್ರ)
2/ 7
ಇಂದು ಕೆಲ ಕಾಲ ಎರಡು ರಾಜ್ಯಗಳ ನಡುವಿನ ಗಡಿ ಬಂದ್ ಮಾಡಲಾಗಿತ್ತು. ತಪಾಸಣೆಗಾಗಿ ಅಧಿಕಾರಿಗಳು ಅಥವಾ ಪ್ರತಿಭಟನೆಗಾಗಿ ಹೋರಾಟಗಾರು ಬಂದ್ ಮಾಡಿರಬೇಕು ಅಂದ್ಕೊಂಡಿದ್ರೆ ನಿಮ್ಮ ಊಹೆ ತಪ್ಪು.
3/ 7
ಇದು ಅಧಿಕಾರಿಗಳು ಅಥವಾ ಹೋರಾಟಗಾರರು ಮಾಡಿದ ಬಂದ್ ಅಲ್ಲ. ಗಡಿಯನ್ನು ಬಂದ್ ಮಾಡಿದ್ದು ಕಾಡಾನೆಗಳು. ಇದನ್ನು ನೀವು ನಂಬಲೇಬೇಕು. ಇದು ಕಾಡಾನೆಗಳ ಕಿತಾಪತಿ.
4/ 7
ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿ ಗಜಪಡೆ ವಾಹನ ಸಂಚಾರಕ್ಕೆ ತಡೆ ಒಡ್ಡಿತ್ತು. ಚಾಮರಾಜನಗರ ಜಿಲ್ಲೆ ಮೂಲಕ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ಘಟನೆ ನಡೆದಿದೆ.
5/ 7
ಚಾಮರಾಜನಗರ ಜಿಲ್ಲೆಯ ಕಾರೇಪಾಳ್ಯ ಚೆಕ್ಪೋಸ್ಟ್ನಲ್ಲಿ ಆನೆಗಳ ಗುಂಪಿನಿಂದ ಕೆಲ ಕಾಲ ಗಡಿ ಬಂದ್ ಆಗಿತ್ತು. ಆನೆಗಳು ಕಬ್ಬು ತಿನ್ನಲು ಗಡಿಯನ್ನು ಬಂದ್ ಮಾಡಿದ್ದರಿಂದ ವಾಹನ ಸವಾರು ಗಜಪಡೆ ಗ್ರೀನ್ ಸಿಗ್ನಲ್ ನೀಡೋವರೆಗೂ ಕಾಯುವಂತಾಯ್ತು.
6/ 7
ತಮಿಳುನಾಡಿನ ಬಣ್ಣಾರಿ ಕಾಖಾರ್ನೆಗೆ ತೆರಳುವ ಕಬ್ಬು ತುಂಬಿದ ಲಾರಿಗಳನ್ನು ಕಾಡಾನೆಗಳು ಅಡ್ಡಗಟ್ಟದ್ದವು. ಲಾರಿಗಳಲ್ಲಿದ್ದ ಕಬ್ಬು ಕಿತ್ತು ತಿಂದ ನಂತರವೇ ಕಾಡಾನೆಗಳು ದಾರಿ ನೀಡಿವೆ.
7/ 7
ಈ ಮಾರ್ಗದಲ್ಲಿ ಆನೆಗಳಿಂದ ಆಗಾಗ ಸಂಚಾರದಲ್ಲಿ ವ್ಯತ್ಯಯ ಉಂಟಾಗುತ್ತಿರುತ್ತದೆ. ಈ ಹಿಂದೆಯೂ ಆನೆಗಳ ಕಬ್ಬು ತುಂಬಿದ ಲಾರಿಗಳನ್ನು ಆನೆಗಳು ಅಡ್ಡಗಟ್ಟಿದ್ದವು.