Mandya: ಇನಿಯನ ಜೊತೆ ಸೇರಿ ಕಿರುಕುಳ: ಮಗನನ್ನ ಸೊಂಟಕ್ಕೆ ಕಟ್ಕೊಂಡು ತೊರೆಗೆ ಜಿಗಿದ ಗಂಡ

ಪತ್ನಿಯ ಕಿರುಕುಳಕ್ಕೆ ಬೇಸತ್ತ ಪತಿ ಮಗನನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಪಿಟ್ಟೇಕೊಪ್ಪಲು ಗ್ರಾಮದಲ್ಲಿ ನಡೆದಿದೆ.

First published:

  • 15

    Mandya: ಇನಿಯನ ಜೊತೆ ಸೇರಿ ಕಿರುಕುಳ: ಮಗನನ್ನ ಸೊಂಟಕ್ಕೆ ಕಟ್ಕೊಂಡು ತೊರೆಗೆ ಜಿಗಿದ ಗಂಡ

    38 ವರ್ಷದ ಗಂಗಾಧರ್ ಗೌಡ ಆತ್ಮಹತ್ಯೆಗೆ ಶರಣಾದ ಪತಿ. ತಂದೆಯ ದುಡುಕಿನ ನಿರ್ಧಾರದಿಂದ ಆರು ವರ್ಷದ ಜಸ್ವಿತ್ ಸಹ ಸಾವನ್ನಪ್ಪಿದ್ದಾನೆ. ಪಿಟ್ಟೇಕೊಪ್ಪಲು ಗ್ರಾಮದ ನಿವಾಸಿಯಾಗಿರುವ ಗಂಗಾಧರ್ ಗೌಡಗೆ ಎಂಟು ವರ್ಷಗಳ ಹಿಂದೆ ಸಿಂಧೂ ಜೊತೆ ಮದುವೆಯಾಗಿತ್ತು.

    MORE
    GALLERIES

  • 25

    Mandya: ಇನಿಯನ ಜೊತೆ ಸೇರಿ ಕಿರುಕುಳ: ಮಗನನ್ನ ಸೊಂಟಕ್ಕೆ ಕಟ್ಕೊಂಡು ತೊರೆಗೆ ಜಿಗಿದ ಗಂಡ

    ದಂಪತಿಗೆ ಒಂದು ಗಂಡು ಮಗು ಸಹ ಆಗಿತ್ತು. ಸುಂದರ ಸಂಸಾರ ಇದ್ರೂ ಸಿಂಧೂ ಅನೈತಿಕ ಸಂಬಂಧ ಹೊಂದಿದ್ದಳು. ಈ ಸಂಬಂಧ ಗ್ರಾಮಸ್ಥರು ಮತ್ತು ಕುಟುಂಬಸ್ಥರು ರಾಜಿ ಪಂಚಾಯ್ತಿ ಸಹ ಮಾಡಿಸಿದ್ದರು. ಆದ್ರೂ ಸಿಂಧೂ ಮಾತ್ರ ಎಲ್ಐಸಿ ಏಜೆಂಟ್ ಆಗಿರುವ ಜಿ.ಸಿ.ನಂಜೇಗೌಡನಿಂದ ದೂರ ಆಗಿರಲಿಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 35

    Mandya: ಇನಿಯನ ಜೊತೆ ಸೇರಿ ಕಿರುಕುಳ: ಮಗನನ್ನ ಸೊಂಟಕ್ಕೆ ಕಟ್ಕೊಂಡು ತೊರೆಗೆ ಜಿಗಿದ ಗಂಡ

    ಇಷ್ಟಕ್ಕೆ ಸುಮ್ಮನಾಗದ ಸಿಂಧೂ ಇನಿಯನ ಜೊತೆ ಸೇರಿ ಗಂಗಾಧರ್ ಗೌಡಗೆ ಪದೇ ಪದೇ ತೊಂದರೆ ನೀಡಲು ಆರಂಭಿಸಿದ್ದಾರೆ. ಇದರಿಂದ ನೊಂದ ಗಂಗಾಧರ್ ಗ್ರಾಮದ ಹೊರ ವಲಯದಲ್ಲಿರುವ ತೊರೆಗೆ ಮಗನ ಜೊತೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 45

    Mandya: ಇನಿಯನ ಜೊತೆ ಸೇರಿ ಕಿರುಕುಳ: ಮಗನನ್ನ ಸೊಂಟಕ್ಕೆ ಕಟ್ಕೊಂಡು ತೊರೆಗೆ ಜಿಗಿದ ಗಂಡ

    ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿರುವ ಗಂಗಾಧರ್, ತಮ್ಮ ಸಾವಿಗೆ ನಂಜೇ್ಗೌಡ ಮತ್ತು ಸಿಂಧೂ ಎಂದು ಬರೆದಿದ್ದಾರೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 55

    Mandya: ಇನಿಯನ ಜೊತೆ ಸೇರಿ ಕಿರುಕುಳ: ಮಗನನ್ನ ಸೊಂಟಕ್ಕೆ ಕಟ್ಕೊಂಡು ತೊರೆಗೆ ಜಿಗಿದ ಗಂಡ

    ಘಟನೆ ಸಂಬಂಧ ಗಂಗಾಧರ್ ಸೋದರ ದೂರು ದಾಖಲಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಬಿಂಡಿಗನವಿಲೆ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  (ಸಾಂದರ್ಭಿಕ ಚಿತ್ರ)

    MORE
    GALLERIES