ಮದುವೆಯಾಗುವ ಹುಡುಗ ಮದ್ಯಪಾನ ಮಾಡಬಾರದು ಎಂದು ಎಲ್ಲಾ ಹುಡುಗಿಯರು ಕನಸು ಕಂಡಿರುತ್ತಾರೆ. ಆದ್ರೆ ಕೆಲವರಿಗೆ ಕುಡಿತಕ್ಕೆ ದಾಸನಾಗಿರುವ ಗಂಡನೇ ಸಿಕ್ಕಿರುತ್ತಾನೆ.
2/ 7
ಬಹುತೇಕ ಮಹಿಳೆಯರು ಗಂಡ ಕುಡುಕನಾಗಿದ್ರೂ ಆತನೊಂದಿಗೆ ಜೀವನ ನಡೆಸಿಕೊಂಡು ಹೋಗುತ್ತಿರುತ್ತಾರೆ. ಅದರ ಜೊತೆಗೆ ಮದ್ಯಪಾನ ಬಿಡಿಸಲು ಮಾರ್ಗಗಳನ್ನು ಹುಡುಕುತ್ತಿರುತ್ತಾರೆ.
3/ 7
ಕೆಲವರು ಕುಡುಕ ಗಂಡನಿಂದ ದೂರ ಉಳಿದು ಜೀವನ ನಡೆಸುತ್ತಾರೆ. ಒಂದಿಷ್ಟು ಜನರು ಅಂತಹ ಗಂಡನಿಂದ ಡಿವೋರ್ಸ್ ಪಡೆದುಕೊಳ್ಳುತ್ತಾರೆ.
4/ 7
ಆದ್ರೆ ಒಂದಿಷ್ಟು ಮಹಿಳೆಯರು ಕುಡಿತದ ಚಟ ಬಿಡಿಸುವ ಕೇಂದ್ರಗಳಿಗೆ ಗಂಡನನ್ನು ಕರೆದುಕೊಂಡು ಹೋಗುತ್ತಾರೆ. ಆದ್ರೆ ಇಲ್ಲೊಬ್ಬ ಮಹಿಳೆ ಗಂಡನ ಕುಡಿತದ ಚಟ ಬಿಡಿಸಲು ಕಾಲಗಳಿಗೆ ಸರಪಳಿ ಹಾಕಿ ಗೃಹ ಬಂಧನದಲ್ಲಿರಿಸಲಾಗಿದೆ.
5/ 7
ಹೊಸೂರು ಗ್ರಾಮದ ಅಮೃತಾ, ಕಳವಿಬಾಗಿಯ ರಂಗನಾಥ್ ಜೊತೆ ವಿವಾಹವಾಗಿದ್ದರು. ರಂಗನಾಥ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದನು.
6/ 7
ಕೋವಿಡ್ ಎರಡನೇ ಅಲೆ ವೇಳೆ ಸ್ವಗ್ರಾಮ ಸೇರಿದ್ದ ರಂಗನಾಥ್, ಕುಡಿತದ ದಾಸನಾಗಿದ್ದನು. ಪ್ರತಿನಿತ್ಯ ಕುಡಿದು ಮನೆಗೆ ಧಾವಿಸುತಿದ್ದ ರಂಗನಾಥ್, ಪತ್ನಿ ಜೊತೆ ಜಗಳವಾಡ್ತಿದ್ದನು.
7/ 7
ಇದರಿಂದ ಬೇಸತ್ತ ಅಮೃತಾ, ಪತಿಯಿಂದ ದೂರವಿದ್ದು, ತವರು ಮನೆಯಲ್ಲೇ ಬೀಡು ಬಿಟ್ಟಿದ್ದರು. ಆದರೆ ಅಲ್ಲಿಗೂ ಬಂದ ಪತಿಯನ್ನ ಅಮೃತಾ ಸರಪಳಿಯಿಂದ ಕಟ್ಟಿಹಾಕಿದ್ದಾರೆ. (ಸಾಂದರ್ಭಿಕ ಚಿತ್ರ)