DK Shivakumar: ಸಿಎಂ ಇಲ್ಲ ಎಂದರೆ ಏನು ಬೇಡ ಅಂತಿದ್ದ ‘ಬಂಡೆ’ ಕರಗಿದ್ದೇಕೆ? ಹೈಕಮಾಂಡ್ ಮುಂದಿಟ್ಟ ಬೇಡಿಕೆಗಳೇನು?

ಸಿಎಂ ಇಲ್ಲ ಎಂದರೆ ಏನು ಬೇಡ ಅಂತಿದ್ದ ಕನಕಪುರ ಬಂಡೆ ಕರಗಿ ಡಿಸಿಎಂ ಪಟ್ಟಕ್ಕೆ ಒಪ್ಪೋಕೆ ಮುಂಚೆ ಒಂದಷ್ಟು ಡಿಮ್ಯಾಂಡ್ ಇಟ್ಟಿದ್ದರಂತೆ. ಈ ಬೇಡಿಕೆಗಳಿಗೆ ಹೈಕಮಾಂಡ್ ಕೂಡ ಒಪ್ಪಿಗೆ ಸೂಚಿಸಿದೆಯಂತೆ.

  • News18 Kannada
  • |
  •   | Bangalore [Bangalore], India
First published:

  • 17

    DK Shivakumar: ಸಿಎಂ ಇಲ್ಲ ಎಂದರೆ ಏನು ಬೇಡ ಅಂತಿದ್ದ ‘ಬಂಡೆ’ ಕರಗಿದ್ದೇಕೆ? ಹೈಕಮಾಂಡ್ ಮುಂದಿಟ್ಟ ಬೇಡಿಕೆಗಳೇನು?

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಪಡೆದ ಕಾಂಗ್ರೆಸ್​ನ ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿಕೆ ಶಿವಕುಮಾರ್ ಆಯ್ಕೆ ಆಗಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಹೈಕಮಾಂಡ್​ ಎದುರು ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದು ಕುಳಿತಿದ್ದ ಡಿಕೆಶಿ, ಕೊನೆಗೆ ಹೈಕಮಾಂಡ್ ಸಂಧಾನಕ್ಕೆ ಒತ್ತಿ ಉಪಮುಖ್ಯಮಂತ್ರಿ ಸ್ಥಾನವನ್ನು ಒಪ್ಪಿಕೊಂಡಿದ್ದಾರೆ.

    MORE
    GALLERIES

  • 27

    DK Shivakumar: ಸಿಎಂ ಇಲ್ಲ ಎಂದರೆ ಏನು ಬೇಡ ಅಂತಿದ್ದ ‘ಬಂಡೆ’ ಕರಗಿದ್ದೇಕೆ? ಹೈಕಮಾಂಡ್ ಮುಂದಿಟ್ಟ ಬೇಡಿಕೆಗಳೇನು?

    ಎಲ್ಲಾ ಬೆಳವಣಿಗೆಗಳ ನಡುವೆ ಡಿಕೆ ಶಿವಕುಮಾರ್ ಹೈಕಮಾಂಡ್ ಎದುರು ಇಟ್ಟ ಬೇಡಿಕೆಗಳೇನು? ಸಿದ್ದರಾಮಯ್ಯ, ಡಿಕೆಶಿ ನಡುವಿನ ಸಂಧಾನಕ್ಕೆ ಹೈಕಮಾಂಡ್ ಮುಂದಿಟ್ಟ ಸೂತ್ರವೇನು ಎಂಬ ಕುತೂಹಲ ಎದುರಾಗಿದೆ.

    MORE
    GALLERIES

  • 37

    DK Shivakumar: ಸಿಎಂ ಇಲ್ಲ ಎಂದರೆ ಏನು ಬೇಡ ಅಂತಿದ್ದ ‘ಬಂಡೆ’ ಕರಗಿದ್ದೇಕೆ? ಹೈಕಮಾಂಡ್ ಮುಂದಿಟ್ಟ ಬೇಡಿಕೆಗಳೇನು?

    ಡಿಕೆ ಶಿವಕುಮಾರ್ ಅವರ ಮನವೊಲಿಕೆ ಮಾಡಲು ಸೋನಿಯಾ ಗಾಂಧಿ ಅವರೇ ಕರೆ ಮಾಡಿದ್ದು, ಪಕ್ಷ ನಿಷ್ಠೆಯ ಕಾರಣ ಅವರು ತಮ್ಮ ಪಟ್ಟು ಸಡಿಲಗೊಳಿಸಿದ್ದರಂತೆ. ಅಲ್ಲದೆ, ಸಿದ್ದರಾಮ್ಯಯ ಅವರಿಗೆ ಹೆಚ್ಚಿನ ಶಾಸಕರು ಒಲವು ತೋರಿಸಿದ್ದು ಸೇರಿದಂತೆ ಡಿಕೆಶಿ ಮುಂದಿಟ್ಟ ಬೇಡಿಕೆ ಹೈಕಮಾಂಡ್ ಗ್ರೀನ್ ತೋರಿಸಿದ ಕಾರಣ ಫೈಟ್​ಗೆ ಕೊನೆಗೂ ಬ್ರೇಕ್​ ಬಿತ್ತು ಎನ್ನಲಾಗಿದೆ.

    MORE
    GALLERIES

  • 47

    DK Shivakumar: ಸಿಎಂ ಇಲ್ಲ ಎಂದರೆ ಏನು ಬೇಡ ಅಂತಿದ್ದ ‘ಬಂಡೆ’ ಕರಗಿದ್ದೇಕೆ? ಹೈಕಮಾಂಡ್ ಮುಂದಿಟ್ಟ ಬೇಡಿಕೆಗಳೇನು?

    ಇನ್ನು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ್ ಅನ್ನೋ ಒನ್ ಲೈನ್ ನಿರ್ಧಾರಕ್ಕೆ ಬರುವ ಮುನ್ನ ಹೈಕಮಾಂಡ್ ಮಟ್ಟದಲ್ಲಿ ಒಂದಷ್ಟು ರಾಜಿ ಸೂತ್ರದ ಸಂಧಾನ ಕೂಡ ಆಗಿತ್ತು ಎನ್ನಲಾಗಿದೆ. ಅಧಿಕಾರ ಹಂಚಿಕೆ ಸೂತ್ರ ನೋಡುವುದಾದರೆ, ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ನಡುವೆ 50:50 ಅಧಿಕಾರ ಆಗಿದ್ಯಂತೆ, ಡಿಕೆಶಿ ಒಬ್ಬರೇ ಡಿಸಿಎಂ ಆಗುವುದು. ಪ್ರಬಲ ಖಾತೆ ಹಾಗೂ ಪಕ್ಷದ ಅಧ್ಯಕ್ಷ ಸ್ಥಾನ ನೀಡಿ, ಡಿಕೆಶಿ ಆಪ್ತರಿಗೆ 8-10 ಸಚಿವಸ್ಥಾನ ನೀಡಲು ಒಪ್ಪಿಗೆ ನೀಡಿದೆಯಂತೆ.

    MORE
    GALLERIES

  • 57

    DK Shivakumar: ಸಿಎಂ ಇಲ್ಲ ಎಂದರೆ ಏನು ಬೇಡ ಅಂತಿದ್ದ ‘ಬಂಡೆ’ ಕರಗಿದ್ದೇಕೆ? ಹೈಕಮಾಂಡ್ ಮುಂದಿಟ್ಟ ಬೇಡಿಕೆಗಳೇನು?

    ಇದರೊಂದಿಗೆ 30 ತಿಂಗಳ ಬಳಿಕ ಡಿಕೆಶಿ ಸಿಎಂ ಸ್ಥಾನ ನೀಡುವುದು, ಕೆಪಿಸಿಸಿ ಅಧ್ಯಕ್ಷರಿಗೆ ನೀಡಿರುವ ಇಲಾಖೆಗೆ ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ಎಂಟ್ರಿ ಕೊಡದಿರುವುದು. ಸಿಎಂಗೆ ಸಿಗುವಷ್ಟೇ ಗೌರವ ಡಿಸಿಎಂಗೂ ನೀಡುವ ಆಶ್ವಾಸನೆ ನೀಡಲಾಗಿದೆಯಂತೆ.

    MORE
    GALLERIES

  • 67

    DK Shivakumar: ಸಿಎಂ ಇಲ್ಲ ಎಂದರೆ ಏನು ಬೇಡ ಅಂತಿದ್ದ ‘ಬಂಡೆ’ ಕರಗಿದ್ದೇಕೆ? ಹೈಕಮಾಂಡ್ ಮುಂದಿಟ್ಟ ಬೇಡಿಕೆಗಳೇನು?

    ಇನ್ನು, ಸಿಎಂ ಇಲ್ಲ ಎಂದರೆ ಏನು ಬೇಡ ಅಂತಿದ್ದ ಕನಕಪುರ ಬಂಡೆ ಕರಗಿ ಡಿಸಿಎಂ ಪಟ್ಟಕ್ಕೆ ಒಪ್ಪೋಕೆ ಮುಂಚೆ ಒಂದಷ್ಟು ಡಿಮ್ಯಾಂಡ್ ಇಟ್ಟಿದ್ದರಂತೆ. ಪ್ರಮುಖವಾಗಿ ಸಿದ್ದರಾಮಯ್ಯ ಒಬ್ಬರೇ ನಿರ್ಧಾರ ಮಾಡಬಾರದು. ನಿರ್ಧಾರಕ್ಕೂ ಮುನ್ನ ನನ್ನ ಅಭಿಪ್ರಾಯ ಕೇಳಬೇಕು. ಮಂತ್ರಿಗಿರಿಗೆ ಬಂಡೆದ್ದರೆ ವರಿಷ್ಠರೇ ಸರಿ ಮಾಡಬೇಕು. ಲೋಕಸಭೆ ಸೋಲು-ಗೆಲುವು ಎಲ್ಲರ ಹೊಣೆ ಹಾಗೂ ನಿಗಮ-ಮಂಡಳಿ ನೇಮಕದಲ್ಲಿ 50:50 ಸೂತ್ರ ಮುಂದಿಟ್ಟಿದ್ದರಂತೆ.

    MORE
    GALLERIES

  • 77

    DK Shivakumar: ಸಿಎಂ ಇಲ್ಲ ಎಂದರೆ ಏನು ಬೇಡ ಅಂತಿದ್ದ ‘ಬಂಡೆ’ ಕರಗಿದ್ದೇಕೆ? ಹೈಕಮಾಂಡ್ ಮುಂದಿಟ್ಟ ಬೇಡಿಕೆಗಳೇನು?

    ಇನ್ನು, ಶನಿವಾರ ಮಧ್ಯಾಹ್ನ 12:30ಕ್ಕೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​​​ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಶನಿವಾರದ ಪ್ರಮಾಣವಚನ ಕಾರ್ಯಕ್ರಮಕ್ಕೆ ಕಾಂಗ್ರೆಸ್​ನ ಘಟಾನುಘಟಿಗಳು ಆಗಮಿಸಲಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ವಾದ್ರಾ ಸಾಕ್ಷಿಯಾಗಲಿದ್ದಾರೆ. ಇದರೊಂದಿಗೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತಮಿಳುನಾಡು ಸಿಎಂ ಸ್ಟಾಲಿನ್, ಜಾರ್ಖಂಡ್​ ಸಿಎಂ ಹೇಮಂತ್ ಸೂರೇನ್, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಛತ್ತೀಸ್​ಗಢ ಸಿಎಂ ಭೂಪೇಶ್​​, ಬಿಹಾರ ಸಿಎಂ ನಿತೀಶ್ ಕುಮಾರ್, ಡಿಸಿಎಂ ತೇಜಸ್ವಿ ಯಾದವ್​ ಕೂಡ ರಾಜ್ಯಕ್ಕೆ ಆಗಮಿಸಲಿದ್ದಾರೆ. ಹಿಮಾಚಲ ಸಿಎಂ ಸುಖ್ವಿಂದರ್​ ಸಿಂಗ್​, ಪುದುಚೇರಿ ಸಿಎಂ ರಂಗಸ್ವಾಮಿ ಕೂಡ ಪ್ರಮಾಣ ವಚನಕ್ಕೆ ಸಾಕ್ಷಿ ಆಗಲಿದ್ದಾರೆ.

    MORE
    GALLERIES