Karnataka Election​ Result: ಕಾಂಗ್ರೆಸ್ ಗೆಲುವಿನ ಬಗ್ಗೆ ಸಮೀಕ್ಷೆಗಳು ಹತ್ತಾರು, ನಿಖರ ಭವಿಷ್ಯ ನುಡಿದಿದ್ದು ಯಾರು?

ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಶನಿವಾರ ಹೊರಬಿದ್ದಿದ್ದು, ಕಾಂಗ್ರೆಸ್​ 136 ಕ್ಷೇತ್ರ ಗೆದ್ದು ಬಹುಮತ ಪಡೆದುಕೊಂಡಿದೆ. ಜೊತೆಗೆ ಇಬ್ಬರು ಪಕ್ಷೇತರ ಶಾಸಕರು ಕೂಡ ಕಾಂಗ್ರೆಸ್​ ಸೇರುವುದು ಕಾಂಗ್ರೆಸ್​ ಸ್ಥಾನಗಳ ಸಂಖ್ಯೆ 138ಕ್ಕೆ ಏರಿಕೆಯಾಗಿದೆ.

  • News18 Kannada
  • |
  •   | Bangalore [Bangalore], India
First published:

  • 17

    Karnataka Election​ Result: ಕಾಂಗ್ರೆಸ್ ಗೆಲುವಿನ ಬಗ್ಗೆ ಸಮೀಕ್ಷೆಗಳು ಹತ್ತಾರು, ನಿಖರ ಭವಿಷ್ಯ ನುಡಿದಿದ್ದು ಯಾರು?

    ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಶನಿವಾರ ಹೊರಬಿದ್ದಿದ್ದು, ಕಾಂಗ್ರೆಸ್​ 136 ಕ್ಷೇತ್ರ ಗೆದ್ದು ಬಹುಮತ ಪಡೆದುಕೊಂಡಿದೆ. ಜೊತೆಗೆ ಇಬ್ಬರು ಪಕ್ಷೇತರ ಶಾಸಕರು ಕೂಡ ಕಾಂಗ್ರೆಸ್​ ಸೇರುವುದು ಕಾಂಗ್ರೆಸ್​ ಸ್ಥಾನಗಳ ಸಂಖ್ಯೆ 138ಕ್ಕೆ ಏರಿಕೆಯಾಗಿದೆ.

    MORE
    GALLERIES

  • 27

    Karnataka Election​ Result: ಕಾಂಗ್ರೆಸ್ ಗೆಲುವಿನ ಬಗ್ಗೆ ಸಮೀಕ್ಷೆಗಳು ಹತ್ತಾರು, ನಿಖರ ಭವಿಷ್ಯ ನುಡಿದಿದ್ದು ಯಾರು?

    ಹಲವು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನೀಡಿದಂತೆ ಕಾಂಗ್ರೆಸ್​ ರಾಜ್ಯದ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಯಾವೆಲ್ಲಾ ಸಮೀಕ್ಷೆಗಳು ಕಾಂಗ್ರೆಸ್​ ಅಧಿಕಾರಕ್ಕೆ ಬರಲಿದೆ ಎಂದು  ಭವಿಷ್ಯ ನುಡಿದಿದ್ದವು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

    MORE
    GALLERIES

  • 37

    Karnataka Election​ Result: ಕಾಂಗ್ರೆಸ್ ಗೆಲುವಿನ ಬಗ್ಗೆ ಸಮೀಕ್ಷೆಗಳು ಹತ್ತಾರು, ನಿಖರ ಭವಿಷ್ಯ ನುಡಿದಿದ್ದು ಯಾರು?

    ಇಂಡಿಯಾ ಟುಡೇ- ಆಕ್ಸಿಸ್ ಮೈ ಇಂಡಿಯಾ ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಭವಿಷ್ಯ ನುಡಿದಿತ್ತು. ಈ ಸಮೀಕ್ಷೆಯಲ್ಲಿ ಕಾಂಗ್ರೆಸ್‌ ಪಕ್ಷ 122–140 ಸ್ಥಾನ ಗೆಲ್ಲಲಿದೆ ಎಂದು ಘೋಷಿಸಲಾಗಿತ್ತು. ಜೊತೆಗೆ ಬಿಜೆಪಿ 62–80 ಸ್ಥಾನ, ಜೆಡಿಎಸ್‌ 20–25 ಸ್ಥಾನ ಮತ್ತು 0–3 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಹೇಳಿತ್ತು. ಇದೀಗ ಭವಿಷ್ಯ ಬಹುತೇಕ ನಿಜವಾಗಿದೆ.

    MORE
    GALLERIES

  • 47

    Karnataka Election​ Result: ಕಾಂಗ್ರೆಸ್ ಗೆಲುವಿನ ಬಗ್ಗೆ ಸಮೀಕ್ಷೆಗಳು ಹತ್ತಾರು, ನಿಖರ ಭವಿಷ್ಯ ನುಡಿದಿದ್ದು ಯಾರು?

    ಕನ್ನಡದ ನ್ಯೂಸ್‌ ವೆಬ್‌ಸೈಟ್‌  'ಈ ದಿನ' ಕೂಡ ಕಾಂಗ್ರೆಸ್​ ಪಕ್ಷ ಬಹುಮತಕ್ಕಿಂಗಲೂ ಹೆಚ್ಚಿನ ಸ್ಥಾನ ಕಾಂಗ್ರೆಸ್​ ಪಾಲಾಗಲಿದೆ ಎಂದು ಹೇಳಿತ್ತು. ಅದು ಕಾಂಗ್ರೆಸ್‌  132 ರಿಂದ  140, ಬಿಜೆಪಿ 57 ರಿಂದ  65 ಸ್ಥಾನ ಸಿಗಬಹುದು. ಜೆಡಿಎಸ್‌ 19ರಿಂದ 25 ಕ್ಷೇತ್ರಗಳಿಗೆ ಸೀಮಿತವಾಗಿದೆ ಎಂದು ತಿಳಿಸಿತ್ತು. ಇದೀಗ ಈ ದಿನ ಸಮೀಕ್ಷೆ ಕೂಡ ಫಲಿತಾಂಶಕ್ಕೆ ಹತ್ತಿರವಾಗಿದೆ.

    MORE
    GALLERIES

  • 57

    Karnataka Election​ Result: ಕಾಂಗ್ರೆಸ್ ಗೆಲುವಿನ ಬಗ್ಗೆ ಸಮೀಕ್ಷೆಗಳು ಹತ್ತಾರು, ನಿಖರ ಭವಿಷ್ಯ ನುಡಿದಿದ್ದು ಯಾರು?

    ನ್ಯೂಸ್​ 24-ಟುಡೇಸ್​ ಚಾಣಕ್ಯ ಎಕ್ಸಿಟ್ ಪೋಲ್​ನಲ್ಲಿ ಕಾಂಗ್ರೆಸ್​ ಪಕ್ಷ 120 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿತ್ತು. ಬಿಜೆಪಿ 92 ಸ್ಥಾನ, ಜೆಡಿಎಸ್​ಗೆ  12-19 ಸ್ಥಾನ ಸಿಗಬಹುದು ಎಂದು ಹೇಳಿತ್ತು. ಇದು ಫಲಿತಾಂಶಕ್ಕೆ ಹೆಚ್ಚು ಕಡಿಮೆ  ಹೊಂದಿಕೊಂಡಿದೆ.

    MORE
    GALLERIES

  • 67

    Karnataka Election​ Result: ಕಾಂಗ್ರೆಸ್ ಗೆಲುವಿನ ಬಗ್ಗೆ ಸಮೀಕ್ಷೆಗಳು ಹತ್ತಾರು, ನಿಖರ ಭವಿಷ್ಯ ನುಡಿದಿದ್ದು ಯಾರು?

    ಟೈಮ್ಸ್​ ನೌ ಎಕ್ಸಿಟ್​ ಪೋಲ್ ಕೂಡ ಕಾಂಗ್ರೆಸ್​ ಕಾಂಗ್ರೆಸ್​ 106ರಿಂದ 120 ಕ್ಷೇತ್ರ ಸಿಗಬಹುದು ಎಂದು ಸಮೀಕ್ಷಾ ವರದಿಯಲ್ಲಿ ತಿಳಿಸಿತ್ತು. ಅದು ಬಿಜೆಪಿಗೆ 78ರಿಂದ 92, ಜೆಡಿಎಸ್​ಗೆ 20-26 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಹೇಳಿತ್ತು. ಇದೀಗ ಬಹುತೇಕ ಸಮೀಕ್ಷಾ ವರದಿ ನಿಜವಾಗಿದೆ.

    MORE
    GALLERIES

  • 77

    Karnataka Election​ Result: ಕಾಂಗ್ರೆಸ್ ಗೆಲುವಿನ ಬಗ್ಗೆ ಸಮೀಕ್ಷೆಗಳು ಹತ್ತಾರು, ನಿಖರ ಭವಿಷ್ಯ ನುಡಿದಿದ್ದು ಯಾರು?

    ಸದ್ಯ  ಬಹುತೇಕ ಎಲ್ಲಾ ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್‌ 136 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ 65 ಸ್ಥಾನಗಳಲ್ಲಿ ಜಯ ಕಂಡಿದ್ದು, ಜೆಡಿಎಸ್‌ಗೆ 19 ಸ್ಥಾನಗಳು ದಕ್ಕಿವೆ. ಉಳಿದ 4 ಸ್ಥಾನಗಳು ಇತರರ ಪಾಲಾಗಿವೆ.

    MORE
    GALLERIES