ತುಮಕೂರು ರಸ್ತೆ ಪೀಣ್ಯ ಮೇಲ್ಸೇತುವೆ ಕೇಬಲ‌್ ಬದಲಿಸಲು ಎನ್‌ಎಚ್‌ಎಐ ನಿರ್ಧಾರ ಮಾಡಿದೆ. ಬಾಗಿರುವ ಕೇಬಲ್‌ಗಳು ಮಾತ್ರವಲ್ಲದೇ ಎಲ್ಲಾ ಬದಲಾಯಿಸಲು ಎನ್‌ಎಚ್‌ಎಐ ಮುಂದಾಗಿದೆ.
2/ 7
ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ಸಲಹೆಯಂತೆ ಎರಡು ಹಂತಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಮೊದಲ ಹಂತದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪೂರ್ಣಗೊಳಿಸಿದೆ.
3/ 7
ಸೇತುವೆಯ ಪ್ರತಿ ಸೆಗ್ಮೆಂಟ್‌ನಲ್ಲಿ 10 ಕೇಬಲ್‌ಗಳಿದ್ದು, ಮೊದಲ ಹಂತದಲ್ಲಿ ಎರಡು ಕೇಬಲ್‌ಗಳನ್ನು ಹೆಚ್ಚುವರಿಯಾಗಿ ಅಳವಡಿಸಿ ಸೇತುವೆಯನ್ನು ಬಲಿಷ್ಠಗೊಳಿಸಲಾಗುತ್ತದೆ. ಈ ಕಾಮಗಾರಿ ನಾಲ್ಕು ತಿಂಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.
4/ 7
ಅಲ್ಲದೆ ಈಗಾಗಲೇ ಇರುವ ಕೇಬಲ್‌ಗಳು ಭವಿಷ್ಯದಲ್ಲಿ ತುಕ್ಕು ಹಿಡಿಯಬಹುದು ಎಂಬ ಕಾರಣಕ್ಕೆ ಬದಲಿಸಬೇಕು ಎಂಬ ಶಿಫಾರಸನ್ನು ಐಐಎಸ್‌ಸಿ ಮಾಡಿದೆ.
5/ 7
ಹೀಗಾಗಿ ಹೆಚ್ಚುವರಿ ಕೇಬಲ್ ಅಳವಡಿಕೆ ಮಾಡಲು ಎನ್‌ಎಚ್‌ಎಐ ಮುಂದಾಗಿದೆ. ನಂತರ ಸೇತುವೆ ಸದೃಢವಾದ ಬಳಿಕ ಬಸ್, ಲಾರಿ ಸೇರಿ ಎಲ್ಲಾ ವಾಹನಗಳ ಸಂಚಾರಕ್ಕೆ ಅನುವು ಮಾಡಲಾಗುತ್ತದೆ.
6/ 7
ಎರಡನೇ ಹಂತದಲ್ಲಿ ಎಲ್ಲಾ ಕೇಬಲ್ ಬದಲಿಸುವ ಕಾಮಗಾರಿ ಮುಂದುವರಿಯಲಿದೆ. ಈ ಕಾಮಗಾರಿ ಒಂದೂವರೆ ವರ್ಷ ಹಿಡಿಯುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
7/ 7
ಲಾರಿ, ಬಸ್ ಸೇರಿದಂತೆ ಭಾರೀ ಗಾತ್ರದ ವಾಹನಗಳು ಕೆಳ ರಸ್ತೆಯಲ್ಲಿ ಸಂಚರಿಸುವ ಕಾರಣ ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ ಹಾಗೂ ಎಂಟನೇ ಮೈಲಿ ಸಿಗ್ನಲ್ನಲ್ಲಿ ಟ್ರಾಫಿಕ್ ಉಂಟಾಗಲಿದೆ.
First published:
17
Peenya Flyover ಮೇಲೆ ಲಾರಿ, ಬಸ್ಗಳ ಸಂಚಾರ ಯಾವಾಗ?