ಈ ಮುನ್ನ ಈ ವರ್ಷ ಕಾರ್ತಿಕ ಮಾಸದಿಂದ ಜನವರಿವರೆಗೆ ಲೋಕ ಕಂಟಕವಿದೆ, ದೇಹ ಅಶಕ್ತಿಯಿಂದ ಬಿದ್ದು ಸಾಯುತ್ತವೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದರು. ಅದರಂತೆ ಬಾಂಬ್ಗಳು, ಭೂಕಂಪ, ಯುದ್ದಭೀತಿ, ಜನ ಜನಗಳ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚರಾಗುವುದು, ದೇಹ ಅಶಕ್ತಿಯಿಂದ ದಾರಿಯಲ್ಲಿ ಬಿದ್ದು ಸಾಯುವುದು. ದೇಹ ಅಂಗಾಂಗಗಳ ಮೇಲೆ ಪ್ರಭಾವ ಕಳೆದುಕೊಳ್ಳುತ್ತವೆ' ಎಂದು ಕೋಡಿಶ್ರೀ ನುಡಿದಿದ್ದರು.
ಕೆಲ ದಿನಗಳ ಹಿಂದಷ್ಟೇ ವ್ಯಕ್ತಿಯೊಬ್ಬರು ಸಾಯಿಬಾಬಾ ದರ್ಶನ ಪಡೆದ ಬಳಿಕ ದೇವಸ್ಥಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಹಾಗೆಯೇ ಸ್ನೇಹಿತರೊಂದಿಗೆ ರಸ್ತೆಯಲ್ಲಿ ಆರಾಮಾಗಿ ನಡೆದುಕೊಂಡು ಹೋಗುತ್ತಿದ್ದ ಯುವಕನೊಬ್ಬ ಉತ್ತರಪ್ರದೇಶದ ಮೀರತ್ನಲ್ಲಿ ಕುಸಿದು ಬಿದ್ದು ಸಾವಿಗೀಡಾದ್ದು, ಮೊನ್ನೆಯಷ್ಟೇ ಸುದ್ದಿಯಾಗಿತ್ತು. ನವರಾತ್ರಿಯ ವೇಳೆ ಗರ್ಬಾ ನೃತ್ಯ ಮಾಡುತ್ತಲೇ ಯುವಕನೋರ್ವ ಕುಸಿದು ಬಿದ್ದು ಸಾವು ಕಂಡ ಘಟನೆ ಗುಜರಾತ್ನಲ್ಲಿ ನಡೆದಿತ್ತು.