PHOTOS: ದಸರಾ ಸಂಭ್ರಮದ ಮೆರಗು ಹೆಚ್ಚಿಸಿದ ವಿಂಟೇಜ್ ಕಾರುಗಳ ರ‍್ಯಾಲಿ; ಇಲ್ಲಿದೆ ಒಂದು ಝಲಕ್
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿನ್ನೆಯಿಂದ ದಸರಾ ಸಂಭ್ರಮ ಮನೆ ಮಾಡಿದೆ. ದಸರಾ ಮಹೋತ್ಸವದ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಗರದಲ್ಲಿ ಜರುಗುತ್ತಿವೆ. ಪ್ರತಿವರ್ಷದಂತೆ ಈ ಬಾರಿಯೂ ಸಹ ಲಲಿತ್ ಮಹಲ್ ಮುಂಭಾಗ ವಿಂಟೇಜ್ ಕಾರುಗಳ ರ್ಯಾಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಚಾಲನೆ ನೀಡಿದರು. ಶ್ರೀಲಂಕಾ, ಮುಂಬೈ, ಬೆಂಗಳೂರು, ಗೋವಾ, ಊಟಿ, ನಾಗ್ಪುರ, ಚೆನ್ನೈ, ಅಹಮದಾಬಾದ್, ಪುಣೆ ಹಾಗೂ ಮೈಸೂರಿನ ಸುಮಾರು 50 ಹೆರಿಟೇಜ್ ಕಾರುಗಳು ಪಾರಂಪರಿಕ ಕಟ್ಟಡಗಳ ರಸ್ತೆಯಲ್ಲಿ ಸಂಚರಿಸಿದವು.