#PHOTOS: ವಿಧಾನಸೌಧದಿಂದ ಮೈಸೂರಿಗೆ ವಿಂಟೇಜ್ ಕಾರುಗಳ ರ‍್ಯಾಲಿ: ವಿದೇಶೀ ಅತಿಥಿಗಳಿಗೆ ಸಿಎಂ ಸನ್ಮಾನ
ವಿಧಾನಸೌಧದಿಂದ ಮೈಸೂರಿಗೆ ದೊಡ್ಡ ಮಟ್ಟದ ವಿಂಟೇಜ್ ಕಾರ್ ರ‍್ಯಾಲಿಗೆ ಚಾಲನೆ ನೀಡಲಾಗಿದೆ. ದೇಶ ವಿದೇಶದಿಂದ 22 ವಿಂಟೇಜ್ ಕಾರು, ಬೆಂಗಳೂರಿನ 16 ಕಾರು, ರಾಜ್ಯದ 12 ಕಾರುಗಳು ಒಟ್ಟು 50 ಕಾರುಗಳು ರ‍್ಯಾಲಿಯಲ್ಲಿ ಭಾಗಿಯಾಗಿವೆ. ವಿಂಟೇಜ್ ಕಾರು ಉಳಿವಿಗಾಗಿ ಆರಂಭಿಸಿರುವ ಈ ರ‍್ಯಾಲಿಗೆ ವಿಧಾನಸೌಧ ಮುಂಭಾದಲ್ಲಿ ಸಿಎಂ ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ. ಇಂದು ಮೈಸೂರಿಗೆ ತೆರಳಲಿರುವ ಈ ರ‍್ಯಾಲಿ ಮುಂದಿನ ಎರಡು ದಿನ ಮೈಸೂರಿನ ಪ್ರಮುಖ ಭಾಗದಲ್ಲಿ ಮೆರವಣಿಗೆ ನಡೆಸಲಿವೆ. ಸರ್ಕಾರದ ವತಿಯಿಂದ ಮೈಸೂರಿನಲ್ಲಿ ಆನೆಗಳ ಮೂಲಕ ಸ್ವಾಗತ ನಡೆಯಲಿದೆ. ಇಂಗ್ಲೆಂಡ್, ಫ್ಯಾನ್ಸ್, ಶ್ರೀಲಂಕಾದಿಂದ ಬಂದಿರುವ ವಿದೇಶಿ ಅತಿಥಿಗಳಿಗೆ ಮೈಸೂರು ಪೇಟ ತೊಡಿಸಿ ಸಿಎಂ ಕುಮಾರಸ್ವಾಮಿ ಸನ್ಮಾನ ಮಾಡಿದ್ದಾರೆ. ಸಿಎಂ ಕುಜಮಾರಸ್ವಾಮಿ ವಿಂಟೇಜ್ ಕಾರಿನಲ್ಲಿ ವಿಧಾನಸೌಧ ರೌಂಡ್ ಹಾಕಿದ್ದು, ಡಾ ರವಿಪ್ರಕಾಶ್ ಡ್ರೈವ್ ಮಾಡಿದ್ದರು.
(ಫೋಟೋ ಕೃಪೆ: ಅರುಣ್ ಶ್ರೀನಿವಾಸನ್)