Sparrow: ಗುಬ್ಬಚ್ಚಿಯ 11ನೇ ದಿನದ ಕಾರ್ಯ ನೆರವೇರಿಸಿದ ಗ್ರಾಮಸ್ಥರು; ಪೆಂಡಾಲ್ ಹಾಕಿ ಬಾಡೂಟ ಹಾಕಿಸಿದ್ರು
ಮನೆಯ ಸದಸ್ಯರೇ ಸತ್ತರೇ 11ನೇ ಕಾರ್ಯ, ಪುಣ್ಯತಿಥಿ ಮಾಡೋರು ಕಡಿಮೆ. ಇನ್ನೂ ಕೆಲವರು ಮನೆಯಲ್ಲಿ ಸಾಕಿದ ನಾಯಿ ಸತ್ತಾಗ ಅದರ ತಿಥಿ ಕಾರ್ಯವನ್ನು ಮಾಡಿ, ನೂರಾರು ಜನರಿಗೆ ಊಟ ಹಾಕಿಸುತ್ತಾರೆ. ಇನ್ನೂ ಗ್ರಾಮದಲ್ಲಿ ಮಂಗ ಸಾವನ್ನಪ್ಪಿದ್ರೆ ಅದಕ್ಕೂ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಆದ್ರೆ ಚಿಕ್ಕಬಳ್ಲಾಪುರ ಜಿಲ್ಲೆಯ ಗುಬ್ಬಚ್ಚಿಯೊಂದರ 11ನೇ ಕಾರ್ಯ ನೆರವೇರಿಸಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬಸವ ಪಟ್ಟಣದಲ್ಲಿ ಮೃತ ಗುಬ್ಬಚ್ಚಿಯ 11ನೇ ದಿನದ ಕಾರ್ಯ ಮಾಡಲಾಗಿದೆ. ಪೆಂಡಾಲ್ ಹಾಕಿ ಬಾಡೂಟ ಸಹ ಹಾಕಿಸಲಾಗಿದೆ.
2/ 7
ಜನವರಿ 26ರಂದು ಬಸವ ಪಟ್ಟಣದಲ್ಲಿ ಗುಬ್ಬಚ್ಚಿಯೊಂದು ಸಾವನ್ನಪ್ಪಿತ್ತು. ಗ್ರಾಮದಲ್ಲಿದ್ದ ಗುಬ್ಬಚ್ಚಿ, ಎಲ್ಲರಿಗೂ ಹತ್ತಿರವಾಗಿತ್ತು.
3/ 7
ಗುಬ್ಬಚ್ಚಿ ಸಾವಿನ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸಣ್ಣದಾಗಿ ಸಮಾಧಿ ಮಾಡಿದ್ದರು. ಇದೀಗ 11ನೇ ದಿನ ಕಾರ್ಯ ಸಹ ಮಾಡಿದ್ದಾರೆ.
4/ 7
ಗುಬ್ಬಚ್ಚಿ ಎಲ್ಲರ ಮನೆಗೆ ಹೋಗುತ್ತಿತ್ತು. ಗ್ರಾಮದಲ್ಲಿಯೇ ಇದ್ದಿದರಿಂದ ಜನರ ಸಂಪರ್ಕದಲ್ಲಿಯೇ ಗುಬ್ಬಚ್ಚಿ ಇರುತ್ತಿತ್ತು. ಹಾಗಾಗಿ ಗುಬ್ಬಚ್ಚಿಯನ್ನು ಗ್ರಾಮಸ್ಥರು ಇಷ್ಟಪಡುತ್ತಿದ್ದರು.
5/ 7
ಭಾನುವಾರ ಗುಬ್ಬಚ್ಚಿ ಸಾವನ್ನಪ್ಪಿ 11 ದಿನವಾದ ಹಿನ್ನೆಲೆ ಗ್ರಾಮದ ಹಿರಿಯರು ಸೇರಿ ಪೆಂಡಾಲ್ ಹಾಕಿ ಬಾಡೂಟ ಹಾಕಿಸಿದ್ದಾರೆ. ಮತ್ತೆ ಹುಟ್ಟಿ ಬಾ ಎಂದು ಬ್ಯಾನರ್ ಸಹ ಹಾಕಲಾಗಿತ್ತು.
6/ 7
ಸದ್ಯ ಗುಬ್ಬಚ್ಚಿಯ ಸಮಾಧಿ ಮತ್ತು 11ನೇ ದಿನ ಕಾರ್ಯದ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಗ್ರಾಮಸ್ಥರ ಪಕ್ಷಿ ಪ್ರೇಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
7/ 7
ಬೆಂಗಳೂರಿನಂತಹ ನಗರಗಳಲ್ಲಿ ಜನರು ನಾಯಿ ಮತ್ತು ಬೆಕ್ಕು ಸಾಕಿರುತ್ತಾರೆ. ಸಾಕು ಪ್ರಾಣಿಗಳನ್ನು ಮನೆಯ ಸದಸ್ಯರಂತೆಯೇ ನೋಡಿಕೊಳ್ಳುತ್ತಾರೆ. ಅವುಗಳನ್ನು ಸಾವನ್ನಪ್ಪಿದಾಗ ಎಲ್ಲ ವಿಧಿ ವಿಧಾನಗಳನ್ನು ನೆರವೇರಿಸುತ್ತಾರೆ.