Vijayapura: ಥೂ, ಮನುಷ್ಯರಾ ನೀವು? 60 ವರ್ಷದ ವೃದ್ದೆಯನ್ನು ಅತ್ಯಾಚಾರಗೈದ ಯುವಕರು

ವಿಜಯಪುರ: ಜಗತ್ತಿನಲ್ಲಿ ಎಂತೆಂತಹ ರಾಕ್ಷಸರು ಇದ್ದಾರೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಮನುಷ್ಯರಾದೋರಿಗೆ ಕನಿಷ್ಟ ಮಾನವೀಯತೆ, ಮನುಷ್ಯತ್ವ, ಮಾನವೀಯ ಗುಣಗಳು ಇಲ್ಲದೇ ಇದ್ದಾಗ ಎಂತಹ ಪಾಪಿ ಕೃತ್ಯಗಳಿಗೆ ಇಳಿಯಲು ಹೇಸೋದಿಲ್ಲ ಅನ್ನೋದಕ್ಕೆ ವಿಜಯಪುರದಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಈ ಹಿಂದೆ ನಾವು ದೂರದ ಬಿಹಾರದಲ್ಲೋ, ಉತ್ತರಪ್ರದೇಶದಲ್ಲೆಲ್ಲೋ ಇಂತಹ ರಾಕ್ಷಸೀ ಕೃತ್ಯಗಳನ್ನು ನೋಡುತ್ತಿದ್ದೆವು. ಆದರೆ ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿಯೂ ನಡೆಯುತ್ತಿದೆ.

First published:

  • 17

    Vijayapura: ಥೂ, ಮನುಷ್ಯರಾ ನೀವು? 60 ವರ್ಷದ ವೃದ್ದೆಯನ್ನು ಅತ್ಯಾಚಾರಗೈದ ಯುವಕರು

    ಹೌದು.. 60 ವರ್ಷದ ವೃದ್ದೆಯನ್ನೂ ಬಿಡದ ಕಾಮುಕರು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ ಅಮಾನವೀಯ ಕೃತ್ಯ ಗುಮ್ಮಟ ನಗರಿ ವಿಜಯಪುರದಲ್ಲಿ ನಡೆದಿದೆ.

    MORE
    GALLERIES

  • 27

    Vijayapura: ಥೂ, ಮನುಷ್ಯರಾ ನೀವು? 60 ವರ್ಷದ ವೃದ್ದೆಯನ್ನು ಅತ್ಯಾಚಾರಗೈದ ಯುವಕರು

    ಕಳೆದ ಫೆಬ್ರವರಿ 23ರ ರಾತ್ರಿ 9.30ರ ಸುಮಾರಿಗೆ ಈ ಕೃತ್ಯ ನಡೆದಿದ್ದು, 60 ವರ್ಷದ ಒಬ್ಬಂಟಿ ವೃದ್ಧೆ ತನ್ನ ಮನೆಗೆ ತೆರಳಲು ವಿಜಯಪುರ ವಾಟರ್ ಟ್ಯಾಂಕ್‌ ಬಳಿ ನಿಂತಿದ್ದರು. ಈ ವೇಳೆ ಆಟೋದಲ್ಲಿ ಬಂದ ಇಬ್ಬರು ಕಾಮುಕರು ಮನೆಗೆ ಬಿಡೋದಾಗಿ ಹೇಳಿ ಕರೆದೊಯ್ದು ಕೃತ್ಯ ಎಸಗಿದ್ದಾರೆ.

    MORE
    GALLERIES

  • 37

    Vijayapura: ಥೂ, ಮನುಷ್ಯರಾ ನೀವು? 60 ವರ್ಷದ ವೃದ್ದೆಯನ್ನು ಅತ್ಯಾಚಾರಗೈದ ಯುವಕರು

    ವಿಜಯಪುರ ನಗರದ ಜಂಡಾಕಟ್ಟಿ ನಿವಾಸಿ ಸದ್ದಾಂ ಶೇಖ್ ಹಾಗೂ ಬಸವ ನಗರ ನಿವಾಸಿ ರವಿ ಎಂಬ ರಾಕ್ಷಸರು ಮಾನಗೇಡಿ ಕೃತ್ಯ ಎಸಗಿದ್ದು, ಇಬ್ಬರು ಕಾಮುಕರನ್ನು ಕೂಡ ಪೊಲೀಸರು ಬಂಧನ ಮಾಡಿದ್ದಾರೆ.

    MORE
    GALLERIES

  • 47

    Vijayapura: ಥೂ, ಮನುಷ್ಯರಾ ನೀವು? 60 ವರ್ಷದ ವೃದ್ದೆಯನ್ನು ಅತ್ಯಾಚಾರಗೈದ ಯುವಕರು

    ವೃದ್ದೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೃತ್ಯ ಎಸಗಿದ ಕಾಮುಕರು ರಾತ್ರಿ 11 ಗಂಟೆಗೆ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ವೃದ್ಧೆ ನರಳಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

    MORE
    GALLERIES

  • 57

    Vijayapura: ಥೂ, ಮನುಷ್ಯರಾ ನೀವು? 60 ವರ್ಷದ ವೃದ್ದೆಯನ್ನು ಅತ್ಯಾಚಾರಗೈದ ಯುವಕರು

    ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ವೃದ್ಧೆಯನ್ನು ರಕ್ಷಿಸಿ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

    MORE
    GALLERIES

  • 67

    Vijayapura: ಥೂ, ಮನುಷ್ಯರಾ ನೀವು? 60 ವರ್ಷದ ವೃದ್ದೆಯನ್ನು ಅತ್ಯಾಚಾರಗೈದ ಯುವಕರು

    ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವೃದ್ದೆ ನೀಡಿದ ಮಾಹಿತಿ ಮತ್ತು ಮೊಬೈಲ್ ಟವರ್‌ ಲೊಕೇಶನ್ ಆಧರಿಸಿ ತನಿಖೆ ನಡೆಸಿದ್ದಾರೆ. ಅದರನ್ವಯ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

    MORE
    GALLERIES

  • 77

    Vijayapura: ಥೂ, ಮನುಷ್ಯರಾ ನೀವು? 60 ವರ್ಷದ ವೃದ್ದೆಯನ್ನು ಅತ್ಯಾಚಾರಗೈದ ಯುವಕರು

    ವೃದ್ದೆಯನ್ನೂ ಬಿಡದೆ ತಮ್ಮ ತೀಟೆಯನ್ನು ತೀರಿಸಿಕೊಂಡ ಆರೋಪಿಗಳಾದ ಜಂಡಾಕಟ್ಟಿ ನಿವಾಸಿ ಸದ್ದಾಂ ಶೇಖ್ ಹಾಗೂ ಬಸವ ನಗರ ನಿವಾಸಿ ರವಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳನ್ನು ನಮ್ಮ ಕೈಗೆ ಒಪ್ಪಿಸಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    MORE
    GALLERIES