ಒಂದು ಹೋರಿಯ ಬೆಲೆ ರೂ. 4 ಲಕ್ಷ. ಮತ್ತೊಂದು ಹೋರಿಯ ಬೆಲೆ ರೂ. 2 ಲಕ್ಷ. ಹೀಗೆ ಬೆಲೆ ಅಬ್ಬಾ ಎನ್ನುವಂತಿದ್ದರೂ ಜಾನುವಾರುಗಳು ಮಾರಾಟವಾಗುತ್ತಿಲ್ಲ. ಬಂದಿರುವ ಜಾನುವಾರುಗಳ ಸಂಖ್ಯೆಯೂ ಕಡಿಮೆ. ಇದು ಬಸವ ನಾಡಿನಲ್ಲಿ ನಡೆಯುವ ದಕ್ಷಿಣ ಭಾರತದ ದನಗಳ ಅತಿ ದೊಡ್ಡ ಜಾತ್ರೆಯಲ್ಲಿ ಕಂಡು ಬಂದ ವಾಸ್ತವಿಕ ಸ್ಥಿತಿ. ಈ ಜಾತ್ರೆ ಎಲ್ಲಿ ನಡೆಯಿತು? ಅಲ್ಲಿಯ ಮತ್ತೀತರ ವಿಷಯಗಳೇನು? ಎಂಬುದರ ಕುರಿತ ಒಂದು ವಿಶೇಷ ವರದಿ ಇಲ್ಲಿದೆ ನೋಡಿ....
ಕರ್ನಾಟಕವಷ್ಟೇ ಅಲ್ಲ, ನೆರೆಯ ಮಹಾರಾಷ್ಟ್ರ, ಆಂಧ್ರ ಪ್ರದೇಶದಿಂದಲೂ ಇಲ್ಲಿಗೆ ಜಾನುವಾರುಗಳು ಬಂದಿರುವುದು ವಿಶೇಷ. ಇಲ್ಲಿ ಒಂದು ಹೋರಿಯ ಬೆಲೆ ರೂ. 4 ಲಕ್ಷ ರೂ. ಮತ್ತೊಂದು ಎತ್ತಿನ ಬೆಲೆ 2.ರೂ ಲಕ್ಷ ಹೀಗೆ ಸಾಗುತ್ತದೆ. 4 ಲಕ್ಷ ರೂ. ಎಂದು ಹೇಳುತ್ತಿರುವ ರಾಜುಗೌಡ ಚಂದ್ರಶೇಖರ ಬಿರಾದಾರ ತಮ್ಮ ಹೋರಿಗಾಗಿ ಪ್ರತಿನಿತ್ಯ ರೂ. 300 ರಿಂದ 400 ರೂಪಾಯಿ ಖರ್ಚು ಮಾಡುತ್ತಾರಂತೆ.