Vijayapura: ವಾಹನ ಸವಾರರಿಗೆ ನೆರಳು ನೀಡಿದ ಮಹಾನಗರ ಪಾಲಿಕೆ: ಫೋಟೋಗಳಲ್ಲಿ ನೋಡಿ
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಳವಾಗಿದೆ. ಬಳ್ಳಾರಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಬಿಸಿಲಿನ ಪ್ರಮಾಣ 40 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಮನೆಯಲ್ಲಿದ್ರೂ ಬಿಸಿಲಿನ ಶಕೆ ಜನರನ್ನು ಹೈರಾಣು ಮಾಡುತ್ತಿದೆ.
ಇನ್ನೂ ದಿಚಕ್ರ ವಾಹನ ಸವಾರರ ಪರಿಸ್ಥಿತಿ ಕೇಳುವ ಹಾಗಿಲ್ಲ. ಬಿಸಿಲಿನಲ್ಲಿ ವಾಹನ ಸವಾರಿ ಮಾಡೋದು ಕಷ್ಟವಾಗಿದೆ. ಬಿಸಿಲಿನ ಜೊತೆಗೆ ಬಿಸಿ ಗಾಳಿ ಮೈ ಸುಡುತ್ತಿದೆ. ಸದ್ಯ ಬೈಕ್ ಸವಾರರು ರಸ್ತೆಗೆ ಇಳಿಯಲು ಹೆದರುತ್ತಿದ್ದಾರೆ.
2/ 8
ಟ್ರಾಫಿಕ್ ಸಿಗ್ನಲ್ ಗಳಲ್ಲಿ ಎರಡು ನಿಮಿಷ ಕಾಯಲು ವಾಹನ ಸವಾರರು ಹೆದರುವಂತಾಗಿದೆ. ಹಾಗಾಗಿ ವಾಹನ ಸವಾರರಿಗೆ ವಿಜಯಪುರ ಮಹಾನಗರ ಇಲಾಖೆ ಅವರಿಗೆ ನೆರಳು ನೀಡಿದೆ.
3/ 8
ವಾಹನ ಸವಾರರು ಕಡ್ಡಾಯವಾಗಿ ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕು. ಮಳೆ ಬಂದ್ರೆ ಹೇಗೆ ನಿಂತುಕೊಳ್ಳಬಹುದು. ಆದ್ರೆ ಬಿಸಿಲಿನ ಹೊಡೆತಕ್ಕೆ ಮೈಯೆಲ್ಲ ಸುಟ್ಟ ಅನುಭವವಾಗುತ್ತದೆ.
4/ 8
ಆದ್ದರಿಂದ ವಿಜಯಪುರ ಮಹಾನಗರ ಪಾಲಿಕೆ ಸಿಗ್ನಲ್ ಗಳಲ್ಲಿ ವಾಹನ ಸವಾರರಿಗಾಗಿಗೇ ಗ್ರೀನ್ ಟೆಂಟ್ ನಿರ್ಮಿಸಿದೆ. ಜೂನ್ ತಿಂಗಳ ಮೊದಲ ವಾರದವರೆಗೆ ಈ ವ್ಯವಸ್ಥೆ ಇರಲಿದೆ.
5/ 8
ಸಿಗ್ನಲ್ ನಲ್ಲಿ ಸಿಲುಕಿದ್ರೆ ವಾಹನ ಸವಾರರು ಇಲ್ಲಿ ಬಿಸಿಲಿನಿಂದ ರಕ್ಷಣೆ ಸಿಗಲಿದೆ. ಪಾಲಿಕೆಯ ಈ ಐಡಿಯಾಗೆ ನಗರವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
6/ 8
ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣ, ಗಾಂಧಿ ವೃತ್ತ, ಬಸವೇಶ್ವರ ವೃತ್ತ, ವಾಟರ್ ಟ್ಯಾಂಕ್ ಸಿಗ್ನಲ್ ಬಳಿ ಗ್ರೀನ್ ಟೆಂಟ್ ಗಳನ್ನು ಹಾಕಲಾಗಿದೆ.
7/ 8
ಸಿಗ್ನಲ್ ಇರೋ ರಸ್ತೆಯ ಎರಡೂ ಬದಿಗಳಲ್ಲಿ ಈ ಗ್ರೀನ್ ಟೆಂಟ್ ವ್ಯವಸ್ಥೆ ಮಾಡಲಾಗಿದೆ. ರಸ್ತೆ ಪಕ್ಕದಲ್ಲಿ ಕಬ್ಬಿಣದ ಕಂಬ ಮತ್ತು ಆಂಗಲ್ ಬಳಸಿ ಗ್ರೀನ್ ಟೆಂಹ್ ಹಾಕಲಾಗಿದೆ.
8/ 8
ಬಿಸಿಲಿನಲ್ಲಿ ಮನೆಯಿಂದ ಹೊರಗೆ ಬರಲು ಆಗುತ್ತಿಲ್ಲ. ಸಿಗ್ನಲ್ ನಲ್ಲಿ ಸಿಲುಕಿದ್ರೆ ಮೈಯೆಲ್ಲ ಬೆವರು ಬರುತ್ತಿತ್ತು. ಇದೀಗ ಸಿಗ್ನಲ್ ನಲ್ಲಿ ಸಿಲುಕಿದ್ರೆ ನೆರಳಿನಲ್ಲಿಯೇ ನಿಲ್ಲಬಹುದು. ಈ ವ್ಯವಸ್ಥೆ ಕಲ್ಪಿಸಿರುವ ಪಾಲಿಕೆಗೆ ಧನ್ಯವಾದಗಳು ಎಂದು ಬೈಕ್ ಸವಾರರೊಬ್ಬರು ಹೇಳುತ್ತಾರೆ.