ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ಮೊತ್ತ ಪಾವತಿಗೆ ನೀಡಿದ್ದ ಗಡುವನ್ನು ರಾಜ್ಯ ಸರ್ಕಾರ ವಿಸ್ತರಣೆ ಮಾಡಿದೆ. ರಿಯಾಯಿತಿ ದರದಲ್ಲಿ ದಂಡ ಪಾವತಿ ಮಾಡಲು ಮೊದಲು ಸರ್ಕಾರ ನೀಡಿದ್ದ 9 ದಿನಗಳ ಅವಧಿ ಶನಿವಾರಕ್ಕೆ ಅಂತ್ಯವಾಗಿತ್ತು. ಈ ವೇಳೆ ಹಲವರು ದಂಡ ಪಾವತಿ ಮಾಡುವ ದಿನಾಂಕವನ್ನು ವಿಸ್ತರಣೆ ಮಾಡಬೇಕ ಎಂದು ಒತ್ತಾಯ ಮಾಡಿದ್ದರು. (ಸಾಂದರ್ಭಿಕ ಚಿತ್ರ)
ಸದ್ಯ ಈ ಕುರಿತಂತೆ ಮಾಹಿತಿ ನೀಡಿರುವ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ, ಹೈಕೋರ್ಟ್ ನ್ಯಾಯಮೂರ್ತಿ ವೀರಪ್ಪ, ಸಂಚಾರಿ ಉಲ್ಲಂಘನಾ ದಂಡಕ್ಕೆ 50% ರಿಯಾಯಿತಿ ದರದಲ್ಲಿ ದಂಡ ಪಾವತಿ ಮಾಡುವ ಸಮಯವನ್ನು ವಿಸ್ತರಿಸಲಾಗಿದೆ. ಫೆಬ್ರವರಿ 14ರಿಂದ 28ರ ವರೆಗೂ ಎರಡು ವಾರಗಳ ಕಾಲ ದಂಡ ಪಾವತಿ ಮಾಡಲು ಕಾಲಾವಕಾಶ ನೀಡಲಾಗಿದೆ. ಕೆಎಸ್ಎಲ್ಎಸ್ಎ ನಾಳೆ ಅಧಿಕೃತವಾಗಿ ರೆಸಲ್ಯೂಷನ್ ಪಾಸ್ ಮಾಡಲಿದೆ. (ಸಾಂದರ್ಭಿಕ ಚಿತ್ರ)
ಯಾವ ದಿನ ಎಷ್ಟು ದಂಡ ಸಂಗ್ರಹ ಆಯ್ತು ಅನ್ನೋದನ್ನು ನೋಡುವುದಾದರೆ, ಫೆಬ್ರವರಿ 03 ರಂದು 2.24 ಲಕ್ಷ ಕೇಸ್ನಿಂದ 7 ಕೋಟಿ ಸಂಗ್ರಹ ಆಗಿತ್ತು. ಇನ್ನುಳಿದಂತೆ ಫೆ.04 ರಂದು 3 ಲಕ್ಷ ಕೇಸ್ ₹9 ಕೋಟಿ ದಂಡ, ಫೆ.05 ರಂದು 2.87 ಲಕ್ಷ ಕೇಸ್ ₹7.49 ಕೋಟಿ ದಂಡ, ಫೆ.06ಕ್ಕೆ 3.34 ಲಕ್ಷ ಕೇಸ್, ₹9.57 ಕೋಟಿ ದಂಡ, ಫೆ.07 ರಂದು 3.45 ಲಕ್ಷ ಕೇಸ್ ₹9.70 ಕೋಟಿ ದಂಡ, ಫೆ.08 ರಂದು 3.87 ಲಕ್ಷ ಕೇಸ್ ₹10 ಕೋಟಿ ದಂಡ, ಫೆ.09ರಂದು 5.51 ಲಕ್ಷ ಕೇಸ್ ₹14.64 ಕೋಟಿ ದಂಡ, ಫೆ.10ರಂದು 6.70 ಲಕ್ಷ ಕೇಸ್ನಿಂದ ₹17.61 ಕೋಟಿ, ಫೆ.11ರಂದು 9.45 ಲಕ್ಷ ಕೇಸ್ನಿಂದ ₹31.26 ಕೋಟಿ ದಂಡ ದಂಡ ಸಂಗ್ರಹವಾಗಿತ್ತು. (ಸಾಂದರ್ಭಿಕ ಚಿತ್ರ)