PHOTOS: ಕಸದ ತೊಟ್ಟಿಯಾಗಿದ್ದ ಉತ್ತರಹಳ್ಳಿ ರಸ್ತೆ ಬದಿ ಈಗ ಸ್ವಚ್ಛ-ಸುಂದರ; ಫೋಟೋಗಳು ಇಲ್ಲಿವೆ

ಸಿಲಿಕಾನ್ ಸಿಟಿ ಗಾರ್ಬೇಜ್​ ಸಿಟಿಯಾಗಿ ಬದಲಾಗುತ್ತಿದೆ ಎನ್ನುವ ಮಾತಿನಲ್ಲಿ ಅನುಮಾನವಿಲ್ಲ. ಏಕೆಂದರೆ ದಿನೇ ದಿನೇ ಉದ್ಯಾನನಗರಿ ಕೊಳಕಾಗುತ್ತಿದೆ. ಈ ಕೊಳಕು ನಗರವನ್ನು ಸ್ವಚ್ಛ ಮಾಡಿ ಸುಂದರವಾಗಿಸಲು ಬಿಬಿಎಂಪಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಜನರಿಗೆ ಅರಿವು ಮೂಡಿಸುತ್ತಿದೆ. ಈ ನಡುವೆ ಬಿಬಿಎಂಪಿಯು ನವೋದಯ ಚಾರಿಟಬಲ್​ ಟ್ರಸ್ಟ್​ ಮತ್ತು ಸುರನಾ ಕಾಲೇಜು ಎನ್​ಸಿಸಿ ತಂಡದೊಂದಿಗೆ ಸ್ವಚ್ಛತಾ ಅಭಿಯಾನ ಮಾಡಿದೆ. ಉತ್ತರಹಳ್ಳಿ 184 ವಾರ್ಡ್​ನ ಕಸದ ತೊಟ್ಟಿಯಾಗಿದ್ದ ಬೆಸ್ಟ್​ ಕ್ಲಬ್​ ರಸ್ತೆ ಬದಿಯನ್ನು ಸ್ವಚ್ಛ ಮಾಡಿ ಸುಂದರಗೊಳಿಸಿದ್ದಾರೆ. ಅಲ್ಲಿ ಹಾಕಲಾಗಿದ್ದ ಕಸವನ್ನು ವಿಲೇವಾರಿ ಮಾಡಿದ್ದಲ್ಲದೇ, ಪಾಳು ಬಿಟ್ಟರೆ ಮತ್ತೆ ಕಸ ಹಾಕುತ್ತಾರೆಂದು ಸುಂದರ ಚಿತ್ರಗಳನ್ನು ಬಿಡಿಸಿದ್ಧಾರೆ. ಅವು ಜನರಲ್ಲಿ ಅರಿವು ಮೂಡಿಸುವ ಚಿತ್ರಗಳು. ಇದು ಜಾಗೃತಿಯ ಜೊತೆಗೆ ನೋಡುಗರ ಕಣ್ಣಿಗೆ ಸುಂದರವಾಗಿ ಕಾಣಿಸುತ್ತಿವೆ.

First published: