Ladle Mashak Dargah: ಲಾಡ್ಲೇ ಮಶಾಕ್ ದರ್ಗಾದಲ್ಲಿಂದು ಉರುಸ್, ಶಿವರಾತ್ರಿ ಆಚರಣೆ

ಕಲಬುರಗಿ ಜಿಲ್ಲೆ ಆಳಂದ ಪಟ್ಟಣದಲ್ಲಿರುವ ಲಾಡ್ಲೇ ಮಶಾಕ್ ದರ್ಗಾದಲ್ಲಿಂದು ಉರುಸ್ ಮತ್ತು ಮಹಾಶಿವರಾತ್ರಿ ಆಚರಣೆ ಮಾಡಲಾಗುತ್ತದೆ. ಈ ಹಿನ್ನೆಲೆ ಆಳಂದ ಪಟ್ಟಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

First published:

  • 17

    Ladle Mashak Dargah: ಲಾಡ್ಲೇ ಮಶಾಕ್ ದರ್ಗಾದಲ್ಲಿಂದು ಉರುಸ್, ಶಿವರಾತ್ರಿ ಆಚರಣೆ

    ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಮುಸ್ಲಿಮರಿಗೆ ಪೂಜೆಗೆ ಸಮಯವಾಕಾಶ ಕಲ್ಪಿಸಿಕೊಡಲಾಗಿದೆ. ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆವರೆಗೆ ಶಿವಲಿಂಗ ಪೂಜೆಗೆ ಅವಕಾಶ ನೀಡಲಾಗಿದೆ.

    MORE
    GALLERIES

  • 27

    Ladle Mashak Dargah: ಲಾಡ್ಲೇ ಮಶಾಕ್ ದರ್ಗಾದಲ್ಲಿಂದು ಉರುಸ್, ಶಿವರಾತ್ರಿ ಆಚರಣೆ

    ಲಾಡ್ಲೇ ಮಶಾಕ್ ದರ್ಗಾದಲ್ಲಿರೋ ಶ್ರೀ ರಾಘವ ಚೈತನ್ಯ ಶಿವಲಿಂಗ ಇದೆ. ಬೆಳಗ್ಗೆ ಮತ್ತು ಮಧ್ಯಾಹ್ನ ಕೇವಲ 15 ಜನರಿಗೆ ಮಾತ್ರ ಪೂಜೆ ಸಲ್ಲಿಸಲು ಅವಕಾಶ ನೀಡಲಾಗಿದೆ.

    MORE
    GALLERIES

  • 37

    Ladle Mashak Dargah: ಲಾಡ್ಲೇ ಮಶಾಕ್ ದರ್ಗಾದಲ್ಲಿಂದು ಉರುಸ್, ಶಿವರಾತ್ರಿ ಆಚರಣೆ

    ಕಡಗಂಚಿ ಶ್ರೀಗಳ ನೇತೃತ್ವದಲ್ಲಿ ಶ್ರೀ ಸಿದ್ದಲಿಂಗ ಸ್ವಾಮೀಜಿ, ಕೇಂದ್ರ ಸಚಿವ ಭಗವಂತ್ ಖೂಬಾ, ಸಂಸದ ಡಾ ಉಮೇಶ್ ಜಾಧವ್ ಸೇರಿದಂತೆ ಜಿಲ್ಲೆಯ ಬಿಜೆಪಿ ಶಾಸಕರು ಪೂಜೆಯಲ್ಲಿ ಭಾಗಿಯಾಗಲಿದ್ದಾರೆ.

    MORE
    GALLERIES

  • 47

    Ladle Mashak Dargah: ಲಾಡ್ಲೇ ಮಶಾಕ್ ದರ್ಗಾದಲ್ಲಿಂದು ಉರುಸ್, ಶಿವರಾತ್ರಿ ಆಚರಣೆ

    ವಕ್ಫ್ ಟ್ರಿಬುನಲ್ ಕೋರ್ಟ್ ಆದೇಶ ಪ್ರಶ್ನಿಸಿ ಲಾಡ್ಲೇ ಮಶಾಕ್ ದರ್ಗಾ ಕಮಿಟಿ ಕಲಬುರಗಿ ಹೈಕೋರ್ಟ್ ಪೀಠ ಮೆಟ್ಟಿಲೇರಿತ್ತು. ಕಲಬುರಗಿ ಹೈಕೋರ್ಟ್ ಪೀಠ ವಕ್ಫ್ ಟ್ರಿಬುನಲ್ ಕೋರ್ಟ್ ಆದೇಶವನ್ನು ಎತ್ತಿ ಹಿಡಿದಿತ್ತು.

    MORE
    GALLERIES

  • 57

    Ladle Mashak Dargah: ಲಾಡ್ಲೇ ಮಶಾಕ್ ದರ್ಗಾದಲ್ಲಿಂದು ಉರುಸ್, ಶಿವರಾತ್ರಿ ಆಚರಣೆ

    ದರ್ಗಾದಲ್ಲಿನ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಹೈಕೋರ್ಟ್ ಅನುಮತಿ ನೀಡಿದ ಹಿನ್ನೆಲೆ ಇಂದು ಎರಡೂ ಸಮುದಾಯವರಿಗೆ ಅವಕಾಶ ನೀಡಲಾಗಿದೆ.

    MORE
    GALLERIES

  • 67

    Ladle Mashak Dargah: ಲಾಡ್ಲೇ ಮಶಾಕ್ ದರ್ಗಾದಲ್ಲಿಂದು ಉರುಸ್, ಶಿವರಾತ್ರಿ ಆಚರಣೆ

    ಅಹಿತಕರ ಘಟನೆ ಜರುಗದಂತೆ ಆಳಂದ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಓರ್ವ ಎಸ್​​ಪಿ, 9 ಡಿವೈಎಸ್​​ಪಿ, 73 ಪಿಎಸ್‌ಐ, 26 ಸಿಪಿಐ, 90 ಎಎಸ್‌ಐ, 11 KSRP ತುಕಡಿ, 4 QRT ತುಕಡಿ, 5 ಡಿಎಆರ್ ತುಕಡಿ ಸೇರಿದಂತೆ ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

    MORE
    GALLERIES

  • 77

    Ladle Mashak Dargah: ಲಾಡ್ಲೇ ಮಶಾಕ್ ದರ್ಗಾದಲ್ಲಿಂದು ಉರುಸ್, ಶಿವರಾತ್ರಿ ಆಚರಣೆ

    ದರ್ಗಾ ಸುತ್ತ ಅತ್ಯಾಧುನಿಕ ಸಿಸಿ ಕ್ಯಾಮೆರಾಗಳ ಆಳವಡಿಕೆ ಮಾಡಲಾಗಿದೆ. ಇತ್ತ ಡ್ರೋನ್ ಕ್ಯಾಮೆರಾಗಳ ಮೂಲಕ ಚಲನವಲನ ವೀಕ್ಷಣೆ ಮಾಡಲಾಗುತ್ತಿದೆ.

    MORE
    GALLERIES