ಹುಬ್ಬಳ್ಳಿಯ ಸಿದ್ಧಾರೂಡ ಮಠದ ಆವರಣದಲ್ಲಿ ಜನಪದ ಜಾತ್ರೆ ನಡೆಯಿತು. ಭವ್ಯ ವೇದಿಕೆಯಲ್ಲಿ ಪಾರಂಪರಿಕ ನೃತ್ಯ ಮತ್ತು ವಾಧ್ಯಘೋಷಗಳು ಮಾರ್ಧನಿಸಿದವು. ಜನಸಾಗರದ ನಡುವೆ ಜಾನಪದ ಕಲಾಲೋಕ ಅನಾವರಣಗೊಂಡಿತು. ಗಂಡುಮೆಟ್ಟಿದ ನಾಡಲ್ಲಿ ನಡೆದ ಜನಪದ ಕಲಾ ವೈಭವ ಮನಸೂರೆಗೊಂಡಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಜನಪದ ಜಾತ್ರೆ ಆಯೋಜಿಸಲಾಗಿತ್ತು. ಹುಬ್ಬಳ್ಳಿಯ ಜನತೆಗೆ ಜನಪದ ಸೊಗಡು ಸವಿಯಲು ಒಂದು ಸುವರ್ಣ ಅವಕಾಶ ಕಲ್ಪಿಸಲಾಗಿತ್ತು. ರಾಜ್ಯದ ವಿವಿಧಡೆಯಿಂದ ಆಗಮಿಸಿದ್ದ 30 ಕಲಾತಂಡಗಳು ತಮ್ಮ ವಿಶಿಷ್ಟ ಕಲಾಪ್ರಕಾರಗಳನ್ನು ವೇದಿಕೆಯ ಮೇಲೆ ಪ್ರಸ್ತುತ ಪಡಿಸಿದರು.
2/ 12
ಸಿದ್ಧಾರೂಢ ಮಠದ ಆವರಣದಲ್ಲಿ ನಿರ್ಮಿಸಿದ ಭವ್ಯ ವೇದಿಕೆಯಲ್ಲಿ ಜಾನಪದ ಕಲೆಗಳು ಅನಾವರಣಗೊಂಡವು
ಗಂಡುಮೆಟ್ಟಿದ ನಾಡಲ್ಲಿ ನಡೆದ ಜನಪದ ಕಲಾ ವೈಭವ ಮನಸೂರೆಗೊಂಡಿತು.
5/ 12
ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಜನಾಂಗ ಭಾರತದ ವೈವಿದ್ಯತೆಯಲ್ಲಿ ಬೆರತು ಹೋಗಿರುವ ಆಫ್ರಿಕನ್ ಮೂಲದ ಜನಾಂಗ. ತಮ್ಮ ಮೂಲ ಸಂಸ್ಕೃತಿಯ ಬೇರುಗಳು ಅವರಲ್ಲಿ ಉಳಿದು ಬಂದಿದೆ.
6/ 12
ದರ ಕುರುಹೆ ಡಮಾಮಿ ಹಾಗೂ ಪುಗಡಿ ನೃತ್ಯ. ಕಾರವಾರದಿಂದ ಆಗಮಿಸಿದ್ದ ಸುಮಿತ್ರ ಹಾಗೂ ಜಾನಕಿ ತಂಡಗಳು ಡಮಾಮಿ ಹಾಗೂ ಪುಗಡಿ ನೃತ್ಯಗಳನ್ನು ತಮ್ಮ ವಿಶಿಷ್ಟ ಹಾಡಿನೊಂದಿಗೆ ಪ್ರೇಕ್ಷಕರೆದರು ತೆರೆದಿಟ್ಟರು
7/ 12
ಮಹಿಳಾ ಜನಪದ ತಂಡಗಳ ಪ್ರದರ್ಶನ ಮನಸೂರೆಗೊಂಡಿತು. ಜನಪದ ಕಲೆಗಳನ್ನು ತಮ್ಮ ಒಡಲೊಳಗೆ ಇಟ್ಟುಕೊಂಡಿರುವ ಮಹಿಳಾ ಕಲಾವಿದರು ನೋಡುಗರು ಹುಬ್ಬೇರಿಸುವಂತೆ ಪ್ರದರ್ಶನ ನೀಡಿದರು.
ಚಾಮರಾಜನರದ ನೀಲಗಾರ ಪದ, ವಿಜಯಪುರದ ಗೀಗಿಪದ, ಬೆಳಗಾವಿಯ ಭಜನೆ ಪದ, ಬಾಗಕೋಟೆಯ ಚೌಡಕಿ ಪದ ಸೇರಿದಂತೆ ಧಾರವಾಡದ ಕಲಾವಿದರು ತತ್ವಪದ, ಸೋಬಾನೆ ಪದಗಳನ್ನು ಹಾಡಿದರು
10/ 12
ಧಾರವಾಡ ಭಾಗ್ಯಶ್ರೀ, ಅಭಿವ್ಯಕ್ತಿ, ಹುಬ್ಬಳ್ಳಿ ಸದಾನಂದ ಹಾಗೂ ರಾಧ ಕೃಷ್ಣ ತಂಡಗಳು ಹಲವು ಜನಪದ ಗೀತಗಳ ರೂಪಕವನ್ನು ಪ್ರಸ್ತತ ಪಡಿಸಿದರು.
11/ 12
ಇದರೊಂದಿಗೆ ಚಿತ್ರದುರ್ಗದ ಕಹಳೆ, ಮೈಸೂರಿನ ಕಂಸಾಳೆ ಹಾಗೂ ನಾಗರಿ, ಮಂಡ್ಯದ ತಮಟೆ, ಉಡುಪಿಯ ಚಂಡೆ ವಾದನ, ಧಾರವಾಡದ ಕರಡಿ ಮಜಲು ಹಾಗೂ ಜಗ್ಗಲಿಗೆಗಳ ಧ್ವನಿ ಜಾನಪದ ಜಾತ್ರೆಯಲ್ಲಿ ಮಾರ್ಧನಿಸಿತು
12/ 12
ಸಹಸ್ರಾರು ಜನರು ನಾಡಿನ ಜನಪದ ವೈಭವವನ್ನು ಕಣ್ತುಂಬಿಕೊಂಡರು. ದೇಸಿ ಸಂಸ್ಕೃತಿಯ ಶ್ರೀಮಂತಿಕೆಯನ್ನು ಮನದುಂಬಿ ಆಸ್ವಾದಿಸಿದ್ರು.