Shobha Karandlaje: ಅಪಘಾತದಲ್ಲಿ ಗಾಯಗೊಂಡವರಿಗೆ ತಮ್ಮ ಕಾರ್ ನೀಡಿ ಬೈಕ್ ನಲ್ಲಿ ತೆರಳಿದ ಕೇಂದ್ರ ಸಚಿವೆ ಕರಂದ್ಲಾಜೆ
ರಸ್ತೆಯಲ್ಲಿ ಅಪಘಾತ ಸಂಭವಿಸಿದರೆ ಕೆಲ ಜನರು ಮೊಬೈಲ್ ಗಳಲ್ಲಿ ವಿಡಿಯೋ ಮಾಡಲು ಮುಂದಾಗುತ್ತಾರೆ. ರಸ್ತೆಯಲ್ಲಿ ಹೋಗುತ್ತಿರುವವರು ನಮಗ್ಯಾಕೆ ಅಂತ ಹೋಗುತ್ತಾರೆ. ಕೇಂದ್ರ ಸಚಿವರೊಬ್ಬರು ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳಿಗೆ ತಮ್ಮ ಕಾರ್ ನೀಡಿ, ತಾವು ವ್ಯಕ್ತಿಯೊಬ್ಬರ ಬೈಕ್ ನಲ್ಲಿ ಲಿಫ್ಟ್ ತೆಗೆದುಕೊಂಡು ತಮ್ಮ ನಿಗಧಿತ ಸ್ಥಳ ತಲುಪಿದ್ದಾರೆ.
ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಅವರು ಬಿಜೆಪಿಯ ಕಾರ್ಯಕಾರಿಣಿಯ ಸಭೆಯಲ್ಲಿ ಭಾಗಿಯಾಗಲು ಹೊಸಪೇಟೆಗೆ ತೆರಳುತ್ತಿದ್ದರು.
2/ 8
ಸಚಿವರು ತೆರಳುತ್ತಿದ್ದ ಮಾರ್ಗ ಮಧ್ಯೆದಲ್ಲಿ ಎರಡು ಕಾರ್ ಗಳು ಅಪಘಾತಕ್ಕೆ ಒಳಗಾಗಿದ್ದವು. ಕೂಡಲೇ ತಮ್ಮ ವಾಹನ ನಿಲ್ಲಿಸಿದ ಶೋಭಾ ಕರಂದ್ಲಾಜೆ ಪರಿಸ್ಥಿತಿ ಮಾಹಿತಿ ಪಡೆದುಕೊಂಡರು.
3/ 8
ಅಂಬುಲೆನ್ಸ್ ಗಾಗಿ ಕಾಯುತ್ತಾ ಕುಳಿತುಕೊಳ್ಳದೇ ತಮ್ಮದೇ ವಾಹನದ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
4/ 8
ಇನ್ನು ತಮ್ಮ ಕಾರ್ಯಕ್ರಮಕ್ಕೆ ವಿಳಂಬವಾಗುತ್ತಿರೋದನ್ನು ಗಮನಿಸಿದ ಸಚಿವರು, ರಸ್ತೆಯಲ್ಲಿ ಬಂದ ಸವಾರನ ಬೈಕ್ ನಲ್ಲಿ ಲಿಫ್ಟ್ ಪಡೆದು ಹೊಸಪೇಟೆ ತಲುಪಿದ್ದಾರೆ.
5/ 8
ಅಪಘಾತ ನಡೆದ ಸ್ಥಳದಿಂದ ಹೊಸಪೇಟೆ 5 ಕಿಲೋ ಮೀಟರ್ ದೂರದಲ್ಲಿತ್ತು. ಹಾಗಾಗಿ ಬೈಕ್ ನಲ್ಲಿಯೇ ಬಿಜೆಪಿ ಕಾರ್ಯಕಾರಿಣಿ ಸಭೆಗೆ ತಲುಪಿದ್ದಾರೆ. ಕೇಂದ್ರ ಸಚಿವರು ಬೈಕ್ ನಲ್ಲಿ ಬಂದಿದ್ದನು ಕಂಡು ಒಂದು ಕ್ಷಣ ಜನರು ಶಾಕ್ ಆಗಿದ್ದರು.
6/ 8
ಸದ್ಯ ಶೋಭಾ ಕರಂದ್ಲಾಜೆ ಅವರು ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸುವ ದೃಶ್ಯ ಮತ್ತು ಬೈಕ್ ನಲ್ಲಿ ತೆರಳಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
7/ 8
ಸಾಮಾನ್ಯರಂತೆ ಬೈಕ್ ನಲ್ಲಿ ಬಂದ ಶೋಭಾ ಕರಂದ್ಲಾಜೆ ಅವರ ಸರಳತೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಇದರ ಜೊತೆಗೆ ಸಹಾಯಹಸ್ತ ಚಾಚಿರುವ ಅವರ ಮಾನವೀಯತೆ ಬಗ್ಗೆ ಸಾರ್ವಜನಿಕರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.
8/ 8
ಹೊಸಪೇಟೆಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.