ಉಡುಪಿ: ಹಣಕ್ಕಾಗಿ ಪೋಷಕರ ಬಳಿಯೇ ತಾನು ಕಿಡ್ನ್ಯಾಪ್ ಆಗಿದ್ದೇನೆ ಎಂದು ನಾಟಕವಾಡಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಅಪಹರಣ ಪ್ರಕರಣದ ತನಿಖೆ ನಡೆಸಿ ಯುವಕನ ಕಳ್ಳಾಟವನ್ನು ಪೊಲೀಸರು ಬಯಲು ಮಾಡಿದ್ದಾರೆ.
ಉಡುಪಿಯ 25 ವರ್ಷದ ವರುಣ್ ನಾಯಕ ಅಪಹರಣಕಾರನ ಸೋಗಿನಲ್ಲಿ ಗೋವಾದಿಂದ ತನ್ನ ಪೋಷಕರಿಗೆ ಕರೆ ಮಾಡಿ ಅವರಿಂದ 5 ಲಕ್ಷ ರೂ. ವಸೂಲಿ ಮಾಡಲು ಯತ್ನಿಸಿದ್ದಾನೆ. (ಸಾಂಕೇತಿಕ ಚಿತ್ರ)
2/ 7
ಜೂನ್ 22 ರಂದು ವರುಣ್ ತನ್ನ ಪೋಷಕರಿಗೆ ಉದ್ಯೋಗದ ಹುಡುಕಾಟದಲ್ಲಿ ಹೋಗುತ್ತಿದ್ದೇನೆ ಮತ್ತು ಶೀಘ್ರದಲ್ಲೇ ಹಿಂತಿರುಗುವುದಾಗಿ ತಿಳಿಸಿ ಮನೆಯಿಂದ ಹೋಗಿದ್ದನು.
3/ 7
ಆದರೆ, ಜೂನ್ 26ರಂದು ಅಪಹರಣಕಾರನ ಸೋಗಿನಲ್ಲಿ ತನ್ನ ತಾಯಿಗೆ ಕರೆ ಮಾಡಿ ವರುಣ್ನನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಹೇಳಿ 5 ಲಕ್ಷ ರೂ. ನೀಡುವಂತೆ ತಾಕೀತು ಮಾಡಿದ್ದ. ಅಲ್ಲದೇ ಪೊಲೀಸರಿಗೆ ಮಾಹಿತಿ ನೀಡದಂತೆ ಬೆದರಿಕೆ ಹಾಕಿದ್ದ. (ಸಾಂಕೇತಿಕ ಚಿತ್ರ)
4/ 7
ಆರಂಭದಲ್ಲಿ ಗಾಬರಿಗೊಂಡ ವರುಣ್ ತಂದೆ ಮಂಜುನಾಥ ಕೆ ವಿ ಅವರು ಉಡುಪಿ ನಗರ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. "ಅಪಹರಣಕಾರ" ಕರೆ ಮಾಡಿದ ಮೊಬೈಲ್ ಗೋವಾದಲ್ಲಿ ಸಕ್ರಿಯವಾಗಿದೆ ಎಂದು ನಂತರ ಪೊಲೀಸರಿಗೆ ತಿಳಿದುಬಂದಿದೆ. (ಸಾಂದರ್ಭಿಕ ಚಿತ್ರ)
5/ 7
ತಕ್ಷಣ ತಂಡವನ್ನು ಗೋವಾಕ್ಕೆ ರವಾನಿಸಲಾಯಿತು. ವರುಣ್ ಕ್ಯಾಸಿನೊದಲ್ಲಿ ಪಾರ್ಟಿ ಮಾಡುತ್ತಿದ್ದುದನ್ನು ಕಂಡು ಪೊಲೀಸರಿಗೆ ಆಶ್ಚರ್ಯವಾಯಿತು. ಆತನನ್ನು ತಮ್ಮ ವಶಕ್ಕೆ ಪಡೆದು ಉಡುಪಿಗೆ ಕರೆತಂದರು. (ಸಾಂದರ್ಭಿಕ ಚಿತ್ರ)
6/ 7
ಪೊಲೀಸರು ಔಪಚಾರಿಕವಾಗಿ ಆತನನ್ನು ಬಂಧಿಸಿದ್ದು, ವಿಚಾರಣೆ ವೇಳೆ ವರುಣ್ ಜೂಜಾಟದ ಚಟ ಹೊಂದಿದ್ದು, ಸ್ನೇಹಿತರ ಬಳಿ ಸಾಲ ಪಡೆದಿರುವುದು ಬೆಳಕಿಗೆ ಬಂದಿದೆ. ಹಣವನ್ನು ಮರುಪಾವತಿಸಲು ಅಪಹರಣದ ಕಥೆಯನ್ನು ಹೆಣದಿದ್ದಾನೆ. (ಸಾಂದರ್ಭಿಕ ಚಿತ್ರ)
7/ 7
ಬಳಿಕ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಪೊಲೀಸರು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.